ಇಂಡಿ

ಬೀಜ ಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

ಬೀಜ ಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ
ಇಂಡಿ: ಪಟ್ಟಣದ ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎ.ಪಿ.ಬಿರಾದಾರ ಮಾತನಾಡಿದರು.

ಸಹಾಯಕ ಕೃಷಿ ನಿರ್ದೇಶಕ ಜಾಗೃತದಳದ ಎ.ಪಿ. ಬಿರಾದಾರ ಎಚ್ಚರಿಕೆ: ಕೃಷಿ ಪರಿಕರ ಮಾರಾಟಗಾರರ ಸಭೆ 

ಇಂಡಿ: ಕೃಷಿ ಪರಿಕರ ಮಾರಾಟಗಾರರು ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವದೆಂದು ಸಹಾಯಕ ಕೃಷಿ ನಿರ್ದೇಶಕ ಜಾಗೃತದಳದ ಎ.ಪಿ. ಬಿರಾದಾರ ಹೇಳಿದರು. 

ಅವರು ಗುರುವಾರ ಪಟ್ಟಣದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು.  

ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಮಾರಾಟ ಮಾಡತ್ತಿದ್ದು. ಕಡ್ಡಾಯವಾಗಿ ರಸಗೊಬ್ಬರ ಅಂಗಡಿ ಮುಂಗಟ್ಟುಗಳ ಮಾಲಿಕರು ಸಕಾಲದಲ್ಲಿ ನಿಗದಿತ ದರದಲ್ಲಿ ವಿತರಣೆ ಮಾಡಬೇಕು. ಯಾವದೇ ಕಾರಣಕ್ಕೂ ಯಾವುದೇ ರೀತಿಯ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಗೋದಾಮುಗಳಲ್ಲಿ ಅನಧಿಕೃತವಾಗಿ  ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವದು, ಬಿತ್ತನೆ ಬೀಜದ ಚಿಲ್ಲರೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.  

ಕೃಷಿ ಸಹಾಯಕ ನಿರ್ದೇಶಕ ಇನಾಮದಾರ ಮಾತನಾಡಿ, ರೈತರಿಗೆ ಕಡಾಯವಾಗಿ ಖರೀದಿಸಿದ ಕೃಷಿ ಸಾಮಗ್ರಿಗಳಿಗೆ ರಶೀದಿ ನೀಡಲು ಹಾಗೂ ರಶೀದಿಯ ಮೇಲೆ ಸಂಬಂಧಪಟ್ಟ ರೈತರ ಸಹಿ ಪಡೆಯಬೇಕು, ಸರಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡಬೇಕು. ಗೌಪ್ಯವಾಗಿ ರಸಗೊಬ್ಬರಗಳನ್ನು ಸಂಗ್ರಹಿಸಿ, ತಾತ್ಕಾಲಿಕ ಅಭಾವ ಅಷ್ಟಿಸಿ ಹೆಚ್ಚಿನ ದರದಗಳಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡದಿರಲು ಎಚ್ಚರಿಕೆ ನಿಡಿದರು. ರೈತರಿಗೆ ಒತ್ತಾಯ ಪೂರ್ವಕವಾಗಿ ಒಂದೇ ಸಂಸ್ಥೆಯ ಬೀಜ ಮಾರಾಟ ಮಾಡದಿರಲು ರೈತರ ಆಯ್ಕೆಗೆ ಅನುಗುಣವಾಗಿ ಬಿತ್ತನೆ ಬೀಜ ಮಾರಾಟ ಮಾಟಲು ತಿಳಿಸಿದರು. ಅಂಗಡಿಕಾರರು ನಿಯಮಗಳನ್ನು ಅನುಸರಿಸದಿದ್ದಲ್ಲಿ ಕಾಯಿದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು. 

ಯೂರಿಯಾ ಗೊಬ್ಬರಕ್ಕೆ ಸರಕಾರ ಪ್ರತಿ 45 ಕೆಜಿ ಚೀಲಕ್ಕೆ ರೂ 800, ಮೊತ್ತದ ಸಹಾಯಧನ ಭರಿಸುತ್ತದೆ. ಡಿಎಪಿ ಗೊಬ್ಬರಕ್ಕೆ ಪ್ರತಿ 50 ಗ್ರಾಮ ಕೆಜಿ ಚೀಲಕ್ಕೆ 2500 ರೂ ಮತ್ತು 15 : 15:15 ಗೊಬ್ಬರ ಪ್ರತಿ 50 ಕೆಜಿ ಚೀಲಕ್ಕೆ 1425 ರೂ ಸಹಾಯಧನ ಭರಿಸುತ್ತದೆ ಎಂದರು.  

ಕೃಷಿ ಅಧಿಕಾರಿ ಬಸವರಾಜ ಬಿರಾದಾರ ಮಾತನಾಡಿ ರಸಗೊಬ್ಬರ ಕೇಂದ್ರ ಸರಕಾರವು 2020-21 ನೇ ಸಾಲಿನಲ್ಲಿ 127 ಲಕ್ಷ ಕೋಟಿ ರೂ, 2021-22 ನೇ ಸಾಲಿಗೆ 160 ಲಕ್ಷ ಕೋಟಿ ರೂ ಹಾಗೂ ಪ್ರಸಕ್ತ ಸಾಲಿನಲ್ಲಿ 200 ಲಕ್ಷ ಕೋಟಿ ರೂ ಸಹಾಯಧನ ಒದಗಿಸಿದೆ.  

ಇಂಡಿ ತಾಲೂಕಿನಲ್ಲಿ 125 ಕೃಷಿ ಪರಿಕರಗಳ ಮಾರಾಟಗಾರರು ಪರವಾನಿಗೆ ಪಡೆದಿದ್ದಾರೆ. ಅದರಲ್ಲಿ 100 ಖಾಸಗಿ ಮತ್ತು 25 ಸೋಸೈಟಿಗಳಿವೆ. ಒಟ್ಟು 1,40,000 ಹೇ ಕೃಷಿ ಮತ್ತು 10,000 ಹೇ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಇವೆ ಎಂದರು. 

ಶಂಕರ ಪವಾರ , ಕೃಷಿ ಪರಿಕರ ಮಾರಾಟ ಸಂಘದ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿದರು, 

ಶಾಂತು ಧನಶೆಟ್ಟಿ, ಮಹಾವೀರ ಧನಶೆಟ್ಟಿ, ಸುರೇಶ ನಿಗಡಿ, ರಾಜಕುಮಾರ ಬಿರಾದಾರ, ಬಿ.ಎಸ್‌. ಪಾಟೀಲ, ಎ.ಸಿ. ಧನಶೆಟ್ಟಿ, ಸಂಗನಬಸು ಬೇವನೂರ, ಇಂಡಿ ಮತ್ತು ಚಡಚಣದ ಮಾರಾಟಗಾರರಿದ್ದರು.  

ಸುದ್ದಿ ಓದಿ