ತಾಲೂಕ ಆಡಳಿತದಿಂದ ಸಾಧಕರ ಅಭಿನಂದನ ಸನ್ಮಾನ
ರಾಣೇಬೆನ್ನೂರ 31: ನಗರಸಭಾ ಕ್ರೀಡಾಂಗಣದಲ್ಲಿ ಜ.26ರಂದು ತಾಲೂಕ ಆಡಳಿತವು 74ನೇ ಗಣರಾಜ್ಯೋತ್ಸವ ಸಮಾರಂಭವು ಆಯೋಜಿಸಿದ್ದು. ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಗಣ್ಯರಾದ . ಅಪ್ಪಟ ದೇಶಪ್ರೇಮಿ, ಗೃಹರಕ್ಷಕ ದಳದ ಸೇವಕ ಜಗದೀಶ್ ನಿಂಗಪ್ಪ ಹಡಪದ, ಗೃಹರಕ್ಷಕ ದಳದ ತಾಲೂಕ ಘಟಕಾ ಧಿಕಾರಿ ಅಶೋಕ್ ಎಂ. ಕುಂಚೂರಕರ್, ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ ಸೇರಿದಂತೆ ಮತ್ತಿತರ ಗಣ್ಯರನ್ನು ಸಾರ್ವಜನಿಕವಾಗಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
ತಹಸೀಲ್ದಾರ್ ಶಂಕರ್ ಜಿ.ಎಸ್. ಶಾಸಕ ಅರುಣ್ ಕುಮಾರ್ ಪೂಜಾರ್, ನಗರಸಭಾ ಪೌರಾಯುಕ್ತ ಉದಯಕುಮಾರ್ ಬಿ.ಟಿ. ನಗರಸಭಾಧ್ಯಕ್ಷ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷ ಪ್ರಭಾವತಿ ತಿಳುವಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್ ಅಡಿವೆಪ್ಪನವರ್, ಮಾಜಿ ಅಧ್ಯಕ್ಷ ಶಿವಕುಮಾರ್ ನರಸಗೊಂಡರ, ಚೋಳಪ್ಪ ಕಸವಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವರ್ತಕರು, ಗಣ್ಯರು. ನಗರಸಭಾ ಸದಸ್ಯರು, ಉಪಸ್ಥಿತರಿದ್ದರು.