ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಧಾರವಾಡ 12: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾಯಿದಕ್ಷ ಕದಂ, ಲಿಖಿತ ಬಳ್ಳಾರಿ ಮತ್ತು ನಿಸರ್ಗ.ಎಂ ಇವರು 14ರ ವಯೋಮಿತಿಯಲ್ಲಿ ಜಿಮ್ನಾಸ್ಟಿಕ್ನಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಸಂಕೇತ್ ಮಾನೆ 17ರ ವಯೋಮಿತಿಯಲ್ಲಿ ಜಿಮ್ನಾಸ್ಟಿಕ್ನಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅಷ್ಟೇ ಅಲ್ಲದೆ ವೈಯಕ್ತಿಕ ಕರ್ನಾಟಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾನೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಆಯೋಜಿಸಿದ್ದ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ 2024-25 ರಲ್ಲಿ ಜೆ.ಎಸ್.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಕು. ಅನುಷ ಕುಂಬಾರ ಇವಳು ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ನಾಲ್ಕು ಬೆಳ್ಳಿ ಪದಕ ಒಂದು ಕಂಚು ಪಡೆದು ವೀರಗ್ರಣಿ ಪ್ರಶಸ್ತಿ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು, ಮಹಾವೀರ ಉಪಾಧ್ಯೆ, ಪ್ರಾಚಾರ್ಯರಾದ ರೇಣು ಪಾಟೀಲ್, ಮೈನಾವತಿ ದಿವಟೆ, ದೈಹಿಕ ಶಿಕ್ಷಕರಾದ ಜಿ.ಎಂ.ಕಲ್ಲೂರ್ ಹಾಗೂ ಶಿವಾನಂದ ಕುಂದಳ ಮತ್ತು ಜಿಮ್ನಾಸ್ಟಿಕ್ ಕೋಚ್ ಶೇಖರ್ ಮಾನೆ ಇವರ ಉಪಸ್ಥಿತಿಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.