ಇಂಡಿ

ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ: ಶಿಕ್ಷಕಿ ಸರೋಜಿನಿ

ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ: ಶಿಕ್ಷಕಿ ಸರೋಜಿನಿ


ಇಂಡಿ 12: ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸ್ವಾಮಿ ವಿವೇಕಾನಂದರು ಜಗತ್ತಿಗೇ ತೋರಿಸಿಕೊಟ್ಟವರು. ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಶಿಕ್ಷಕಿ ಸರೋಜಿನಿ ಝಳಕಿ (ಮಾವಿನಮರ) ಹೇಳಿದರು. 

ಅವರು ಬುಧವಾರ ತಾಲೂಕಿನ ಹಿರೇಬೇವನೂರ ಗ್ರಾಮದ ಎಂಪಿಎಸ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಅಂಗವಾಗಿ ಮಾತನಾಡಿದರು. 

ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ವಿವೇಕಾನಂದರು ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಣಿತರಾಗಿದ್ದಾರೆ ಎಂದರು. 

ಶಾಲಾ ಮುಖ್ಯ ಗುರುಗಳಾದ ಆರ್‌.ಸಿ ರಾಠೋಡ, ಯು.ಬಿ. ಬಜಂತ್ರಿ, ಎನ್‌.ಎಲ್‌. ಹಚಡದ, ಎಸ್‌.ಎಸ್‌. ನಿಪ್ಪಾಣಿ, ತಾರಾಸಿಂಗ್ ಆರ್‌. ಚವ್ಹಾಣ, ಎಸ್‌.ಆರ್‌. ಕಟ್ಟಿಮನಿ, ಎಸ್‌.ಎಲ್‌. ಖೇಡಗಿ, ಪಿ.ಎಸ್‌. ವಾಡಿ ಹಾಗೂ ಕೆ.ಜಿ.ಎಸ್‌. ಮುಖ್ಯಗುರುಗಳಾದ ಬಿ.ಎಸ್‌. ಭಾಸಗಿ ಉಪಸ್ಥಿತರಿದರು. ಶಾಲಾ ಮಕ್ಕಳು ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ನುಡಿದರು. 


ಸುದ್ದಿ ಓದಿ