ಇತರ ನಗರಗಳು

ಸರಕು ಸಾಗಾಣಿಕೆಯ ಎರಡು ರೈಲುಗಳಲ್ಲಿ ಆಕಸ್ಮಿಕ ಬೆಂಕಿ

ಸರಕು ಸಾಗಾಣಿಕೆಯ ಎರಡು ರೈಲುಗಳಲ್ಲಿ ಆಕಸ್ಮಿಕ ಬೆಂಕಿ

ಮುಂಬೈ 09: ಸರಕು ಸಾಗಾಣಿಕೆಯ ಎರಡು ರೈಲುಗಳಲ್ಲಿ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲವು ಕಾಲ ಆತಂಕ ಸೃಷ್ಟಿಯಾದ ಘಟನೆ ಮಹಾರಾಷ್ಟ್ರದಲ್ಲಿ ತಡರಾತ್ರಿ ನಡೆದಿದೆ. 

ಮಹಾರಾಷ್ಟ್ರದ ದಹನೊ ಜಿಲ್ಲೆಯ ಪಲ್ಗರ್ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಘಟನೆಯಿಂದಾಗಿ ಈ ಭಾಗದಲ್ಲಿ ಚಲಿಸಬೇಕಾಗಿದ್ದ ಸುಮಾರು 10ಕ್ಕೂ ಹೆಚ್ಚು ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. 

ವಿರಾರ್ ಮತ್ತು ದಹನೂ ನಡುವೆ ಸಂಚರಿಸಬೇಕಾಗಿದ್ದ ಪಶ್ಚಿಮ ವಲಯದ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಬೇಕಾಯಿತು. ಬೆಳಗ್ಗೆ 10 ಗಂಟೆ ನಂತರ ಸಹಜ ಸ್ಥಿತಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ರಾತ್ರಿ 10.35ರ ಸಂದರ್ಭದಲ್ಲಿ ದಹನೊ ಮತ್ತು ವೆಂಗಾನ್ ರೈಲ್ವೆ  ನಿಲ್ದಾಣದಲ್ಲಿ 15 ಮತ್ತು 16ನೇ ವೆಗನ್ ಸರಕು ಸಾಗಾಣಿಕೆಯ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. 

ತಕ್ಷಣವೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ  ಅಗ್ನಿಶಾಮಕ ಪಡೆದ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಸುಮರು ಅರ್ಧಗಂಟೆಗೂ ಹೆಚ್ಚು ಕಾಲ ರೈಲ್ವೆ ಪೊಲೀಸ್ ಪಡೆ, ಸಕರ್ಾರಿ ರೈಲ್ವೆ ಪೊಲೀಸ್ ಅಗ್ನಿಶಾಮಕ ಪಡೆ ಹಾಗು ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಲಾಗಿದೆ. 

ಘಟನೆ ಕುರಿತಂತೆ ಕೇಂದ್ರ ರೈಲ್ವೆ ಸಚಿವರು ವರದಿ ನೀಡುವಂತೆ ಸೂಚನೆ ಕೊಟ್ಟಿದ್ದಾರೆ.

ಸುದ್ದಿ ಓದಿ