'ಡಿಸೆಂಬರ್ 31ರೊಳಗೆ ಚಿಪ್ ಆಧಾರಿತ ಕ್ರೆಡಿಟ್, ಡೆಬಿಟ್ ಕಾಡರ್್ಗೆ ಬದಲಾಯಿಸಿಕೊಳ್ಳಿ
ನವದೆಹಲಿ 09: ನಿಮ್ಮ ಬ್ಯಾಂಕ್ ನಿಂದ ಹಳೆಯ ಕ್ರೆಡಿಟ್ ಮತ್ತು ಡೆಬಿಟ್ ಕಾಡರ್ುಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಿ ಎಂದು ಪದೇ ಪದೇ ಸಂದೇಶಗಳು ಮೊಬೈಲ್ ಗೆ ಬರುತ್ತಿರಬಹುದು. ಅದು ಅನವಶ್ಯಕ ಮೆಸೇಜ್ ಎಂದು ನೀವು ಅದನ್ನು ತಳ್ಳಿಹಾಕಿರಬಹುದು. ಆದರೆ ಇದು ಮುಖ್ಯವಾದ ಸಂದೇಶ. ನಿಮ್ಮಲ್ಲಿ ಚಿಪ್ ಆಧಾರಿತ ಕ್ರೆಡಿಟ್ ಅಥವಾ ಡೆಬಿಟ್ ಕಾಡರ್ುಗಳಿಲ್ಲದಿದ್ದರೆ ಅಥವಾ ಹಳೆಯ ಕಾಡರ್ುಗಳನ್ನು ಹೊಂದಿದ್ದರೆ ಅದು ಡಿಸೆಂಬರ್ 31ರವರೆಗೆ ಮಾತ್ರ ಮೌಲ್ಯವನ್ನು ಹೊಂದಿರುತ್ತದೆ. ಹಳೆಯ ಕಾಡರ್ುಗಳನ್ನು ಹೊಂದಿದ್ದವರು ಈ ವರ್ಷದ ಅಂತ್ಯದೊಳಗೆ ಹೊಸ ಕಾಡರ್ುಗಳಿಗೆ ಬದಲಾಯಿಸಿಕೊಳ್ಳಿ.
ಗ್ರಾಹಕರಿಗೆ ಚಿಪ್ ಆಧಾರಿತ ಹೊಸ ಕಾಡರ್ುಗಳನ್ನು ನೀಡುವಂತೆ ರಿಸವರ್್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಆನ್ ಲೈನ್ ವಂಚನೆಯಿಂದ ಗ್ರಾಹಕರ ಖಾತೆಗಳನ್ನು ರಕ್ಷಿಸಲು ಆರ್ ಬಿಐ ಈ ನಿಧರ್ಾರ ಮಾಡಿದೆ.
ಬ್ಯಾಂಕುಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾಡರ್ುಗಳ ಪೈರೆಸಿ ಇತ್ತೀಚೆಗೆ ಬಹಳ ಆತಂಕಕಾರಿ ವಿಷಯವಾಗಿದೆ. ಅದನ್ನು ನಿವಾರಿಸಲು ಆರ್ ಬಿಐ ಹೊಸ ಚಿಪ್ ಆಧಾರಿತ ಇಎಂವಿ ಕಾಡರ್ುಗಳನ್ನು ತಂದಿದೆ. ಅದು ಗ್ರಾಹಕರ ಹಣವನ್ನು ಆನ್ ಲೈನ್ ವಂಚನೆಗಾರರಿಂದ ರಕ್ಷಿಸುತ್ತದೆ. ಈ ಹೊಸ ನಿಯಮ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾಡರ್ುಗಳಿಗೆ ಅನ್ವಯವಾಗುತ್ತದೆ. ಒಂದು ವೇಳೆ ಕಾಡರ್ಿನ ಎಕ್ಪೈರಿ ಅವಧಿ ಡಿಸೆಂಬರ್ 31ಕ್ಕೆ ಮುಗಿಯುವುದಿದ್ದರೂ ಕೂಡ ಗ್ರಾಹಕರು ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ. ಕಳೆದ ಜೂನ್ ನಲ್ಲಿ ಲೆಕ್ಕ ಹಾಕಿರುವಂತೆ ನಮ್ಮ ದೇಶದಲ್ಲಿ 39 ಮಿಲಿಯನ್ ಗಿಂತಲೂ ಅಧಿಕ ಕ್ರೆಡಿಟ್ ಕಾಡರ್ುಗಳು ಮತ್ತು 944 ಮಿಲಿಯನ್ ಡೆಬಿಟ್ ಕಾಡರ್ುಗಳು ಸಕ್ರಿಯವಾಗಿವೆ.
ಇಎಂವಿ ಕಾಡರ್ುಗಳು ಹೇಗೆ ಸುರಕ್ಷಿತ?: ಈಗಿರುವ ಹಳೆಯ ಡೆಬಿಟ್, ಕ್ರೆಡಿಟ್ ಕಾಡರ್ುಗಳು ಮ್ಯಾಗ್ನೆಟಿಕ್ ಸ್ಪ್ಟೈಪ್ ಆಧಾರಿತವಾದದ್ದು. ಕಾಡರ್ುಗಳ ಹಿಂದಿರುವ ಕಪ್ಪು ಮ್ಯಾಗ್ನೆಟಿಕ್ ಸ್ಟ್ರೈಪ್ ನ್ನು ಮ್ಯಾಗ್ ಸ್ಟ್ರೈಪ್ ಎಂದು ಕರೆಯಲಾಗುತ್ತದೆ. ಅದರಲ್ಲಿ ಗ್ರಾಹಕರ ಖಾತೆ ವಿವರಗಳು ತುಂಬಿರುತ್ತದೆ. ಎಟಿಎಂ ಮೆಶಿನ್ ನಲ್ಲಿ ಕಾರ್ಡನ್ನು ಸ್ವೈಪ್ ಮಾಡಿದಾಗ ಖಾತೆಯ ಮಾಹಿತಿ ಪ್ರಕ್ರಿಯೆ ನಡೆದು ವಹಿವಾಟು ಏಪರ್ಾಡಾಗುತ್ತದೆ.
ಇಎಂವಿಯಲ್ಲಾದರೆ, ಕಾಡರ್ುಗಳಲ್ಲಿ ಚಿಪ್ ಇರುತ್ತದೆ. ಅದರಲ್ಲಿ ಗ್ರಾಹಕರ ಖಾತೆಯ ಸಂಪೂರ್ಣ ಮಾಹಿತಿ ಅಡಗಿರುತ್ತದೆ. ಎಟಿಎಂ ನಲ್ಲಿ ಕಾರ್ಡನ್ನು ಬಳಸಿದಾಗ ಅದು ಪಿನ್ ಸಂಖ್ಯೆಯನ್ನು ಕೇಳುತ್ತದೆ, ನಂತರವಷ್ಟೇ ಅಲ್ಲಿ ವಹಿವಾಟು ನಡೆಯುತ್ತದೆ. ಪಿನ್ ಸಂಖ್ಯೆಯಿಲ್ಲದೆ ಹಣ ತೆಗೆಯಲು ಸಾಧ್ಯವಿಲ್ಲ, ಹೀಗಾಗಿ ವಂಚಕರಿಂದ ಕಾಪಾಡಬಹುದು. ಕೆಲವು ಬ್ಯಾಂಕುಗಳು ಈ ಪಿನ್ ಸಂಖ್ಯೆಯಿಲ್ಲದೆ ಕಾಡರ್ುಗಳನ್ನು ನೀಡುತ್ತದೆ. ಅದರ ಬದಲಿಗೆ ಗ್ರಾಹಕರ ಸಹಿಯನ್ನು ನಿಖರತೆಗೆ ಪಡೆಯುತ್ತದೆ. ನಿಮ್ಮ ಡೆಬಿಟ್/ಕ್ರೆಡಿಟ್ ಕಾಡರ್ುಗಳ ಹಿಂಭಾಗ ಕಪ್ಪು ಗೆರೆಗಳು ಮಾತ್ರ ಇದ್ದರೆ ಮತ್ತು ಚಿನ್ನದ ಬಣ್ಣದ ಚಿಪ್ ಕಾಡರ್ಿನ ಮುಂಭಾಗ ಕೇಂದ್ರ ಭಾಗದಲ್ಲಿ ಅಥವಾ ಎಡಭಾಗದಲ್ಲಿದ್ದರೆ ಅದು ಮ್ಯಾಗ್ ಸ್ಟ್ರೈಪ್ ಗಳಾಗಿರುತ್ತದೆ. ಅದನ್ನು ಬ್ಯಾಂಕಿಗೆ ನೀಡಿ ಹೊಸ ಕಾಡರ್ು ಪಡೆಯಬೇಕು. ಹೊಸ ಕಾಡರ್ಿಗೆ ಅಜರ್ಿ ಸಲ್ಲಿಕೆ ಹೇಗೆ?: ಹೊಸ ಕಾಡರ್ು ಪಡೆಯಲು ಯಾವುದೇ ಶುಲ್ಕವಿಲ್ಲ. ನಿಮ್ಮ ಬ್ಯಾಂಕಿಗೆ ಪಾಸ್ ಬುಕ್ ನೊಂದಿಗೆ ಭೇಟಿ ನೀಡಿ. ಹೊಸ ಕಾಡರ್ು ಬೇಕೆಂಬ ಅಜರ್ಿಯೊಂದನ್ನು ತುಂಬಿ ಬ್ಯಾಂಕಿಗೆ ನೀಡಿ. ಆನ್ ಲೈನ್ ನಲ್ಲಿ ಕೂಡ ಹೊಸ ಚಿಪ್ ಆಧಾರಿತ ಡೆಬಿಟ್/ ಕ್ರೆಡಿಟ್ ಕಾಡರ್ಿಗೆ ಅಜರ್ಿ ಸಲ್ಲಿಸಬಹುದು.