ಮಲಫ್ರಭಾ ನದಿಗೆ ಹಾರಿ ಯುವಕ ಆತ್ಮಹತ್ಯೆ
ಬೈಲಹೊಂಗಲ 18: ಮಾನಸಿಕ ಆಸ್ವಸ್ಥನಾಗಿರುವ ಓರ್ವನು ಮಲಫ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಜರುಗಿದೆ.
ತಾಲೂಕಿನ ನೇಗಿನಹಾಳ ಗ್ರಾಮದ ಸೋಮಲಿಂಗಪ್ಪ ವೀರ್ಪ ಪಾಶ್ಚಾಪುರ (44) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನು ಕಳೆದ ಮೂರು ವರ್ಷಗಳಿಂದ ಮಾನಸಿಕವಾಗಿ ಬಳಲುತ್ತಿದ್ದನು. ಮೃತನು ಜುಲೈ ದಿ.16 ನೇಗಿನಹಾಳ ಗ್ರಾಮದಿಂದ ಲ್ಯಾಬಗೆ ಹೋಗಿ ಬರುತ್ತನೆಂದು ಹೇಳಿ ಹೋದವನು ಮರಳಿ ಬಂದಿರಲಿಲ್ಲ. ಮಂಗಳವಾರ ಮಲಫ್ರಭಾ ನದಿಯಲ್ಲಿ ಈತನ ಶವ ಪತ್ತೆಯಾಗಿದೆ. ಈ ಕುರಿತು ಆತನ ಪತ್ನಿ ದೀಪಾ ಪಾಶ್ಚಾಪುರ ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮೃತನಿಗೆ ಒರ್ವ ಪುತ್ರ, ಪುತ್ರಿ ಇದ್ದಾರೆ.