ಕೃತಕ ಕಾಲುಗಳ ಯಶಸ್ವಿ ಜೋಡಣಾ ಶಿಬಿರ
ರಾಣೇಬೆನ್ನೂರು 26: ಅಂಗವಿಕಲತೆಗೆ ಯಾವುದೇ ಪಾಪವೂ ಅಲ್ಲ,ಶಾಪವೂ ಅಲ್ಲ ಮೈಕಲ್ಯತೆಗೆ ಅನೇಕ ಕಾರಣಗಳು ಇವೆ. ಅಂಥವರು ಮನೋಸ್ಥೈರ್ಯ ಕಳೆದುಕೊಳ್ಳದೆ, ಸ್ವಾಭಿಮಾನದ ಬದುಕು ಸಾಗಿಸಲು, ಅತ್ಯಂತ ಸರಳವಾಗಿ ದೊರೆಯುವ ಕೃತಕ ಕಾಲುಗಳ ಮರು ಜೋಡಣೆ ಮಾಡಿಸಿಕೊಳ್ಳುವುದು ಅಗತ್ಯವಿದೆ ಎಂದು ಲಯನ್ಸ್ ವಲಯಾಧ್ಯಕ್ಷ, ಹುಬ್ಬಳ್ಳಿ ಮಹಾವೀರ್ ಲಿಂಬ ಕೇಂದ್ರದ ನಿರ್ದೇಶಕ ಡಾ : ನೀತೀಶ್ ಜೈನ್ ಹೇಳಿದರು.
ಬಡವರು, ದೀನ ದಲಿತರು, ಅಲ್ಪಸಂಖ್ಯಾತರು, ಜನಸಾಮಾನ್ಯರು ಕೃತಕ ಕಾಲುಗಳ ಜೋಡಣೆ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅಂತವರಿಗಾಗಿ, ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್ ಸಂಸ್ಥೆ ಸಮಾನ ಮನಸ್ಕರೊಂದಿಗೆ ಅಂದು 1995 ರಂದು ಅಂಗ ಹೀನತೆಯಿಂದ ಬಳಲುವವರಿಗಾಗಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಕಾಲು ಜೋಡಣಾ ಶಿಬಿರ ಆಯೋಜಿಸುತ್ತಲಿದೆ. ಕರ್ನಾಟಕ ವೈದ್ಯಕೀಯ ಕಾಲೇಜು ಆವರಣದಲ್ಲಿ, ಭಗವಾನ್ ಮಹಾವೀರ ಜೈಪುರ್ ಕೃತಕ ಕಾಲು ಕೇಂದ್ರವನ್ನು ಸ್ಥಾಪಿಸಿ, ಲಕ್ಷಾಂತರ ಜನರ ಬಾಳಿಗೆ ಬೆಳಕು ನೀಡಿದ ಹೆಮ್ಮೆಯ ಸಂಸ್ಥೆ ಇದಾಗಿದೆ ಎಂದರು.
ಶಿಬಿರದಲ್ಲಿ 43 ಫಲಾನುಭವಿಗಳಿಗೆ ತಮ್ಮ ಆರ್ಥಿಕ ಪ್ರಾಯೋಜಕತ್ವವನ್ನು ನೀಡಿದ ವರ್ತಕ, ಎಂ ಜಿ ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಿಕೇರಿ, ಬೆಂಗಳೂರಿನ ಉದ್ಯಮಿ ಬಸವರಾಜ ಕುರುಗೋಡಪ್ಪನವರ ಅವರನ್ನು, ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ಮಹೇಶ್ ಅಡಿವೆಪ್ಪನವರ್, ಮಾಜಿ ಅಧ್ಯಕ್ಷ, ಟಿ ವೀರಣ್ಣ, ಜಯಣ್ಣ ಮುಚುಡಿ, ಟಿ.ಸಿ.ಪಾಟೀಲ್, ಬಸವರಾಜ ಪಾಟೀಲ, ಬಸವರಾಜ ಬಡಿಗೇರ್, ತಾಂತ್ರಿಕ ತಜ್ಞರಾದ ಡಾ : ಎಮ್.ಎಚ್.ನಾಯಕರ್, ಡಾ : ಸುದರ್ಶನ್ ಗುಡಿ ಪ್ಯಾಟಿ, ಅಶೋಕ್ ಹೊಟ್ಟಿಗೌಡ್ರ, ಕೊಟ್ರೇಶಪ್ಪ ಎಮ್ಮಿ, ಕಿರಣ್ ಅಂತರವಳ್ಳಿ, ಶಿವಾನಂದ ಸಂಗಾಪುರ, ಪ್ರಭುಲಿಂಗಪ್ಪ ಹಲಗೇರಿ, ಜಿ.ಎಂ. ಬಿದರಿ, ಎಂ.ಎಂ. ಕೆಂಪಣ್ಣನವರ್, ಎಂ ಹೆಚ್ ಪಾಟೀಲ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು, ವರ್ತಕರು, ಶಿಕ್ಷಕರು ಮತ್ತು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.