ಇಂಡಿ

ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ

ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ

ಇಂಡಿ09:  ಬೆಂಗಳೂರಿನ ಜೆ.ಸಿ ನಗರದಲ್ಲಿರುವ ನಯನ ರಂಗಮಂದಿರ ಕನ್ನಡ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.  

ಇಂಡಿ ಕ್ಷೇತ್ರಸಮನ್ವಯಾಧಿಕಾರಿ ಸಿ.ಎಂ. ಬಂಡಗರ ಅವರ ಚೊಚ್ಚಲ ಕೃತಿ ಜಗವೆ ದೇವನ ದೇಗುಲ ಕೃತಿ ಸಹ ಆಯ್ಕೆಯಾಗಿರುವುದರಿಂದ ಪ್ರೋತ್ಸಾಹಧನ ಪ್ರಶಸ್ತಿ ಫಲಕ ಕೊಟ್ಟು ಪುರಸ್ಕರಿಸಲಾಯಿತು. 

ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಖ್ಯಾತ ಸಾಹಿತಿ ಡಾ.ಹಂಪಲ ನಾಗರಾಜಯ್ಯ ಮುಖ್ಯ ಅತಿಥಿಗಳಾಗಿ ಜಯಂತ ಕಾಯ್ಕಣಿ, ಕನ್ನಡ ಸಂಸ್ಕೃತಿ ಇಲಾಖೆ ಎಸ್‌. ರಂಗಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಎಂ.ಎಸ್ ನಂದೀಶ ಹಂಜೆ, ಕೆ.ಬಿ ಕಿರಣಸಿಂಗ್,ಕನ್ನಡ ಪುಸ್ತಕ ಪ್ರಾಧಿಕರದ ಪ್ರೋ.ಎ.ಬಿ ನಾವಡ, ಡಾ. ಆರ್‌.ಜಿ. ಗದ್ದಗಿಮಠ, ಪ್ರಕಾಶ ಕಂಬತ್ತಳ್ಳಿ, ಟಿ.ಎನ್‌. ಬಂಡಿಗೆ, ಡಾ.ಎಂ.ಪರುಷೋತ್ತಮಗೌಡ, ಸಂಗಮೇಶ ಪೂಜಾರ, ಅಶೋಕ ರಾಯ್ಕರ ಉಪಸ್ಥಿತರಿದ್ದರು.  

ಸುದ್ದಿ ಓದಿ