ಯರಗಟ್ಟಿ

ಮುರಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ

ಮುರಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ

ಕಿರಾಣಿ ಅಂಗಡಿ, ಮನೆ ಕಳ್ಳತನ ಮಾಡಿದ ಆರೋಪಿತರ ಬಂಧನ 

ಯರಗಟ್ಟಿ 02 ಸುಮಾರು ಒಂದು ತಿಂಗಳ ಹಿಂದೆ ಯರಗಟ್ಟಿ ಪಟ್ಟಣದಲ್ಲಿ ನಡೆದ ಕಿರಾಣಿ ಅಂಗಡಿ ಕಳ್ಳತನ ಮತ್ತು ಮನೆ ಕಳ್ಳತನ ಮಾಡಿದ ಇಬ್ಬರು ಆರೋಪಿತರಿಗೆ ಮುರಗೋಡ ಪೊಲೀಸರು ಬಂದಿಸಿ ಎರಡು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. 

ಆರೋಪಿತರ ಕಡೆಯಿಂದ ಕಳ್ಳತನಕ್ಕೆ ಸಂಬಂದಿಸಿದಂತೆ ಒಟ್ಟು 51,000 ರೂ. ಕಿಮ್ಮತ್ತಿನ ಕಿರಾಣಿ ಅಂಗಡಿಯ ಮಾಲನ್ನು ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ 2,00,000 ರೂ. ಕಿಮ್ಮತ್ತಿನ ಅಪೆ ಟಂಟಂ ವಾಹನವನ್ನು ಹಾಗೂ ಒಂದು ರಾಡನ್ನು ಹೀಗೆ ಒಟ್ಟು-2,51,000 ರೂ. ಕಿಮ್ಮತ್ತಿನ ಮಾಲನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ.  

ರಾಮದುರ್ಗ ಡಿ.ಎಸ್‌.ಪಿ ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ ಮುರಗೋಡ ಸಿಪಿಐ ಮೌನೇಶ್ವರ ಮಾಲಿ ಪಾಟೀಲ ಇವರ ನೇತೃತ್ವದಲ್ಲಿ ಮುರಗೋಡ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಕೆ. ಬಿ. ಅಲಗರಾವುತ, ವಿ. ಡಿ. ಸಕ್ರಿ, ಎಮ್‌. ಬಿ. ಸಣ್ಣನಾಯ್ಕ, ಎ. ವಿ. ಜೊತೆನ್ನವರ, ಬಿ. ಎಸ್‌. ಅಂತರಗಟ್ಟಿ, ಐ. ಎಸ್‌. ವಕ್ಕುಂದ, ಎಸ್‌. ಎಸ್‌. ಹುಂಬಿ ಮತ್ತು ಎಸ್‌. ಎಮ್‌. ಜವಳಿ ಇವರನ್ನೊಳಗೊಂಡ ತಂಡ 02 ಪ್ರಕರಣಗಳನ್ನು ಪತ್ತೆ ಮಾಡಿದೆ. 

ಎಸ್‌.ಪಿ. ಡಾ. ಸಂಜೀವ ಪಾಟೀಲ, ಹೇಚ್ಚುವರಿ ಎಸ್‌. ಪಿ. ಮಹಾನಿಂಗ ನಂದಗಾವಿ ಈ ತಂಡದಲ್ಲಿ ಇರುವ ಅಧಿಕಾರಿಗಳಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಈ ಕಾರ್ಯ ವೈಕಲ್ಯ ಪ್ರಶಂಸಣೆ ಮಾಡಿ ಶ್ಲಾಘಿಸಿ ಇದೇ ರೀತಿ ಕೆಲಸ ಮುಂದುವರಿಸಲು ತಿಳಿಸಿದ್ದಾರೆ ಹಗೂ ಇನ್ನುಳಿದ ಮೂರು ಪ್ರಕರಣಗಳನ್ನು ಶೀಘ್ರದಲ್ಲಿ ಪತ್ತೆಹಚ್ಚಲಾಗುವುದು ಎಂದು ಹೇಳಿದರು. 


ಸುದ್ದಿ ಓದಿ