ಅಥಣಿ

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಬಲ್ ಇಂಜನ್ ಸರಕಾರ ಬೇಕೆ ಬೇಕು

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಬಲ್ ಇಂಜನ್ ಸರಕಾರ ಬೇಕೆ ಬೇಕು

 ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡಕರಿ ಕರೆ  

ಅಥಣಿ 04: ಕರ್ನಾಟಕದಲ್ಲಿ ಒಳ್ಳೆಯ ಜನಪರ ಸರಕಾರ ರಚನೆಗಾಗಿ ಶ್ರೀಮಂತ ಪಾಟೀಲರಂತಹ ಜನಪರ ಶಾಸಕರಿಗೆ ಮೇ.10 ರಂದು ಮತ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ಕಾಗವಾಡ ಕ್ಷೇತ್ರದ ಮತದಾರರಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡಕರಿ ಮನವಿ ಮಾಡಿದರು. ಅವರು ಕಾಗವಾಡ ಮತಕ್ಷೇತ್ರದ ಉಗಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.  

 ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಬಲ್ ಇಂಜನ್ ಸರಕಾರ ಬೇಕೆ ಬೇಕು ಇದಕ್ಕಾಗಿ ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿ ಗೆ ಮತ ನೀಡುವುದು ಮತದಾರರ ಕರ್ತವ್ಯವಾಗಿದೆ. ದೇಶದಲ್ಲಿ, ರಾಜ್ಯದಲ್ಲಿ ಒಳ್ಳೆಯ ಜನಪರ ಸರಕಾರ ಅಧಿಕಾರದಲ್ಲಿ ಇರುವುದರಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಹಾಗೂ ಇನ್ನಿತರ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದ ಅವರು ಡಬಲ್ ಇಂಜನ್ ಸರಕಾರದ ಮೂಲಕ ಮತ್ತೊಮ್ನೆ ಗ್ರಾಮೀಣ ಭಾರತವನ್ನು ಸುಸಜ್ಜಿತವಾಗಿ ಕಟ್ಟಲು ಸಾಧ್ಯ ಎಂದರು.  

 ಕಬ್ಬು ಬೆಳೆಗೆ ಮತ್ತಷ್ಟು ವೈಜ್ಞಾನಿಕ ಬೆಲೆ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇಥೇನಾಲ್ ಪಾಲಸಿ ಜಾರಿಗೆ ತಂದಿದೆ. ಈ ಪಾಲಸಿ ಜಾರಿಗೊಳಿಸಿದ್ದರಿಂದ ರೈತರು ಕೇವಲ ಅನ್ನದಾತರಷ್ಟೇ ಅಲ್ಲ ಉದ್ಯಮಿಯಾಗಿಯೂ ಹೊರ ಹೊಮ್ಮಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಇಥೆನಾಲ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಮಾಡುವುದರಿಂದ ಪೆಟ್ರೋಲ್ ಬಳಕೆ ಕಡಿಮೆತಾಗುತ್ತದೆ ಈಗಾಗಲೇ ಪೆಟ್ರೋಲನಲ್ಲಿ ಶೆ.20 ರಷ್ಟು ಇಥೆನಾಲ್ ಕೂಡಿಸುವ ನಿರ್ಧಾರ ಕೇಂದ್ರ ಸರಕಾರ ಕೈಗೊಂಡಿದೆ ಎಂದ ಅವರು ಇಥೆನಾಲ್ ಬಳಕೆ ಹೆಚ್ಚು ಮಾಡುವುದರಿಂದ ಪೆಟ್ರೋಲ್ ದರವನ್ನು ಕೂಡ ನಿಯಂತ್ರಿಸಲು ಸಾಧ್ಯ ಎಂದರು. 

 ಸ್ಚಾತಂತ್ರ್ಯದ ನಂತರ ಗ್ರಾಮೀಣ ಪ್ರದೇಶದಿಂದ ಜನ ಉದ್ಯೋಗ ಅರಸಿ ಹೊಟ್ಟೆ ಪಾಡಿಗಾಗಿ ನಗರ, ಮಹಾನಗರಗಳಿಗೆ ವಲಸೆ ಹೋಗಿದ್ದಾರೆ ಇದರಿಂದ ಗ್ರಾಮ ಭಾರತಕ್ಕೆ ಹಿನ್ನಡೆಯಾಗುತ್ತಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರಕಾರ ಬದಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಸುಸಜ್ಜಿತ ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಜೊತೆಗೆ ಕೃಷಿಗೆ ಉತ್ತೇಜನ ನೀಡುವ ಮೂಲಕ ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಲಾಗುತ್ತಿದೆ ಎಂದರು.   

     ಪುಣೆ ಮಹಾನಗರದಿಂದ ಅಥಣಿ, ಕಾಗವಾಡ ಮೂಲಕ ಹಾಯ್ದು ಹೋಗುವ 50 ಸಾವಿರ ಕೋಟಿ ಅನುದಾನದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭಗೊಂಡಿದ್ದು, ಕೆಲವೇ ತಿಂಗಳುಗಳಲ್ಲಿ ಈ ಹೆದ್ದಾರಿ ಪೂರ್ಣ ಗೊಳ್ಳಲಿದೆ ಇದರಿಂದ ಯುವಕರಿಗೆ ಉದ್ಯೋಗ ಸೇರಿದಂತೆ ಇನ್ನಿತರ ಎಲ್ಲ ಅಭಿವೃದ್ಧಿ ಈ ಭಾಗದಲ್ಲಿ ಆಗಲಿದೆ ಎಂದ ಅವರು  3000 ಕೋಟಿಗೂ ಹೆಚ್ಚು ಅನುದಾನ ತರುವ ಮೂಲಕ ಜನಪರ ಕಾರ್ಯಗಳನ್ನು ಅನುಷ್ಠಾನ ಗೊಳಿಸಿದ ಶ್ರೀಮಂತ ಪಾಟೀಲರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.  

  ಶ್ರೀಮಂತ ಪಾಟೀಲ ಮಾತನಾಡಿ, ನಿತಿನ್ ಗಡಕರಿಯವರ ಕನಸಿನ ಕೂಸು ಪುಣೆದಿಂದ ಬೆಂಗಳೂರು ಎಕ್ಸಪ್ರೆಸ್ ರಾಷ್ಟ್ರೀಯ ಹೆದ್ದಾರಿ ಕಾಗವಾಡ ಹಾಗೂ ಅಥಣಿ ತಾಲೂಕಿನ ಹದ್ದಿನಲ್ಲಿ ಬರುವುದರಿಂದ ಈ ಭಾಗ ದೊಡ್ಡ ಪ್ರಮಾಣದಲ್ಲಿ ನಿಶ್ಚಿತವಾಗಿಯೂ ಅಭಿವೃದ್ಧಿಯಾಗುತ್ತದೆ ಎಂದ ಅವರು ಮುರಗುಂಡಿ ಗ್ರಾಮದಿಂದ ಶಿರಗುಪ್ಪಿವರೆಗಿನ ಚತುಷ್ಪದ ರಸ್ತೆ ಕಾಮಗಾರಿ ಮಂಜೂರು ಮಾಡಬೇಕು ಎಂದು ನಿತಿನ ಗಡಕರಿ ಇವರಲ್ಲಿ ಮನವಿ ಮಾಡಿದ ಪರಿಣಾಮ ಈ ರಸ್ತೆ ಕಾಮಗಾರಿಯೂ ಕೂಡ ಈಗಾಗಲೇ ಪ್ರಾರಂಭಗೊಂಡಿದೆ ಎಂದರು.  

     ಕಾಗವಾಡ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ನಾನು ಈ ಕ್ಷೇತ್ರದಲ್ಲಿ ನೀರಾವರಿ, ಕುಡಿಯುವ ನೀರು, ಶಿಕ್ಷಣ, ಕೃಷಿ, ವಿದ್ಯುತ್ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳ ಮೂಲಕ 3000 ಕೋಟಿಗೂ ಅಧಿಕ ಅನುದಾನದಲ್ಲಿ ಜನಪರ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಿರುವೆ ಎಂದ ಅವರು ಕಾಗವಾಡ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಿರುವೆ ಜೊತೆಗೆ ಎಲ್ಲ ಗ್ರಾಮೀಣ, ಸಂಪರ್ಕ, ತೋಟದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿರುವೆ ಎಂದರು.  

      ನನ್ನ ಅಭಿವೃದ್ಧಿ ಕಾಮಗಾರಿಳ ಅನುಷ್ಠಾನ ಗಮನಿಸಿದ ಕ್ಷೇತ್ರದ ಮತದಾರರು ಪ್ರಚಾರದ ಸಂದರ್ಭದಲ್ಲಿ ಸ್ವಯಂ ಪ್ರೇರಿತ ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಮತ ನೀಡುವ ಮೂಲಕ ಆಶೀರ್ವದಿಸಿ ಎಂದು ಮನವಿ ಮಾಡಿದರು.  ಬಿಜೆಪಿ ಧುರೀಣ ಅಭಯ ಅಕ್ಕಿವಾಟೆ ಮಾತನಾಡಿ, ಸರಳ, ಸಜ್ಜನ ರಾಜಕಾರಣಿ ಶ್ರೀಮಂತ ಪಾಟೀಲರಿಗೆ ಕಾಗವಾಡ ಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದ ಅವರು ಕಾಗವಾಡ ಕ್ಷೇತ್ರದಲ್ಲಿ ಎಲ್ಲ ಮುಖ್ಯ, ಸಂಪರ್ಕ ಹಾಗೂ ತೋಟದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಶ್ರೀಮಂತ ಪಾಟೀಲರು ಕಾಗವಾಡ ಮತಕ್ಷೇತ್ರದ ನಿತಿನ ಗಡಕರಿ ಇದ್ದಂತೆ ಎಂದು ಹೇಳಿದರು.  

ಬಿಜೆಪಿ ಧುರೀಣರಾದ ದುಂಡಪ್ಪ ಭೆಂಡವಾಡೆ, ಜಯಕುಮಾರ ರಾವಳಜಿ, ಶ್ರೀನಿವಾಸ ಪಾಟೀಲ, ಯೋಗೆಶ್ ಪಾಟೀಲ, ಸುಶಾಂತ ಪಾಟೀಲ,  ಶೀತಲ್ ಪಾಟೀಲ, ದಾದಾ ಶಿಂಧೆ, ಶಿವಾನಂದ ಪಾಟೀಲ, ಅಪ್ಪಾಸಾಹೇಬ ಅವತಾಡೆ, ನಿಂಗಪ್ಪ ಖೋಕಲೆ ಸೇರಿದಂತೆ 15 ಸಾವಿರಕ್ಕೂ ಹೆಚ್ವು ಮತದಾರ ಬಂಧುಗಳು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ