548-ಬಿ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ಸಲ್ಲಿಸಿದ: ರಮೇಶ ಜಿಗಜಿಣಗಿ
ಇಂಡಿ 09: ಇಂಡಿ ತಾಲ್ಲೂಕಿನ ಬಹುದಿನಗಳ ಕನಸು ಆಗಿರುವ ಮಾಹಾರಾಷ್ಟ್ರದ ಗಡಿ ಭಾಗದ ಮುರಮ್ -ಅಕ್ಕಲಕೋಟ -ಇಂಡಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ 548-ಬಿ ರಾಷ್ಟ್ರೀಯ ಭೂಮಿ ಪೂಜೆ ಸಮಾರಂಭ ಇಂದು ಇಂಡಿ ನಗರದ ಧನಶೆಟ್ಟಿ ಮಂಗಲ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ವಿಜಯಪೂರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂಡಿ ತಾಲ್ಲೂಕಿನ ಜನರ ಬೇಡಿಕೆಯಾಗಿರು ಅಕ್ಕಲಕೋಟ -ಇಂಡಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿವು ಸುಮಾರು 984 ಕೋಟಿ ವೆಚ್ಚದಲ್ಲಿ ಕೈಕೊಳ್ಳಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ನಾಗಣಸೂರ ಮಾಶ್ಯಾಳ ಕರಜಿಗಿ ಮಣ್ಣೂರ ಅಗರಖೇಡ ಇಂಡಿ ತಡವಲಗಾದ (ಜೋಡಗುಡಿ) ಅಥರ್ಗಾ ನಾಗಠಾಣ ಮಾರ್ಗವಾಗಿ ವಿಜಯಪೂರಕ್ಕೆ ಕೂಡುತ್ತದೆ.ಈ ಕಾಮಗಾರಿ ಎರಡೂ ವರ್ಷಗಳಲ್ಲಿ ಪೂರ್ಣಗೊಳಲಿದೆ ಎಂದು ಹೇಳಿದರು.ನನಗೆ ರಾಜಕೀಯವಾಗಿ ಬೆಳೆಯಲು ಇಂಡಿ ತಾಲ್ಲೂಕಿನ ಜನರು ಸದಾ ಸ್ಪೂರ್ತಿಯಾಗಿ ನನಗೆ ತುಂಬಾ ಬೆಂಬಲ ನೀಡಿತ್ತಾ ಬಂದಿದ್ದಾರೆ ಎಂದು ಹೇಳಿದರು.ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದೆ.ಆದರೆ ಸಮಯ ಬಂದರೆ ನಾನು ರಾಜಕೀಯವಾಗಿ ಮುಂದುವರಿವ ಕಾಲ ಬಂದರು ಆಚಾರ್ಯವಿಲ್ಲ ಎಂದು ಹೇಳಿದ ಅವರು ನನ್ನದು ಒಂದು ಕನಸಿದೆ ಆ ಕನಸು ನನಸು ಆದರು ಆಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಅರುಣ ಶಹಾಪುರ ಮಾಜಿ ಶಾಸಕರಾದ ರಮೇಶ ಬೊಸನೂರ, ಚಂದ್ರಶೇಖರ ಕವಟಿಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿಗಳಾದ ಕಾಸುಗೌಡ ಬಿರಾದಾರ, ಸಂಜು ಐಹೊಳೆ,ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ ಡಿ ಪಾಟೀಲ ಸೇರಿದಂತೆ ಅನೇಕ ಮಾತನಾಡಿದರು
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ (ಡೋಮನಾಳ), ಶ್ರೀಪತಿಗೌಡ ಬಿರಾದಾರ ವೀರಾಜ ಪಾಟೀಲ ಶ್ರೀಶೈಲಗೌಡ ಬಿರಾದಾರ ಶೀಲವಂತ ಉಮರಾಣಿ ಮಲ್ಲಿಕಾರ್ಜುನ ಕಿವಡೆ ಬಿ ಎಸ್ ಪಾಟೀಲ ಉಮೇಶ ಕೊಳೆಕರ ಅಣ್ಣಪ್ಪಸಾಹುಕಾರ ಖೈನೂರ ಅನೀಲ ಜಮಾದಾರ ಶ್ರೀಶೈಲಗೌಡ ಪಾಟೀಲ ಸುನಂದಾ ವಾಲಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.