ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ವೀರಭದ್ರ ಸ್ವಾಮಿಯ ಶರಭಿ ಗುಗ್ಗಳ ಮಹೋತ್ಸವ

ರಾಣೇಬೆನ್ನೂರಲ್ಲಿ ವೀರಭದ್ರ ಸ್ವಾಮಿಯ ಶರಭಿ ಗುಗ್ಗಳ ಮಹೋತ್ಸವ

ರಾಣೇಬೆನ್ನೂರು 10:  ಧಾನ,ಧರ್ಮ ಪರೋಪಕಾರ ಇವುಗಳು ಮಾನವನಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಸಾಗಬೇಕು ಇದರಿಂದ ಮಾತ್ರ ಮನುಷ್ಯ ಜೀವನ ಸಾರ್ಥಕತೆ ಪಡೆಯುವುದು ಎಂದು ಹೊನ್ನಾಳಿ ಹಿರೇಕಲ್ ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ನುಡಿದರು. ಅವರು ಮಂಗಳವಾರ ಇಲ್ಲಿನ ವಾಗೀಶ  ನಗರದ ವೀರಭದ್ರೇಶ್ವರ ದೇವಸ್ಥಾನ ಸಮಿತಿಯು ಆಯೋಜಿಸಿದ್ದ, ವಾರ್ಷಿಕ ಸಂಪ್ರದಾಯದ ವೀರಭದ್ರ ಸ್ವಾಮಿಯ " ಶರಬಿ ಗುಗ್ಗಳ" ಮಹೋತ್ಸವ ಧಾಮರ್ಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. 

ಭಾರತೀಯರು ವೇದ ಇತಿಹಾಸ ಕಾಲಗಳಿಂದಲೂ ಸಂಸ್ಕಾರವಂತರು, ಸಂಸ್ಕಾರದಿಂದಲೇ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ ಜಾತ್ರೆ ಉತ್ಸವ ಹಬ್ಬ ಹರಿದಿನಗಳು,  ಮಾನಸಿಕ ನೆಮ್ಮದಿಯ ಜೊತೆಗೆ ಧರ್ಮ ಜಾಗೃತಿಯನ್ನು ಮಾಡುತ್ತಲಿವೆ ಎಂದರು. ಪ್ರತಿ ವರ್ಷವೂ ಇಲ್ಲಿನ ವರ್ತಕ ಸಮುದಾಯಮತ್ತು ಭಕ್ತರು ಸೇರಿ ಇಂತಹ ಧರ್ಮ ಪರಂಪರೆಯ ಜಾಗೃತಿಯನ್ನುಂಟು ಮಾಡುವ ಸುರಭಿ ಗುಗ್ಗಳ. ಆಚರಿಸಿಕೊಂಡು ಬರುತ್ತಿರುವುದು ಶ್ರೀಗಳಿಗೆ ಸಂತಸ ತಂದಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ , ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಜಣ್ಣ ಮೋಟಗಿ ಅವರು ಸ್ವಾಗತಿಸಿದರು. ವರ್ತಕ  ಬಾಬಣ್ಣ ಐರಣಿ ಶೆಟ್ಟರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್ ಅಡಿವೆಪ್ಪನವರ್, ನಗರ ಸಭೆ ಉಪಾಧ್ಯಕ್ಷ ಪ್ರಭಾವತಿ ತಿಳುವಳ್ಳಿ,ಸದಸ್ಯ ಮಣಿ ಪವಾರ್, ಸಮಿತಿಯ ಮಾಜಿ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ವರ್ತಕ ಜಿ.ಜಿ. ಹೊಟ್ಟಿಗೌಡ್ರ, ವರ್ತಕ ಮಲ್ಲೇಶಪ್ಪ ಅರಕೇರಿ, ಡಾ: ಬಿ. ಎಸ್.ಕೇಲಗಾರ, ಪ್ರಕಾಶ್ ಜಂಬಿಗಿ,  ವೀರಣ್ಣ ಜಂಬಿಗಿ, ಸೇರಿದಂತೆ ಸಮಿತಿಯ ಮತ್ತಿತರ ಪದಾಧಿಕಾರಿಗಳು, ವರ್ತಕರು ಗಣ್ಯರು, ಯುವಕರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ  ಸುರಭಿ ಗುಗ್ಗಳ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಸಭಾ ವೇದಿಕೆಗೆ ಸಾಂಗತ್ಯಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಲಿಲಾವಿನಲ್ಲಿ ಧ್ವಜ ಪಡೆದ ಬಸವರಾಜ ಕರ್ಜಗಿ ಮಠ, ವಿನೋದ ಜಂಬಿಗಿ ಮತ್ತಿತರರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಕಸ್ತೂರಿ ಪಾಟೀಲ್ ನಿರೂಪಿಸಿ, ವಂದಿಸಿದರು. ಹಾಲ ಸಿದ್ದಯ್ಯ ಶಾಸ್ತ್ರಿಜಿ ಅವರು ಪೂಜಾ ಸಂಸ್ಕಾರ ಕಾರ್ಯವನ್ನು ನೆರವೇರಿಸಿದರು. ಮಹಾಪ್ರಸಾದ ವಿತರಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಸುದ್ದಿ ಓದಿ