ಬೈಲಹೊಂಗಲ

ಹಿರಿಯ ನಾಗರಿಕರನ್ನು ಗೌರವದಿಂದ ಕಾಣಿರಿ : ಡಾ.ಮಹೇಶ್ವರಿ

ಹಿರಿಯ ನಾಗರಿಕರನ್ನು ಗೌರವದಿಂದ ಕಾಣಿರಿ : ಡಾ.ಮಹೇಶ್ವರಿ

  ಬೈಲಹೊಂಗಲ: ಹಿರಿಯ ನಾಗರಿಕರು ಇಳಿ ವಯಸ್ಸಿನಲ್ಲಿ ಕ್ರೀಯಾಶೀಲರಾಗಿ ಉತ್ಸಾಹದಿಂದ ಜೀವನ ನಡೆಸಬೇಕೆಂದು ಧಾರವಾಡದ ಡಾ.ಮಹೇಶ್ವರಿ ಹಿರೇಮಠ ಹೇಳಿದರು.  ಪಟ್ಟಣದ ಪತ್ರಿಬಸವೇಶ್ವರ ಬಡಾವಣೆಯ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ತಾಲೂಕಾ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ವೈಧ್ಯರ ದಿನಾಚಾರಣೆ ಹಾಗೂ ಶರಣರ ಜೀವನ ಕ್ರಮ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡಿ, ಹಿರಿಯ ನಾಗರಿಕರನ್ನು ಯುವ ಸಮೂಹ ಗೌರವದಿಂದ ಕಾಣಬೇಕೆಂದರಲ್ಲದೇ ಅವರ ಸಾಧನೆಗೆ ಸಹಕರಿಸಬೇಕೆಂದರು.   ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ತಾಲೂಕಾಧ್ಯಕ್ಷೆ ಅನ್ನಪೂರ್ಣಾ ಕನೋಜ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶರಣೆ ಉಮಾದೇವಿ ಹತ್ತರಕಿ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ, ಸಾವಿತ್ರಿ ಜಂಬಗಿ, ಶಾಂತವ್ವ ಅಲ್ಲಯ್ಯನವರಮಠ, ನೀಲವ್ವ ಹಿರೇಮಠ, ಕಲಾವತಿ ಕಡಕೋಳ, ಸುಮಿತ್ರಾ ನರಗುಂದ, ಯಮುನಾ ಭಜಂತ್ರಿ, ಪ್ರೇಮಲತಾ ಬೋರಣ್ಣವರ, ವಿಮಲಾ ದೊಡಗೌಡರ, ನೀಲಮ್ಮ ಮಠದ, ಗೀತಾದೇವಿ ಬೇವಿನಗಿಡದ ಮುಂತಾದವರು ಉಪಸ್ಥಿತರಿದ್ದರು.   ಶಿಕ್ಷಕಿ ಗೌರಾದೇವಿ ತಾಳಿಕೋಟಿಮಠ ಸ್ವಾಗತಿಸಿದರು. ಸಾವಿತ್ರಿ ಹೊತ್ತಗಿಮಠ ನಿರೂಪಿಸಿದರು. ಮಹಾದೇವಿ ಮಡಿವಾಳರ ವಂದಿಸಿದರು.  ಪೋಟೋ ಶೀರ್ಷಿಕೆ- ಬೈಲಹೊಂಗಲ ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಸಾಧಕರನ್ನು ಸತ್ಕರಿಸಲಾಯಿತು.   

ಸುದ್ದಿ ಓದಿ