ಟಿಪ್ಪರ್ ಕಳುವು:ವ್ಯಕ್ತಿ ಬಂಧನ
ಬೈಲಹೊಂಗಲ: ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ಕಳ್ಳತನವಾದ ಭಾರತ ಬೆಂಜ್ ಟಿಪ್ಪರ್ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಣಿಕೊಪ್ಪ ಗ್ರಾಮದ ಮಹಾಲಸಾ ಸ್ಟೋನ್ ಕ್ರಶರಲ್ಲಿದ್ದ ಭಾರತ ಬೆಂಜ ಟಿಪ್ಪರ ಕೆಎ 22, ಸಿ 1611 ಕಳೆದ ಜೂನ್ 20 ರಂದು ಕಳ್ಳತನವಾದ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ, ಕಾಯರ್ಾಚರಣೆ ನಡೆಸಿದ ಪೊಲೀಸರು ರಾಮದುರ್ಗ ತಾಲೂಕಿನ ಸಾಲಾಪುರ ಸಮೀಪ ಅಂದಾಜು ರೂ. 10 ಲಕ್ಷ ಮೌಲ್ಯದ ಕಳ್ಳತನವಾದ ಟಿಪ್ಪರ್ ಪತ್ತೆ ಹಚ್ಚಿ, ಅದೇ ಸ್ಟೋನ್ ಕ್ರಶರನಲ್ಲಿ ಕೆಲಸ ಮಾಡುತ್ತಿದ್ದ, ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಲಕ್ಷ್ಮಣ ಈರಪ್ಪ ಲಮಾಣಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಐ ಎಫ್.ವೈ.ಮಲ್ಲೂರ, ಗುರುರಾಜ ಕಲಬುರ್ಗಿಹ ಹಾಗೂ ಸಿಬ್ಬಂದಿಗಳಾದ ಎಸ್.ಯು.ಮೆಣಸಿನಕಾಯಿ, ಉದ್ದಪ್ಪ ಪೂಜೇರಿ, ಚೇತನ ಬುದ್ನಿ, ಎಂ.ಎಸ್.ದೇಶನೂರ ಭಾಗವಹಿಸಿದ್ದರು. ಪೊಲೀಸರ ಈ ಕಾರ್ಯಕ್ಕೆ ಎಸ್.ಪಿ. ಡಾ.ಸಂಜೀವ ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ