ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ತೆರೆಯಲು ಚಿಂತನೆ: ಸ್ವಾಮೀಜಿ
ಲೋಕದರ್ಶನ ವರದಿ
ಬೈಲಹೊಂಗಲ 06: ಕಾಮಧೇನು ಕಲ್ಪವೃಕ್ಷ ಜನಸೇವಾ ಅಭಿವೃದ್ಧಿ ಸಂಘ ದುರುದುಂಡೇಶ್ವರ ಶಾಖಾ ಮಠ ಅಡಹಳ್ಳಟ್ಟಿ ವತಿಯಿಂದ ಅನಾಥ ಆಶ್ರಮ, ವೃದ್ಧಾಶ್ರಮ ಹಾಗೂ ಗೋಶಾಲೆ ತೆರೆಯಲು ಉದ್ದೇಶಿಸಲಾಗಿದೆ ಎಂದು ಅಥಣಿ ಅಡಹಳ್ಳಟ್ಟಿ ದುರದುಂಡೇಶ್ವರಮಠದ ಶಿವಪಂಚಾಕ್ಷರಿ ಸ್ವಾಮೀಜಿ ಹೇಳಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು ಪ್ರಸ್ತುತ ದಿನಮಾನಗಳಲ್ಲಿ ವಯಸ್ಸಾದ ತಂದೆ, ತಾಯಿಯನ್ನು ವೃದ್ಧಾಶ್ರಮ, ಅನಾಥ ಆಶ್ರಮಗಳಿಗೆ ಹೆಚ್ಚೆಚ್ಚು ಸೇರಿಸಲಾಗುತ್ತಿದೆ.
ಬಡ ಮತ್ತು ನಿರ್ಗತಿಕ ಮಕ್ಕಳು, ವಿಧವೇಯರು, ಬಡ ಜನರ ಜೀವನ ಮಟ್ಟ ಸುಧಾರಿಸಲು ಸಹಾಯ, ಜೀವನೋಪಾಯ ನಿರ್ವಹಿಸಲು ಕೌಶಲ್ಯ ತರಬೇತಿ, ಸರ್ವತೋಮುಖ ಮಾನವೀಯ ಮೌಲ್ಯ ಬೆಳೆಸಲು ಇನ್ನೂ ಹಲವಾರು ನೆರವು ಕಲ್ಪಿಸಲು ಚಿಂತನೆ ಹೊಂದಲಾಗಿದೆ ಎಂದರು.
ಈ ಭಾಗದಲ್ಲಿ ಅನಾಥ ಆಶ್ರಮ, ವೃದ್ಧಾಶ್ರಮ ಹೆಚ್ಚು ಇಲ್ಲ. ಇದನ್ನು ನಿರ್ಮಾಣ ಮಾಡುವುದರಿಂದ ಎಲ್ಲರಿಗೂ ಅನುಕೂಲ ಆಗುತ್ತದೆ. ಬಾಡಿಗೆ ರೂಪದಲ್ಲಿ ಯಾರಾದರೂ ಒಂದು ಎಕರೆ ಜಾಗೆ ನೀಡಿದರೆ ಆ ಸ್ಥಳದಲ್ಲಿ ಅನಾಥ ಆಶ್ರಮ, ವೃದ್ಧಾಶ್ರಮ, ಗೋಶಾಲೆ ತೆರೆಯಲಾಗುವುದು. ಎಲ್ಲದಕ್ಕೂ ಉಚಿತ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಬೈಲಹೊಂಗಲ ಸಮಾಜದ ಎಲ್ಲ ಗಣ್ಯಮಾನ್ಯರು, ಹಿತೈಷಿಗಳು ಈ ಪುಣ್ಯ ಕಾರ್ಯಕ್ಕೆ ಸಹಾಯ ಸಹಕಾರ ನೀಡುತ್ತಾರೆ ಎಂಬ ನಂಬಿಕೆ ಇದೆ. ಕೈ ಜೋಡಿಸಬೇಕು ಎಂದರು.
ವಕೀಲ ಬಸವರಾಜ ದೋತರದ, ಡಾ.ಸುರೇಂದ್ರ ಕಲಘಟಗಿ, ಚಂದ್ರಶೇಖರ ಖರ್ಜಗಿಮಠ, ಸಲೀಂ ಜಮೀನದಾರ, ನವೀರ ಗೋವೆ, ಉಮರ ಹುಬ್ಬಳ್ಳಿ, ಅನೇಕರು ಇದ್ದರು