ರಾಣೆಬೆನ್ನೂರ

ಚುನಾವಣಾ ನೀತಿ ಸಂಹಿತೆಯ ಗುಮ್ಮ.!! ತರಾತುರಿಯಲ್ಲಿ ಸಿಎಂ ಕಾರ್ಯಕ್ರಮ ಉದ್ಘಾಟಿಸಿದ ಶಾಸಕದ್ವಯರು.

ಚುನಾವಣಾ ನೀತಿ ಸಂಹಿತೆಯ ಗುಮ್ಮ.!!   ತರಾತುರಿಯಲ್ಲಿ ಸಿಎಂ ಕಾರ್ಯಕ್ರಮ ಉದ್ಘಾಟಿಸಿದ ಶಾಸಕದ್ವಯರು.

ರಾಣೇಬೆನ್ನೂರ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರದಂದು ಮಧ್ಯಾಹ್ನ ನಗರಕ್ಕೆ ಆಗಮಿಸಿ ಅಂದಾಜು 589.50 ಕೋಟಿ ರು ವೆಚ್ಚದಲ್ಲಿ ನಡೆಯಬೇಕಾಗಿದ್ದ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಚುನಾವಣಾ ನೀತಿ ಸಹಿತೆ ಜಾರಿಯಾದ  ಕಾರಣದಿಂದಾಗಿ ಮುಂಜಾನೆ 10.30 ರೊಳಗೆ ರಾಣೆಬೆನ್ನೂರ ಶಾಸಕ ಅರುಣ ಕುಮಾರ ಪೂಜಾರ ಮತ್ತು ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ  ಅವರು ಜಂಟಿಯಾಗಿ ಸಿಎಂ ಅನುಪಸ್ಥಿತಿಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ತರಾತುರಿಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಶ್ರೀರಾಮ ನಗರದ ಸಾಯಿಬಾಬಾ ದೇವಸ್ಥಾನದ ಕಾಂಕ್ರೀಟ್ ರಸ್ತೆ, 12ಕೋಟಿ ವೆಚ್ಚದ ವಿವಿಧ ನಿರ್ಮಾಣ ಕಾಮಗಾರಿ, ನೀರಾವರಿ ಇಲಾಖೆಯ ವತಿಯಿಂದ ತಾಲೂಕಿನ ವಿವಿಧ 21ಕೆರೆ ತುಂಬಿಸುವ ಯೋಜನೆಗೆ ಚಾಲನೆ,     ಜಲಜೀವನ ಮಿಷನ್ ಕಾಮಗಾರಿಗಳ ಉದ್ಘಾಟನೆ, ಜವಳಿ ಪಾರ್ಕ್  ಶಂಕುಸ್ಥಾಪನೆ. ನಗರೋಸ್ಥಾನ, ಹೀಲದಹಳ್ಳಿ ಬೇಲೂರು 110 ಕೆವಿ ವಿದ್ಯುತ್ ಕೇಂದ್ರ ಉದ್ಘಾಟನೆ ಸೇರಿದಂತೆ ಮತ್ತಿತರ ಕಾಮಗಾರಿಗಳಿಗೆ ಶಾಸಕರುಗಳು ಚಾಲನೆ ನೀಡಿದರು.  

 ಶಾಸಕ ಅರುಣಕುಮಾರ ಪೂಜಾರ ಅವರು ಕಾರ್ಯಕ್ರಮಗಳ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರಕ್ಕೆ ಆಗಮಿಸಿ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಾಗಿತ್ತು ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯ ಕಾರಣದಿಂದ ಬರಲಾಗುತ್ತಿಲ್ಲ ನೀವೇ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಎಂದು ಸಿಎಂ ರವರು ಸೂಚಿಸಿದ್ದರಿಂದನೀತಿ ಸಂಹಿತೆ ಜಾರಿಗೂ ಮುನ್ನ ಒಂದು ಘಂಟೆ ಮುನ್ನ  ಬೆಳಿಗ್ಗೆಯೇ ಈ ಎಲ್ಲಾ ಕಾರ್ಯಗಳಿಗೆ ಚಾಲನೆ ನೀಡಿದವು ಎಂದರು.ಅಂದಾಜು 222 ಎಕರೆಯಲ್ಲಿ, ಸುಮಾರು 129 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮಾರುಕಟ್ಟೆಯು ರಾಜ್ಯದಲ್ಲಿಯೇ ಅತ್ಯುತ್ತಮ ಹಾಗೂ ಸುಸಜ್ಜಿತ ವಾಗಿರುವ ನೂತನ ಮೇಗಾ ಮಾರುಕಟ್ಟೆ ಲೋಕಾರ್ಪಣೆ ಆಗಿದ್ದು ವರ್ತಕರಿಗೂ ಹಾಗೂ ರೈತರಿಗೂ ಶ್ರೀಸಾಮಾನ್ಯರಿಗೂ ಬಹಳಷ್ಟು ಸಂತಸ ಉಂಟು ಮಾಡಿದೆ ಎಂದರು.  ಜಿ.ಜಿ ಹೊಟ್ಟಿಗೌಡ್ರ, ಬಸವರಾಜ ಸವಣೂರ, ಶಿವಕುಮಾರ ನರಸಕೊಂಡರ,  ಭಾರತಿ ಅಳವಂಡಿ, ಮಲ್ಲಣ್ಣ ಅಂಗಡಿ, ಸಿದ್ದಣ್ಣ ಚಿಕ್ಕಬಿದರಿ, ಪ್ರಕಾಶ ಪೂಜಾರ, ರಮೇಶ್ ನಾಯಕ, ಗಂಗಮ್ಮ ಹಾವನೂರ, ಮಂಜನಗೌಡ ಪಾಟಿಲ,  ತಿರುಪತಿ ಅಜ್ಜನವರ, ಶರಶ್ಚಂದ್ರ ದೊಡ್ಡಮನಿ, ರಾಜೇಂದ್ರ ಬಸೆನಾಯ್ಕರ,  ಪವನಕುಮಾರ ಮಲ್ನಾಡದ,ಆನಂದ ಇಟಗಿ, ದೀಪಕ್ ಹರಪನಹಳ್ಳಿ, ಪರಮೇಶ ಗೂಳಣ್ಣನವರ ಸೇರಿದಂತೆ ಮತ್ತಿ ತರರು ಇದ್ದರು. ಚುನಾವಣಾ ನೀತಿ ಸಂಹಿತೆ ಮಧ್ಯಾಹ್ನ ಜಾರಿಯಾದ ಕಾರಣ ಬೃಹತ್ ಪ್ರಮಾಣದಲ್ಲಿ ನಿಮರ್ಾಣಗೊಂಡಿದ್ದ ಸಿ.ಎಂ ವೇದಿಕೆ, ಪೆಂಡಾಲನಲ್ಲಿ ಜನರಿಲ್ಲದೆ ಬಿಕೋ ಎನ್ನುವಂತಿತ್ತು. ಸಹಸ್ರಾರು ಜನರಿಗೆ ತಯಾರಿಸಿದ್ದ ಪಲಾವ್ ಸಹ ಹಾಗೆ ಉಳಿದಿತ್ತು. ಒಟ್ಟಾರೆ ಇಂದಿನ ಸಿಎಂ ಕಾರ್ಯಕ್ರಮಗಳಿಗೆ ಶಾಸಕರುಗಳು ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದರೊಳಗೆ ಎಲ್ಲಾ ಕಾರ್ಯಕ್ರಮಗಳನ್ನು ಅವಸರದಲ್ಲಿ ಮಾಡಿ ಮುಗಿಸಿದ್ದು ಕಂಡು ಬಂದಿತು 

ಸುದ್ದಿ ಓದಿ