ತಾಲೂಕಾ ಮಟ್ಟದ ‘ಯುವ ಸಂಸತ್’ ಸ್ಪರ್ಧೆ
ತಾಲೂಕಾ ಮಟ್ಟದ ‘ಯುವ ಸಂಸತ್’ ಸ್ಪರ್ಧೆ
ಧಾರವಾಡ 08: ಗ್ರಾಮೀಣ ನೆರೆ ಪಡಿತ ಪರಿಹಾರ ವಿತರಿಸದ ಆಡಳಿತ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರ ನೀಡದ ಮುಖ್ಯ ಮಂತ್ರಿ, ಸಚಿವರು, ಸದನದಲ್ಲಿ ಗಲಾಟೆ ಮಾಡಿದರೆ ಅಮಾನತುಗೊಳಿಸುವ ಎಚ್ಚರಿಕೆ ನೀಡಿದ ಸಭಾಪತಿ... ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಧಾರವಾಡ ಗ್ರಾಮೀಣದ ಬಿಆರಸಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕಾ ಮಟ್ಟದ ‘ಯುವ ಸಂಸತ್’ ಸ್ಪರ್ಧೆಯಲ್ಲಿ ಈ ದೃಶ್ಯಗಳು ಕಂಡು ಬಂದವು.
ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡು ವಾಕ್ ಚಾತುರ್ಯದ ಮೂಲಕ ಗಮನ ಸೆಳೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು ಸಭಾಪತಿ, ಗೃಹ ಸಚಿವ, ಶಿಕ್ಷಣ ಸಚಿವ, ಆರೋಗ್ಯ ಸಚಿವ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಸರ್ಧೆಯ ಆರಂಭದಲ್ಲಿ ಸದನಕ್ಕೆ ಸಭಾಪತಿಗಳ ಬರುತ್ತಿದ್ದಂತೆಯೇ ಶಾಸಕರು, ಸಚಿವರು, ಮುಖ್ಯ ಮಂತ್ರಿಗಳು, ವಿರೋಧ ಪಕ್ಷದ ನಾಯಕರು ಎದ್ದು ನಿಂತು ಗೌರವ ಸೂಚಿಸಿದರು. ಸಭಾ ಪತಿಗಳ ಆದೇಶದ ಮೇರೆಗೆ ಕಲಾಪ ಆರಂಭವಾಯಿತು. ರೈತರು ಸಾಲ ಪರಿಹಾರ ವಿತರಿಸದ ಆಡಳಿತ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷದ ನಾಯಕರು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ, ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರ ನೀಡದ ಮುಖ್ಯಮಂತ್ರಿ, ಸಚಿವರು, ಸದನದಲ್ಲಿ ಗಲಾಟೆಮಾಡಿದರೆ ಅಮಾನತುಗೊಳಿಸುವ ಎಚ್ಚರಿಕೆ ನೀಡಿದ ಸಭಾಪತಿ...
ಹೀಗೆ ಬೇರೆಯಾರೂ ಅಲ್ಲಾ ತಾಲೂಕಿನಿಂದ ಆಗಮಿಸಿ ಯುವ ಸಂಸತ್ನಲ್ಲಿ ಭಾಗವಹಿಸಲು ಬಂದ ಯುವ ಸಂಸತ್ ವಿದ್ಯಾರ್ಥಿಗಳು.
ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಜ್ಞೆಯನ್ನು ಹೊಂದಲು ಯುವ ಸಂಸತ್ ಅಣಕು ಸ್ಪರ್ಧೆ ಸಹಕಾರಿ ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ತಿಳಿಸಿದರು.
ಅವರು ಬಿಅರ್ಸಿ ಧಾರವಾಡ ಗ್ರಾಮೀಣದ ಸಭಾಭವನದಲ್ಲಿ ಧಾರವಾಡ ಗ್ರಾಮೀಣ ತಾಲೂಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದಡಿ ಶಾಸಕಾಂಗದ ಕಾರ್ಯಚಟುವಟಿಕೆ, ಕಲಾಪಗಳ ವಿಧಾನ ಇತ್ಯಾದಿ ಅಂಶಗನ್ನು ಪರಿಚಯಿಸುವ ಸಂಬಂಧ ಸಂಸದೀಯ ವ್ಯವಹಾರಗಳ ಇಲಾಖೆಯ ಸಹಯೋಗದೊಂದಿಗೆ “ಯುವ ಸಂಸತ್ ಸ್ಪರ್ಧೆ” ಉದ್ಘಾಟಿಸಿ ಮಾತನಾಡುತ್ತಾ ವಿಶ್ವದಲ್ಲಿ ಭಾರತ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಸಂಸತ್ ಪ್ರಮುಖವಾಗಿದ್ದು, ಯುವ ಜನತೆ ರಾಜಕೀಯ ಪ್ರಜ್ಞೆಯಿಂದ ಉತ್ತಮ ಪ್ರಜಾ ಪ್ರತಿನಿಧಿಗಳನ್ನು ಚುನಾಯಿಸಿ ದೇಶವನ್ನು ಬಲಿಷ್ಠಗೊಳಿಸಬೇಕು ಎಂದರು.
ಶಿಕ್ಷಣ ಸಂಯೋಜಕರುಗಳಾದ ಶ್ರೀಕಾಂತ್ ಗೌಡ ಮಾತನಾಡುತ್ತಾ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳಲ್ಲಿ ಚುಕ್ಕಿ-ಚುಕ್ಕಿ ರಹಿತ ಪ್ರಶ್ನೆ, ಮಸೂದೆಗಳನ್ನು ಯಾರು ಮಂಡನ ಮಾಡುತ್ತಾರೆ ಹಾಗೂ ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪ್ರತಿನಿಧಿಗಳಾಗಿ ಜವಾಬ್ದಾರಿ ವಹಿಸಿಕೊಂಡು ಹಲವು ಪ್ರಮುಖ ವಿಷಯಗಳ ಮೇಲೆ ಚರ್ಚೆ ಮಾಡಿದರು.
ಅನ್ನಪೂರ್ಣ ಗುಂಡಗೋವಿ ಸ.ಪ್ರೌಢ ಶಾಲೆ ಕುರುಬಗಟ್ಟಿ, ಪ್ರೀತಿ ವಕ್ಕುಂದ ಸ.ಪ್ರೌಢ ಶಾಲೆ ಕುರುಬಗಟ್ಟಿ, ಸುಶ್ಮೀತಾ ಗೊಣೆನ್ನವರ ಸ.ಪ್ರೌಢ ಶಾಲೆ ಕುರುಬಗಟ್ಟಿ, ಜ್ಯೋತಿ ಕೊಟಗುಣಸಿ ಸ.ಪ್ರೌಢ ಶಾಲೆ ಕುರುಬಗಟ್ಟಿ, ಪುಷ್ಪಾ ಬಡಿಗೇರ ಸ.ಪ್ರೌಢ ಶಾಲೆ ಕಲಕೇರಿ, ಐಶ್ವರ್ಯಾ ರಾಟೊಳ್ಳಿ ಸ.ಪ್ರೌಢ ಶಾಲೆ ಕಲಕೇರಿ, ಸಮರ್ಥ ಪಾಗೋಜಿ ಸ.ಪ್ರೌಢ ಶಾಲೆ ಕಲಕೇರಿ,ಶಿವಾನಿ ಪಾಗೋಜಿ ಸ.ಪ್ರೌಢ ಶಾಲೆ ಕಲಕೇರಿ, ಯಶೋಧಾ ಗಾರಕ್ಕನವರ ಸ.ಪ್ರೌಢ ಶಾಲೆ ಹೊಲ್ತಿಕೋಟಿ, ರೇಣುಕಾ ಗೌಡರ ಸ.ಪ್ರೌಢ ಶಾಲೆ ಹೊಲ್ತಿಕೋಟಿ, ರುಕ್ಮಿಣಿ ತೊರವತ್ತ ಸ.ಪ್ರೌಢ ಶಾಲೆ ಹೊಲ್ತಿಕೋಟಿ, ಲಕ್ಷ್ಮೀ ಪವಾರ ಸ.ಪ್ರೌಢ ಶಾಲೆ ಹೊಲ್ತಿಕೋಟಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಶೂನ್ಯ ವೇಳೆಯ ಪ್ರಶ್ನೆಗಳು, ಗುರುತಿಸುವ ಪ್ರಶ್ನೆಗಳು, ರಹಿತ ಪ್ರಶ್ನೆಗಳು ಇತ್ಯಾದಿಗಳನ್ನು ಚರ್ಚಿಸಿದ್ದು ವಿಶೇಷವಾಗಿತ್ತು.
ಪ್ರತಿನಿಧಿ ಸಂಸ್ಥೆಗಳ ಪಾತ್ರದ ಬಗ್ಗೆ ಅರಿವು ಮೂಡಿಸಿ. ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವುದು ಮತ್ತು ಅಭಿಪ್ರಾಯಗಳಿಗೆ ಸಹಿಷ್ಣತೆ ಮತ್ತು ಒಬ್ಬರ ಸ್ವಂತ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು. ಶಾಸಕಾಂಗ ಸಭೆಯ ಕಾರ್ಯವಿಧಾನಗಳ ಬಗ್ಗೆ ವಿದ್ಯಾರ್ಥಿಗಳ ಅರಿವನ್ನು ಹೆಚ್ಚಿಸಿ. ಯೂತ್ ಪಾರ್ಲಿಮೆಂಟ್ ಸ್ಪರ್ಧೆಯ ಗುರಿಯು ವಿದ್ಯಾರ್ಥಿಗಳಲ್ಲಿ ವಾಕ್ಚಾತುರ್ಯ, ಸಮಯಪ್ರಜ್ಞೆ, ಸೂಕ್ಷ್ಮತೆ, ಧೈರ್ಯ ಮತ್ತು ವಿಷಯವನ್ನು ಉತ್ತಮವಾಗಿ ಪ್ರಸ್ತುತಪಡಿಸುವಂತಹ ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವುದಾಗಿದೆ,
ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಶಿಕ್ಷಣ ಸಂಯೋಜಕರಾದ ಬಸವರಾಜ ಛಬ್ಬಿ, ಸಾವಳಗಿ, ಬಿಆರ್ಪಿ, ಎಸ್ ವಿ ಸಂತಿ, ನರಸಿಂಹಮೂರ್ತಿ ರಾಜೂರ್ ತಾಲೂಕಿನಿಂದ ಆಗಮಿಸಿದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ನಿರ್ಣಾಯಕರು ಉಪಸ್ಥಿತರಿದ್ದರು.ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಜ್ಞೆಯನ್ನು ಹೊಂದಲು ಯುವ ಸಂಸತ್ ಅಣಕು ಸ್ಪರ್ಧೆ ಸಹಕಾರಿ ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ತಿಳಿಸಿದರು.ಶಿಕ್ಷಣ ಸಂಯೋಜಕರುಗಳಾದ ಶ್ರೀಕಾಂತ್ ಗೌಡ ಮಾತನಾಡುತ್ತಾ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳಲ್ಲಿ ಚುಕ್ಕಿ-ಚುಕ್ಕಿ ರಹಿತ ಪ್ರಶ್ನೆ, ಮಸೂದೆಗಳನ್ನು ಯಾರು ಮಂಡನ ಮಾಡುತ್ತಾರೆ ಹಾಗೂ ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪ್ರತಿನಿಧಿಗಳಾಗಿ ಜವಾಬ್ದಾರಿ ವಹಿಸಿಕೊಂಡು ಹಲವು ಪ್ರಮುಖ ವಿಷಯಗಳ ಮೇಲೆ ಚರ್ಚೆ ಮಾಡಿದರು.
ನೆರೆ ಪಡಿತ ಪರಿಹಾರ ವಿತರಿಸದ ಆಡಳಿತ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರ ನೀಡದ ಮುಖ್ಯ ಮಂತ್ರಿ, ಸಚಿವರು, ಸದನದಲ್ಲಿ ಗಲಾಟೆ ಮಾಡಿದರೆ ಅಮಾನತುಗೊಳಿಸುವ ಎಚ್ಚರಿಕೆ ನೀಡಿದ ಸಭಾಪತಿ... ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಧಾರವಾಡ ಗ್ರಾಮೀಣದ ಬಿಆರಸಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕಾ ಮಟ್ಟದ ‘ಯುವ ಸಂಸತ್’ ಸ್ಪರ್ಧೆಯಲ್ಲಿ ಈ ದೃಶ್ಯಗಳು ಕಂಡು ಬಂದವು.