ತಾಲೂಕ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು
ತಾಲೂಕ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು
ಅಥಣಿ, 29: ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಜಿಎಂ ಹಿರೇಮಠ್ ಪೆನಲ್ ತಾಲೂಕ ಅಧ್ಯಕ್ಷ ಸ್ಥಾನಕ್ಕೆ ವಿವಿಧ ಇಲಾಖೆಗಳ ಬಗ್ಗೆ ಪೈಪೋಟಿ / ಪ್ರಾಥಮಿಕ ಶಾಲಾ ಶಿಕ್ಷಕರ ಕಸರತ್ತು. ಭಾರಿ ಕುತೂಹಲ ಕೆರಳಿಸಿದ್ದ ತಾಲೂಕ ನೌಕರರ ಸಂಘದ ಚುನಾವಣೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಜಿಎಂ ಹಿರೇಮಠ್ ನೇತೃತ್ವದ ಫೆನಲ್ ಅಭ್ಯರ್ಥಿಗಳಾದ ಬಿ ಎಂ ಸನದಿ 680 ಮತಗಳು, ಮಹದೇವ ಅಸ್ಕಿ 671 ಮತಗಳು, ಮಹಾಂತೇಶ್ ಗೊಳಪ್ಪನವರ 661 ಮತಗಳನ್ನು ಪಡೆಯುವ ಮೂಲಕ ಎದುರಾಳಿ ಪೆನಾಲ್ ಅಭ್ಯರ್ಥಿಗಳನ್ನ ಪ್ರಭಾವಗೊಳಿಸಿದರು.
ಸರ್ಕಾರಿ ಪ್ರೌಢಶಾಲೆಯ ವಿಭಾಗದಿಂದ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿಸ್ವಾರ್ಥ ಪ್ರೌಢಶಾಲಾ ಗುರು ಬಳಗದ ಫೆನಲ್ ಅಭ್ಯರ್ಥಿಗಳಾದ ಮುರುಗೇಶ್ ಪಿ ಚನ್ನಗೌಡ 171 ಮತಗಳನ್ನು, ಮತ್ತು ಧನಪಾಲ ಹಳ್ಳೂರ್ 185 ಮತಗಳನ್ನು ಪಡೆಯುವ ಮೂಲಕ ಎದುರಾಳಿ ಅಭ್ಯರ್ಥಿಗಳನ್ನ ಸೋಲಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಓಗಪ್ಪ ಅರಟಾಳ, ಹಿಂದುಳಿದ ವರ್ಗಗಳ ಇಲಾಖೆಯಿಂದ ಅಶೋಕ ಸತ್ತಿಗೌಡರ, ಪದವಿ ಪೂರ್ವ ವಿಭಾಗದಿಂದ ಸುರೇಶ್ ಮಜ್ಜಗಿ, ಆರೋಗ್ಯ ಇಲಾಖೆಯಿಂದ ಮಹಾಂತೇಶ್ ಕೋರಿ ಈ ಚುನಾವಣೆಯಲ್ಲಿ ಜಯಶಾಲಿಯಾದರು. ಒಟ್ಟು 34 ಸ್ಥಾನಗಳ ಪೈಕಿ ಈಗಾಗಲೇ 25 ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿದೆ, 9 ಸ್ಥಾನಗಳಿಗೆ ನೀಡಿದ ಇಂದಿನ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಿರ್ದೇಶಕರು ಪರಸ್ಪರ ಗುಲಾಲು ಎರಚಿಕೊಂಡು , ಪಟಾಕಿಗಳನ್ನ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.
ತಾಲೂಕ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯ ಕಸರತ್ತು, ಈ ಚುನಾವಣೆಯು ರಾಜಕೀಯ ಚುನಾವಣೆಯಂತೆ ಜರುಗಿದ್ದು, ಇನ್ನು ತಾಲೂಕ ಅಧ್ಯಕ್ಷತಾ ಸ್ಥಾನಕ್ಕಾಗಿ ವಿವಿಧ ಇಲಾಖೆಯ ನಿರ್ದೇಶಕರು ತೆರೆಮರಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಮತದಾರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅನೇಕ ವರ್ಷಗಳಿಂದ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದು, ಅದಕ್ಕಾಗಿ ತೆರೆಮರೆಯ ಕಷರತ್ತು ನಡೆದಿದೆ. ತಾಲೂಕ ಅಧ್ಯಕ್ಷ ಸ್ಥಾನದ ಗದ್ದುಗೆಯನ್ನು ಯಾರು ಏರಲಿದ್ದಾರೆ ಎಂಬುದು ಎಲ್ಲಾ ನೌಕರರಲ್ಲಿ ಕುತೂಹಲ ಮೂಡಿಸಿದೆ.