ಬೈಲಹೊಂಗಲ

ಸೋಮೇಶ್ವರ ಕಾರ್ಖಾನೆಯ ಬಾಳೇಕುಂದರಗಿ ಪೆನಲ್ ಜಯಶಾಲೆ

ಸೋಮೇಶ್ವರ ಕಾರ್ಖಾನೆಯ ಬಾಳೇಕುಂದರಗಿ ಪೆನಲ್ ಜಯಶಾಲೆ

ಲೋಕದರ್ಶನ ವರದಿ

ಬೈಲಹೊಂಗಲ 12: ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ  ಬಾಳೇಕುಂದರಗಿ ಪೆನಲನ್ 9  ಅಭ್ಯರ್ಥಿಗಳು ವಿಜಯಶಾಲಿ ಆಗುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದರು. ಮಾಜಿ ಶಾಸಕ ಮಹಾಂತೇಶ ದೊಡಗೌಡರ ಅವರ ಶ್ರೀ ಸೋಮೇಶ್ವರ ರೈತರ ಅಭಿವೃದ್ದಿ ಪೆನಲ್  8 ಅಭ್ಯರ್ಥಿಗಳು ವಿಜಯಿಯಾದರು.

ವಿಜಯಶಾಲಿಯಾದ ಅಭ್ಯರ್ಥಿಗಳ ಪಟ್ಟಿ: ಬಾಳೇಕುಂದರಗಿ ಸಹಕಾರ ಪೆನೆಲ್ ಬಸವರಾಜ ಬಾಳೇಕುಂದರಗಿ, ಮಹಾಬಳೇಶ್ವರ (ರಾಜು) ಕುಡಸೋಮಣ್ಣವರ, ಮಹಾಂತೇಶ ಮತ್ತಿಕೊಪ್ಪ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಮಲ್ಲಪ್ಪ ಅಷ್ಟಗಿ,  ಆದೃಶಪ್ಪ ಕೊಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ. 

  ಶ್ರೀ ಸೋಮೇಶ್ವರ ರೈತರ ಅಭಿವೃದ್ದಿ ಪೆನಲ್ ಅ ವರ್ಗದ ಕ್ಷೇತ್ರ-ಉಮೇಶ ಬಾಳಿ, ರಾಚಪ್ಪ ಮಟ್ಟಿ, ಪ್ರಕಾಶ ಮೂಗಬಸವ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ,  ಶ್ರೀಶೈಲಪ್ಪ ಶರಣಪ್ಪನವರ ಆಯ್ಕೆಯಾದರು. ವಿಜಯಶಾಲಿಯಾದ ಬೆಂಬಲಿಗರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಪಟ್ಟರು.

     ವಿದ್ಯುತ್ ಕೈ ಕೊಟ್ಟು ಮತ ಏಣಿಕೆಗೆ ತೊಂದರೆ: ಶ್ರೀ  ಸೋಮೇಶ್ವರ ಸಕ್ಕರೆ ಕಾರ್ಖಾನೆ ಚುನಾವಣೆ..ಮತ ಎಣಿಕೆ ಕೊಠಡಿಯಲ್ಲಿ  ವಿದ್ಯುತ್ ಕೈ ಕೊಟ್ಟಿದ್ದರಿಂದ ಮತ ಏಣಿಕೆಗೆ ತೊಂದರೆಯಾಯಿತು. 

26 ಮತ್ತು 50ನೆ ಕೊಠಡಿಯಲ್ಲಿ ವಿದ್ಯುತ್  ಸಮಸ್ಯೆಯಾಗುತ್ತಿದಂತೆ  ಮತ ಏಣಿಕೆ ಅಧಿಕಾರಿಗಳು ಮೊಬೈಲ್ ಟಾರ್ಚ ಆನ್ ಮಾಡಿಕೊಂಡು ಸುಮ್ಮನೆ ಕುಳಿತರು .

ಸುದ್ದಿ ಓದಿ