ಅಥಣಿ

ಸಂಘದ ಆಡಳಿತ ಮಂಡಳಿಯ ಸದಸ್ಯತ್ವದ ಆಯ್ಕೆ

ಸಂಘದ ಆಡಳಿತ ಮಂಡಳಿಯ ಸದಸ್ಯತ್ವದ ಆಯ್ಕೆ

ಸಂಘದ ಆಡಳಿತ ಮಂಡಳಿಯ ಸದಸ್ಯತ್ವದ ಆಯ್ಕೆ

ಅಥಣಿ 25 ; ಶಾಸಕರಾದ ಲಕ್ಷ್ಮಣ ಸವದಿ ಮತ್ತು ರಾಜು ಕಾಗೆ ಕಟ್ಟಾ ಬೆಂಬಲಿಗ ಶಿವಾನಂದ ಗೊಲಭಾವಿ ಸತತ ಮೂರನೇ ಬಾರಿಗೆ ಹ್ಯಾಟ್ರಿಕ್ ಆಗಿ ಗುಂಡೇವಾಡಿಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಆನಂದ ಬಾಪು ಕದಮ್ ಅವಿರೋಧವಾಗಿ ಆಯ್ಕೆಯಾದರು.  ಚುನಾವಣಾಧಿಕಾರಿಯಾಗಿ ರಾಘವೇಂದ್ರ ನೂಲಿ ಸಹಾಯಕರಾಗಿ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕಾಶಿನಾಥ ಕವಟೇಕರ  ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷ ಶಿವಾನಂದ ಗೊಲಭಾವಿ ಮತ್ತು ಉಪಾಧ್ಯಕ್ಷ ಆನಂದ ಕದಂ ಹಾಗೂ  ಆಡಳಿತ ಮಂಡಳಿ ಸದಸ್ಯರಿಗೆ ಸನ್ಮಾನಿಸಿ ಮಾತನಾಡಿದ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನಿರ್ದೇಶಕ ಘೂಳಪ್ಪ ಜತ್ತಿ ಸಹಕಾರ ಸಂಘದ ಮೂಲಕ ರೈತರಿಗೆ ಸರಕಾರದ ಸಾಲದ ಯೋಜನೆಗಳನ್ನು ತಲುಪಿಸಿ ಅವರ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಬೇಕು ಎಂದು ನೂತನ ಆಡಳಿತ ಮಂಡಳಿಗೆ ಸಲಹೆ ನೀಡಿದರು.  

ಸಂಘದ ಆಡಳಿತ ಮಂಡಳಿಯ ಸದಸ್ಯತ್ವದ ಆಯ್ಕೆಗಾಗಿ ಚುನಾವಣೆ ನಡೆಯುತ್ತವೆ ಆದರೆ ಒಮ್ಮೆ ಚುನಾವಣೆಯಲ್ಲಿ ಆಯ್ಕೆಯಾದ ನಂತರ ಚುನಾವಣೆಯ ರಾಜಕೀಯ ಹೊರಗಿಟ್ಟು ಎಲ್ಲರನ್ನು ಸಮನಾಗಿ ನೋಡಿಕೊಂಡು ಹೋಗಬೇಕು ಎಂದ ಅವರು ನೂತನ ಆಡಳಿತ ಮಂಡಳಿ ಸಹಕಾರ ಸಂಘವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ನೂತನ ಅಧ್ಯಕ್ಷ ಶಿವಾನಂದ ಗೊಲಭಾವಿ ಮಾತನಾಡಿ ಶಾಸಕ ಲಕ್ಷ್ಮಣ ಸವದಿ ಮತ್ತು ರಾಜು ಕಾಗೆ ಮಾರ್ಗದರ್ಶನದಲ್ಲಿ ಸಹಕಾರ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಮತ್ತು ಸಹಕಾರ ಸಂಘದ ಮೂಲಕ ರೈತರಿಗೆ ಸಾಲದ ಯೋಜನೆಗಳನ್ನು ತಲುಪಿಸುವೆ ಎಂದರು. ನೂತನ ಅಧ್ಯಕ್ಷ ಶಿವಾನಂದ ಗೊಲಭಾವಿ ಮತ್ತು ಉಪಾಧ್ಯಕ್ಷ ಆನಂದ ಕದಂ ಮಾಜಿ ಉಪ ಮುಖ್ಯಮಂತ್ರಿ ಶಾಸಕ ಲಕ್ಷ್ಮಣ ಸವದಿ ಇವರನ್ನು ಸತ್ಕರಿಸಿದರು. ನೂತನ ಆಡಳಿತ ಮಂಡಳಿಯ ಖಂಡು ದನಗರ  ಪಾಪಾಚಂದ ಭೋಸಗೆ, ಶಿವಾನಂದ ಪಾಟೀಲ, ಹುಚ್ಚಪ್ಪಾ ಗುಂಜಿಗಾಂವಿ, ಕಮಲಾ ಜತ್ತಿ,  ಸಂಗೀತಾ ಗುರುಶಾಂತ ಗೆಜ್ಜಿ, ಲಾಲಸಾಬ ಕುಡಚಿ, ಸದಾಶಿವ ಕಾಂಬಳೆ, ಪಿರ​‍್ಪ ಬೇಡರ, ಸಕ್ಕುಬಾಯಿ ವೀರ ಗ್ರಾಮದ ಮುಖಂಡರು ಸತ್ಕರಿಸಿದರು. ಶಿವಾನಂದ ಗೊಲಭಾವಿ ಆಯ್ಕೆಯಾದ ಹಿನ್ನಲೆಯಲ್ಲಿ ಗೊಲಭಾವಿ ಬೆಂಬಲಿಗರು  ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು. 


ಸುದ್ದಿ ಓದಿ