ಬೈಲಹೊಂಗಲ

ಆರು ವರ್ಷದ ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದ : ಪ್ರಭಾವತಿ ಫಕ್ಕೀರಪೂರ

ಆರು ವರ್ಷದ ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದ : ಪ್ರಭಾವತಿ ಫಕ್ಕೀರಪೂರ

ಲೋಕದರ್ಶನ ವರದಿ

ಬೈಲಹೊಂಗಲ 12:  ಮಾನಸಿಕ ಅಸ್ವಸ್ಥ ಮಹಿಳೆ ಮತ್ತು ಆಕೆಯ 6 ವರ್ಷದ ಮಗುವನ್ನು ರಕ್ಷಿಸಿ, ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುವ ಮೂಲಕ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ ಮಾನವೀಯತೆ ಮೆರೆದಿದ್ದಾರೆ. 

    ಪಟ್ಟಣದ ಜವಳಿ ಕೂಟದ ಹತ್ತಿರ ದೇವಸ್ಥಾನದ ಮುಂಬಾಗ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ತನ್ನ 6 ವರ್ಷದ ಮಗುವಿನೊಂದಿಗೆ ದೇವಸ್ಥಾನದ ಮುಂಬಾಗ ಕಳೆದ ಎರಡು ದಿನಗಳಿಂದ ಮಲಗಿಕೊಳ್ಳುತ್ತಿರುವ ಕುರಿತು ಸಾರ್ವಜನಿಕರು ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಅವರಿಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕಾಗಮಿಸಿ ಮಹಿಳೆಯನ್ನು ವಿಚಾರಿಸಿ, ನಂತರ ಉಪವಿಭಾಗಾಧಿಕಾರಿಗಳಿಗೆ ಕರೆ ಮಾಡಿದರು. ತಕ್ಷಣ ಸ್ಪಂದಿಸಿದ ಎಸಿ ಪ್ರಭಾವತಿ ಅವರು ತಡರಾತ್ರಿಯಾದರೂ ಕೂಡಾ ಲೆಕ್ಕಿಸದೆ ಸ್ಥಳಕ್ಕಾಗಮಿಸಿ ಮಹಿಳೆ ಮತ್ತು ಮಗುವನ್ನು ರಕ್ಷಿಸಿ, ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಮಹಿಳೆ ಮತ್ತು ಮಗುವಿಗೆ ತಮ್ಮ ಸ್ವಂತ ಮನೆಯಿಂದ ಊಟ ತಂದು ಕೊಟ್ಟಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು 

ಸುದ್ದಿ ಓದಿ