ಸವದತ್ತಿ ಎಪಿಎಮ್ಸಿಗೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ವೈದ್ಯ ಸನ್ಮಾನ
ಲೋಕದರ್ಶನ ವರದಿ
ಸವದತ್ತಿ 07: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮ 1966ರ ಕಲಂ 10ರಡಿ ಸವದತ್ತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ನೇಮಕ ಮಾಡಿ ಸರಕಾರವು ನಾಮ ನಿರ್ದೇಶನಗೊಳಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶಾಸಕ ವಿಶ್ವಾಸ ವೈದ್ಯರವರು ಎಪಿಎಮ್ಸಿ ಸಭಾಂಗಣದಲ್ಲಿ ನೂತನ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ಸವದತ್ತಿಯ ಎಪಿಎಮ್ಸಿಗೆ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ದೇವಪ್ಪ ಪೂಜೇರ (ಜಂಬ್ರಿ) ಹಾಗೂ ಮಾರುತಿ ಲಕ್ಷ್ಮಣ ಬಸಲಿಗುಂದಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಪರಸಪ್ಪ ಕೌಜಗೇರಿ, ಮಾರುತಿ ರೇಣಪ್ಪ ಶಿಂಧೆ, ಗದಿಗೆಪ್ಪ ನಡುವಿನಹಳ್ಳಿ, ಮಮತಾಜ ಮುಲ್ಲಾ, ಫಕ್ಕೀರಪ್ಪ ಚಂದರಗಿ, ಶಂಕ್ರಪ್ಪ ಸಾವಕನ್ನವರ, ರಾಜು ಹುಂಡೇಕರ, ಮಲ್ಲಿಕಾರ್ಜುನಗೌಡ ಇನಾಮತಿಯವರನ್ನು ನಾಮ ನಿರ್ದೇಶನಗೊಳಿಸಿ ಆದೇಶಿಸಲಾಗಿದೆ.
ಶನಿವಾರದಂದು ಎಪಿಎಮ್ಸಿ ಸಭಾಂಗಣದಲ್ಲಿ ಶಾಸಕ ವಿಶ್ವಾಸ ವೈದ್ಯರವರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಎಪಿಎಮ್ಸಿಗೆ ನೂತನವಾಗಿ ನಾಮನಿದರ್ೇಶನಗೊಂಡಿರುವ ಅಧ್ಯಕ್ಷರಾಧಿಯಾಗಿ ಎಲ್ಲ ಸದಸ್ಯರು ರೈತರ ಹಿತಚಿಂತನೆಯತ್ತ ವಿಶೇಷ ಗಮನ ಹರಿಸಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದರು. ಸರಕಾರದಿಂದ ಬರುವಂತ ಎಲ್ಲ ಸೌಲಭ್ಯತೆಗಳನ್ನು ಎಪಿಎಮ್ಸಿಗೆ ಒದಗಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಪಿಎಮ್ಸಿ ನೂತನ ಅಧ್ಯಕ್ಷ ಚಂದ್ರಶೇಖರ ಪೂಜೇರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶಣ್ಣಾ ಜಾರಕಿಹೊಳಿ ಹಾಗೂ ಶಾಸಕರಾದ ವಿಶ್ವಾಸ ವೈದ್ಯರವರು ಮಾರ್ಗದರ್ಶನದಲ್ಲಿ ಎಪಿಎಮ್ಸಿಗೆ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ನಮಗೆ ಕೊಟ್ಟಂತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ರೈತರ ಬೇಡಿಕೆಗಳಿಗೆ ಸ್ಪಂಧನೆ ನೀಡುವದಾಗಿ ಹೇಳಿದರು.
ಮಹಾಬಳೇಶ್ವರ ಪುರದಗುಡಿ, ರಾಜಶೇಖರ ಕಾರದಗಿ, ಚಂದ್ರಣ್ಣ ಶಾಮರಾಯನವರ, ಮಹಾರಾಜಗೌಡ ಪಾಟೀಲ, ದೀಪಕ ಜಾನ್ವೇಕರ, ಬಿ.ಎನ್.ಪ್ರಭುನವರ, ಅಶ್ವತ ವೈದ್ಯ, ಪ್ರಭು ಪ್ರಭುನವರ, ಡಿ.ಡಿ.ಟೋಪೋಜಿ, ಸುರೇಶ ಬಡಗಿಗೌಡರ, ಮಲ್ಲಿಕಾಜರ್ುನ ಬೇವೂರ, ಮಲ್ಲಿಕಾರ್ಜುನ ಪುರದಗುಡಿ, ಅಲ್ತಾಪ ಸವದತ್ತಿ, ಮಂಜುನಾಥ ಪಾಚಂಗಿ, ಪ್ರವೀಣ ರಾಮಪ್ಪನವರ, ಎಪಿಎಮ್ಸಿ ಕಾರ್ಯದರ್ಶಿ ಕೃಷ್ಣಕಾಂತ ನಾಯಕ, ಚತ್ರೇಶ ದಾಸರ, ಇತರರು ಉಪಸ್ಥಿತರಿದ್ದರು