ಬೈಲಹೊಂಗಲ

ಮೇಲ್ಛಾವಣಿ ಕುಸಿತ ಸ್ಥಳಕ್ಕೆ ಎಸ್ಪಿ ಭೇಟಿ: ಪರಿಶೀಲನೆ

ಮೇಲ್ಛಾವಣಿ ಕುಸಿತ ಸ್ಥಳಕ್ಕೆ ಎಸ್ಪಿ ಭೇಟಿ: ಪರಿಶೀಲನೆ

ಬೈಲಹೊಂಗಲ: ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಕಳೆದ ಗುರುವಾರ ಧಾರಾಕಾರ ಮಳೆ ಸುರಿದ ಪರಿಣಾಮ ಮನೆ ಗೋಡೆ ಹಾಗೂ ಮೇಲ್ಛಾವಣಿ ಕುಸಿದ ಪರಿಣಾಮ 12 ಜನ ಗಾಯಗೊಂಡಿದ್ದರು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಈರಮ್ಮ ಪತ್ರೆಮ್ಮನವರ (95) ಎಂಬ ವೃದ್ಧೆ ಹುಬ್ಬಳ್ಳಿಯ ಕೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾಳೆ. ಉಳಿದವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಬೆಳಗಾವಿ ಜಿಲ್ಲಾ ಎಸ್ಪಿ ಡಾ.ಸಂಜೀವ ಪಾಟೀಲ ಸೋಮವಾರ ಬುಡರಕಟ್ಟಿ ಗ್ರಾಮದ ಮನೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ಬೈಲಹೊಂಗಲ ಡಿವೈಎಸ್ಪಿ ರವಿ ನಾಯಕ್, ಕಿತ್ತೂರು ಸಿಪಿಐ ಮಹಾಂತೇಶ ಹೊಸಪೇಟ, ದೊಡವಾಡ ಠಾಣೆ ಪಿಎಸ್ಐ ಗಳಾದ ನಂದೀಶ, ಪ್ರವೀಣ ಕೋಟಿ ಈ ವೇಳೆ ಇದ್ದರು. 

ಸುದ್ದಿ ಓದಿ