ರಾಣೆಬೆನ್ನೂರ

ಎಸ್ ಎಫ್ ಐ.ಪ್ರತಿಭಟನೆ : ಸಮಸ್ಯೆ ಆಲಿಸಿದ ಪ್ರಕಾಶ್ ಕೋಳಿವಾಡ

ಎಸ್ ಎಫ್ ಐ.ಪ್ರತಿಭಟನೆ : ಸಮಸ್ಯೆ ಆಲಿಸಿದ ಪ್ರಕಾಶ್ ಕೋಳಿವಾಡ
 ರಾಣೇಬೆನ್ನೂರು ಜೂ 13- ನಗರ ಹೊರ ವಲಯದ ಹುಣಸಿಕಟ್ಟಿ ರಸ್ತೆಯ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವದಾಗಿ ಆರೋಪಿಸಿ ಎಸ್ ಎಫ್ ಐ ಸಂಘಟನೆಯ ಮುಖಂಡರು ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಧರಣಿ ನಡೆಸಿ ಪ್ರತಿಭಟಿಸಿದರು. ಪ್ರತಿಭಟನೆಯ ಸುದ್ದಿ ತಿಳಿದ ಶಾಸಕ ಪ್ರಕಾಶ್ ಕೋಳಿವಾಡ ಅವರು, ಹಾಸ್ಟೆಲಿಗೆ  ಧಾವಿಸಿ, ಅಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸಿ, ವಿದ್ಯಾರ್ಥಿ ಮುಖಂಡರೊಂದಿಗೆ ಸಮಾಲೋಸಿ, ಸಮಸ್ಯೆಗಳ ಪರಿಹಾರಕ್ಕೆ ಶೀಘ್ರವಾಗಿ ಕ್ರಮ ಕೈಗೊಳ್ಳುವದಾಗಿ ಅವರು ಭರವಸೆ ನೀಡಿದರು.
 ಸಂಘಟನೆಯ ಮುಖಂಡರಾದ ತಾಲೂಕ ಅಧ್ಯಕ್ಷ  ಶ್ರೀಧರ್, ಜಿಲ್ಲಾ ಸಹ ಕಾರ್ಯದರ್ಶಿ  ಬಸವರಾಜ ಭೋವಿ, ತಾಲೂಕ ಕಾರ್ಯದರ್ಶಿ ಗುಡ್ಡಪ್ಪ  ಮಡಿವಾಳರ, ಸಿದ್ದಪ್ಪ ಕುದುರಿಹಾಳ, ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

ಸುದ್ದಿ ಓದಿ