ರಾಣೆಬೆನ್ನೂರ

ರಾಣೆಬೆನ್ನೂರು ಎಪಿಎಂಸಿ, ಕಾರ್ಯದರ್ಶಿಯಾಗಿ ಎಂ.ವಿ.ಶೈಲಜಾ ಆಗಮನ

ರಾಣೆಬೆನ್ನೂರು ಎಪಿಎಂಸಿ, ಕಾರ್ಯದರ್ಶಿಯಾಗಿ ಎಂ.ವಿ.ಶೈಲಜಾ ಆಗಮನ

 ರಾಣೇಬೆನ್ನೂರು:ಜು 9 ಇಲ್ಲಿನ ವಾಣಿಜ್ಯ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ, ಎಂ. ವಿ. ಶೈಲಜಾ  ಅವರು ಕಾರ್ಯದರ್ಶಿಯಾಗಿ( ಪ್ರಭಾರಿ ) ನೇಮಕಗೊಂಡಿದ್ದಾರೆ.         ನೂತನ ಕಾರ್ಯದರ್ಶಿ ಶೈಲಜಾ ಅವರನ್ನು ವರ್ತಕರ ಸಂಘದ ಪರವಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು. ವರ್ತಕರ ಸಂಘದ ಅಧ್ಯಕ್ಷ ಜಿ. ಜಿ.ಹೊಟ್ಟಿಗೌಡ್ರ, ಮಾಜಿ ಅಧ್ಯಕ್ಷ ವ್ಹಿ.ಪಿ.ಲಿಂಗನಗೌಡ್ರ, ಸಹ ಕಾರ್ಯದರ್ಶಿ ಪರಮೇಶ್ವರ ನಾಯಕ್, ಸಂಘದ ಕಾರ್ಯದರ್ಶಿ ಜಿ. ಬಿ.ಜಂಬಗಿ, ಹಿರಿಯ ಸದಸ್ಯರಾದ ಮಲ್ಲಿಕಾರ್ಜುನ ಅರಳಿ, ಬಿ.ಎಸ್. ಸಣ್ಣಗೌಡ್ರ, ರಾಜಣ್ಣ ಮೋಟಗಿ, ಮಾಲತೇಶ ಕರಿಚಿಕ್ಕಣ್ಣನವರ್, ಶಿವಾನಂದ ಸುಣಗಾರ, ಕಿರಣ ಅಂತರವಳ್ಳಿ, ಸೇರಿದಂತೆ ಮತ್ತಿತರಗಣ್ಯರು, ವರ್ತಕರು  ಸಮಿತಿಯ ಸಿಬ್ಬಂದಿ ಉಪಸ್ಥಿತರಿದ್ದು, ಆಗಮಿಸಿದ  ಶೈಲಜಾ ಅವರನ್ನು ಹೃದಯಸ್ಪರ್ಶಿ ಸ್ವಾಗತಿಸಿದರು

ಸುದ್ದಿ ಓದಿ