ರಾಣೆಬೆನ್ನೂರ

ಮಕ್ಕಳಿಗೆ ಪರಿಸರ ಸಂರಕ್ಷಣೆಯ ಕುರಿತಾದ ಜನಜಾಗೃತಿ ಕಾರ್ಯಕ್ರಮ

ಮಕ್ಕಳಿಗೆ ಪರಿಸರ ಸಂರಕ್ಷಣೆಯ ಕುರಿತಾದ ಜನಜಾಗೃತಿ  ಕಾರ್ಯಕ್ರಮ

ರಾಣೇಬೆನ್ನೂರು 7: ಸಮಾಜದಲ್ಲಿ ಬಳಸುತ್ತಿರುವ ಪ್ಲಾಸ್ಟಿಕ್  ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ದಿನನಿತ್ಯ ಬಳಸಬೇಕು ಪ್ಲಾಸ್ಟಿಕ್ ಮುಕ್ತ ಭಾರತ ಪ್ರತಿಯೊಬ್ಬ ನಾಗರಿಕನ ಧ್ಯೇಯ ವಾಕ್ಯವಾಗಬೇಕು ದಿನನಿತ್ಯದಲ್ಲಿ ವಸ್ತುಗಳ ಜೊತೆ ನಮ್ಮ ಒಡನಾಟ ಇರಬೇಕು ಎಂದು ರೋಟರಿ ಕ್ಲಬ್ ನ ಗವರ್ನರ್ ಬಬನ್ ದೇಶಪಾಂಡೆ ಹೇಳಿದರು.

 ಅವರು ನಗರದ ರೋಟರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ರೊಟರಿ ಆಂಗ್ಲ ಮಾಧ್ಯಮ,ರೋಟರಿ ವಿಜ್ಞಾನ ಮತ್ತು ಪದವಿಪೂರ್ವ ಕಾಲೇಜು, ರೋಟರಿ ಕ್ಲಬ್ ಮತ್ತು ವಿಸ್ತಾರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವಿಶ್ವ ಪರಿಸರ ದಿನಾಚರಣೆ ನಿಮಿತ್ತ  ಆಯೋಜಿಸಿದ್ದ,  ಸಸಿ ನೆಡುವ ಕಾರ್ಯಕ್ರಮ ಮತ್ತು ಮಕ್ಕಳಿಗೆ ಪರಿಸರ ಸಂರಕ್ಷಣೆಯ ಕುರಿತಾದ ಜನಜಾಗೃತಿ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು   ಮಾತನಾಡಿದರು.

ಜಗತ್ತು ಮುಂದೊಂದು ದಿನ ವಾತಾವರಣ ವೈಪರಿತ್ಯ ಬದಲಾವಣೆಯಿಂದ ಕೊನೆಯಾಗುವ ಮುನ್ನ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು, ಮನೆಗೊಂದು ಮರ ಊರಿಗೊಂದು ವನ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರು ತಮ್ಮ ಜೀವನದ ವಿಶೇಷ ದಿನಗಳನ್ನು ಸಸಿ ನೆಡುವ ಮೂಲಕ ಪ್ರತಿದಿನವನ್ನು ಪರಿಸರ ದಿನವನ್ನಾಗಿ ಆಚರಿಸಬೇಕಾಗಿದ್ದು ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ ಎಂದರು.ಇದೇ ವೇಳೆ ಸ್ಥಳೀಯ ಸನ್ಮಾನಿತ ಪರಿಸರ ಪ್ರೇಮಿ, ಮಾನವ ನಿರ್ಮಿತ ಅರಣ್ಯಪಾಲಕ ಕರಿಬಸಪ್ಪ ಕಾಗಿನೆಲೆ ಮಾತನಾಡಿ ಈ ಹಿಂದೆ ಉರುವಲಿಗಾಗಿ ಜನರು ಕಾಡನ್ನ ನಾಶಪಡಿಸುತ್ತಿದ್ದರು ಕಾಲಕ್ರಮೇಣ ಬಲ್ಲಾಳದಂತೆ ಆಧುನಿಕರಣದಿಂದ ಸಿಲಿಂಡರ್ಗಳ ಬಳಕೆಯಿಂದ ಕಟ್ಟಿಗೆಯನ್ನು ಊರುವಲಿಗಾಗಿ ಬಳಸುವುದು ತೀರಾ ವಿರಳವಾಗಿದ್ದು, ಬದಲಾಗಿ ಮನುಷ್ಯನ ಅತಿಯಾದ ನಗರೀಕರಣ, ಐಷಾರಾಮಿ ಜೀವನಕ್ಕೆ ಬೇಕಾದ ಮರಮುಟ್ಟುಗಳ ತಯಾರಿಕೆಯಲ್ಲಿ ಬೃಹತ್ ಪ್ರಮಾಣದ ಕೈಗಾರಿಕೆಗಳು ಹುಟ್ಟಿಕೊಂಡು ಯಥೇಚ್ಛವಾಗಿ ಕಾಡನ್ನ ನಾಶ ಮಾಡುತ್ತಾ ಸಾಗಿದ್ದಾನೆ  ಪ್ರಕೃತಿ ಮೇಲೆ ಎಸಗುವ ದುಷ್ಕೃತ್ಯಕ್ಕೆ ಪ್ರತಿಯೊಬ್ಬರು ಕಾರಣರು, ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ಜೀವನವನ್ನು ರೂಢಿಯಾಗಿಸಿಕೊಳ್ಳಬೇಕು, ಹೆಚ್ಚು ಹೆಚ್ಚು ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಗಿಡ ನೆಡುವಂತಾಗಬೇಕು ಎಂದರು. ಈಗಾಗಲೇ ಇರುವ ಗಿಡ ಮರಗಳನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಅಂದಾಗ ಮಾತ್ರ ಜೀವ ಜೀವನ ಮಣ್ಣು ಪ್ರಕೃತಿ ಎಂದೆಂದಿಗೂ ತಂಪನ್ನ ಎರೆಯುತ್ತದೆ ಎಂದರು. ಸುಧೀರ್ಘವಾಗಿ ಮಾತನಾಡಿದರು.ಇದೇ ವೇಳೆ ಪರಿಸರ ಕಾಳಜಿಯ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಟಿ ಎಸ್ ವಿಜಯಲಕ್ಷ್ಮಿ ಹಾಗೂ ಪರಿಸರ ಪ್ರೇಮಿ ಕರಬಸಪ್ಪ ಕಾಗಿನೆಲೆ ಇವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಚೇರ್ಮನ್ ಡಾ: ಬಸವರಾಜ ಕೇಲಗಾರ್, ಅಧ್ಯಕ್ಷಡಾ ಎಂ ಎಂ ಅನಂತ ರೆಡ್ಡಿ, ಕಾರ್ಯದರ್ಶಿ ಜಿ ಎಸ್ ರಾಮಚಂದ್ರ, ಜಿ ಜಿ ಹೊಟ್ಟಿಗೌಡರ್, ಎಸ್.ಡಿ.ಬಳಿಗಾರ,, ಸುಜಿತ್ ಜಂಬಿಗಿ, ವಿ. ಪಿ. ಪೊಲೀಸಗೌಡ್ರ, ಎಂ.ಆರ್. ಪಾಟೀಲ್, ವಾಸುದೇವ ಗುಪ್ತಾ,, ಅರವಿಂದ್ ಜೈನ್, ರೋಹಿತ್ ಅಗರ್ವಾಲ್, ಜಗದೀಶ್ ಕಲ್ಯಾಣಿ, ರವಿ ಮುಕ್ತೇನಹಳ್ಳಿ ಸೇರಿದಂತೆ  ಮತ್ತಿತರರು ಉಪಸ್ಥಿತರಿದ್ದರು.H7-RNR03-ನ್ಯೂಸ್. ಅಂಡ್ ಫೋಟೋ

ಸುದ್ದಿ ಓದಿ