ಬೈಲಹೊಂಗಲ

ಪತ್ರಿಕಾ ವಿತರಕರ ದಿನ ಆಚರಣೆ: ರೇಶ್ಮಿ, ಕಲಾದಗಿ, ನದಾಫಗೆ ಸನ್ಮಾನ

ಪತ್ರಿಕಾ ವಿತರಕರ ದಿನ ಆಚರಣೆ: ರೇಶ್ಮಿ, ಕಲಾದಗಿ, ನದಾಫಗೆ ಸನ್ಮಾನ

ಬೈಲಹೊಂಗಲ: ಪತ್ರಿಕಾ ವಿತರಕರು ಪತ್ರಿಕೆ ಹಂಚುವುದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಉಜ್ಜೀವನ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸುನೀಲ ತೇರದಾಳ ಹೇಳಿದರು. 

ಪಟ್ಟಣದ ಉಜ್ಜೀವನ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ಆವರಣದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರನ್ನು ಸತ್ಕರಿಸಿ ಅವರು ಮಾತನಾಡಿದರು. 

ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಮನೆ, ಮನೆಗೆ ಪ್ರತಿದಿನ ತಪ್ಪದೆ ಮುಟ್ಟಿಸುವ ಪತ್ರಿಕಾ ವಿತರಕರ ಸೇವೆ ಅನುಪಮವಾಗಿದೆ. ಇದೇ ರೀತಿ ತಮ್ಮ ವೃತ್ತಿಯನ್ನು ಮುನ್ನಡೆಸಿಕೊಂಡು ಸಮಾಜಕ್ಕೆ ಅತ್ಯ ಅಮೂಲ್ಯ ಕೊಡುಗೆ ನೀಡಬೇಕು. ಸಕರ್ಾರ, ಖಾಸಗಿ ಸಂಸ್ಥೆ, ದಾನಿಗಳು ಪತ್ರಿಕಾ ವಿತರಕರ ಸೇವೆ ಗುರುತಿಸಿ ಗೌರವಿಸುವ ಕಾರ್ಯ ಆಗಬೇಕು ಎಂದರು. 

ವಿತರಕ ಕುಮಾರ ರೇಶ್ಮಿ ಮಾತನಾಡಿ, ಪ್ರತಿದಿನ ಬೆಳಿಗ್ಗೆ ಎದ್ದು ಚಳಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಸುಮಾರು 45 ವರ್ಷಗಳಿಂದ ಪತ್ರಿಕೆ ವಿತರಕರಾಗಿ ಸೇವೆ ಮಾಡುತ್ತಿದ್ದೇವೆ. ಸಕರ್ಾರ ಆಗಲಿ, ದಾನಿಗಳು ಇದುವರೆಗೂ ಪತ್ರಿಕಾ ಏಜೆಂಟರು, ವಿತರಕರ ನೋವು, ನಲಿವುಗಳಿಗೆ ಸ್ಪಂದಿಸಿಲ್ಲ. ನಮ್ಮನ್ನು ಅಸಂಘಟಿತ ಕಾಮರ್ಿಕರು ಎಂದು ಗುರುತಿಸಿ ಸಕರ್ಾರ ಗೌರವಧನ ಕಲ್ಪಿಸಬೇಕು. ಇಷ್ಟು ವರ್ಷಗಳ ನಂತರ ಉಜ್ಜಿವನ್ ಬ್ಯಾಂಕಿನವರು ನಮ್ಮ ಸೇವೆ ಗುರುತಿಸಿ ಗೌರವ ಸಲ್ಲಿಸಿರುವುದು ಸಂತಸ ತಂದಿದೆ. ಅತೀ ವೇಗದಲ್ಲಿ ಬೆಳೆಯುತ್ತಿರುವ ಉಜ್ಜೀವನ್ ಬ್ಯಾಂಕಿನ ಸವಲತ್ತುಗಳನ್ನು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.  

ವಿತಕರಾದ ಪ್ರಕಾಶ ಕಲಾದಗಿ, ಶರೀಫ ನದಾಫ ಮಾತನಾಡಿದರು. ಸಿಬ್ಬಂದಿಗಳಾದ ಸಿದ್ದಪ್ಪ ಏಣಗಿ, ಸಿದ್ದಪ್ಪ ಕಂಠಿ, ಸುನೀಲ ಗೊಂದಲಿ, ಅಜರಥ್ ನದಾಫ, ಮಹಾದೇವ ಕೋಲಕಾರ, ಪ್ರಕಾಶ ಅಂಬಿಗೇರ, ಈರಣ್ಣಾ ಬಡಿಗೇರ, ಮಹಾಂತೇಶ ಗಜೊರ, ಸೋಮೇಶ ಪೂಜೇರಿ, ಶುಂಭ ಶೆಟ್ಟರ, ಗ್ರಾಹಕರು ಇದ್ದರು 

ಸುದ್ದಿ ಓದಿ