ಬೈಲಹೊಂಗಲ

ನೂಲಿ ಚಂದಯ್ಯ ಜಯಂತಿ ಆಚರಣೆ

ನೂಲಿ ಚಂದಯ್ಯ ಜಯಂತಿ ಆಚರಣೆ

ಲೋಕದರ್ಶನ ವರದಿ

ಬೈಲಹೊಂಗಲ 01: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಶಿವಶರಣ ನೂಲಿ ಚಂದಯ್ಯ ಅವರ 916 ನೇ ಜಯಂತಿಯನ್ನು ಆಚರಣೆ  ಮಾಡಲಾಯಿತು. 

     ತಹಸೀಲ್ದಾರ ಸಚ್ಚಿದಾನಂದ ಕುಚನೂರ ನೂಲಿ ಚಂದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, 12ನೇ ಶತಮಾನದ  ಬಸವಾದಿ ಪ್ರಥಮರ ಸಮಕಾಲೀನ ಚಂದಯ್ಯ ಅವರು ಬಸವಣ್ಣನವರ ವಿಚಾರಧಾರೆಯಿಂದ ಪ್ರಭಾವಿತರಾಗಿ  ಕಲ್ಯಾಣದ ಶಿವಾನುಭವ ಮಂಟಪಕ್ಕೆ ಬಂದು ಸೇರಿದರು.  ಸಮಾಜದ ಅಂಕುಡೊಂಕು ತಿದ್ದುವಲ್ಲಿ ಅವರ ವಚನಗಳು ಸಹಕಾರಿಯಾಗಿವೆ. ಸಮಾಜ ಭಾಂದವರು ಮೂಲ ವೃತ್ತಿ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ  ಬರಬೇಕು ಎಂದರು. 

  ಸದಾಶಿವಯ್ಯ ಪತ್ರಿಮಠ ಶಾಸ್ರ್ತಿ ಸಾನಿಧ್ಯ ವಹಿಸಿದ್ದರು. 

   ಸಮಾಜದ ಮುಖಂಡರಾದ ಪ್ರಭಾಕರ ಭಜಂತ್ರಿ, ಬಾಳಪ್ಪ ಭಜಂತ್ರಿ, ಭೂಶೆಪ್ಪ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಮನೋಜ ಕೆಳಗೇರಿ ಸಂಜು ಭಜಂತ್ರಿ, ಹಣಮಂತ ಭಜಂತ್ರಿ, ಬಸವಂತ ಭಜಂತ್ರಿ ಅನೇಕರು ಇದ್ದರು 

ಸುದ್ದಿ ಓದಿ