ರಾಣೆಬೆನ್ನೂರ

ಸಿನಿಮಾದಲ್ಲಿ ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ: ಸುರೇಶ್

ಸಿನಿಮಾದಲ್ಲಿ ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ: ಸುರೇಶ್

ರಾಣೆಬೆನ್ನೂರ19: ಮುಂದಿನ ದಿನಮಾನಗಳಲ್ಲಿ ತಯಾರಿಸುವ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದಾಗಿ ರಾಜ್ಯ ಚಲನಚಿತ್ರ ನಿಮರ್ಾಪಕರ ಸಂಘದ ಕಾರ್ಯದರ್ಶಿ  ಎನ್ ಎಂ ಸುರೇಶ್ ಭರವಸೆ ನೀಡಿದರು. 

ಇಲ್ಲಿನ ನೀಲಕಂಠೇಶ್ವರ ಸಭಾಭವನದಲ್ಲಿ ನಡೆದ ಲಕ್ಷ್ಮಿ ನರಸಿಂಹ ಪ್ರೊಡಕ್ಷನ್, ವರಸಿದ್ಧಿ ವಿನಾಯಕ ಕ್ರಿಯೇಷನ್ಸ್ ಅರ್ಪಿಸುವ ಅನ್ನದಾತನ ಅಳಲು ಕನ್ನಡ ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.   ಉತ್ತರ ಕರ್ನಾಟಕ ಭಾಗಕ್ಕೆ ಸಿನಿಮ ಹಾಗೂ ರಂಗಭೂಮಿಗಳಲ್ಲಿ ಬಹಳಷ್ಟು ಯುವ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಮೊದಲಿಂದಲೂ ಕೇಳಿಬರುತ್ತವೆ ಇದನ್ನು ಹೋಗಲಾಡಿಸಲು ಮುಂದಿನ ಸಿನಿಮಾದಲ್ಲಿ ಯುವ ಪ್ರತಿಭೆಗಳನ್ನು ಹಾಕಿಕೊಂಡು ಸಿನಿಮಾ ಮಾಡುವದಾಗಿ ಸುರೇಶ್ ಹೇಳಿದರು.

 ಸಿನಿಮಾ ಕೇವಲ ಮನರಂಜನೆಯಲ್ಲ ಹಣ ಮಾಡುವ ಉದ್ಯಮಿಯು ಅಲ್ಲ ಸಮಾಜವನ್ನು ಸುಧಾರಿಸುವ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಸಿನೆಮಾ ರಂಗವನ್ನು ಅಭಿವೃದ್ಧಿಪಡಿಸಬೇಕು ಎಂದು ಸುರೇಶ್ ಹೇಳಿದರು ನಿರ್ದೇಶಕ ಬಿ ಎಸ್ ಸುನಿಲ್ ನಿರ್ಮಾಪಕ ಗುರುರಾಜ್ ಶಿರಹಟ್ಟಿ ನೇತೃತ್ವದ ಅನ್ನದಾತನ ಅಳಲು ವಿರು ಚಿತ್ರ ತತ್ಸಮವಾಗಿ ಮೂಡಿಬಂದಿದೆ ಅನ್ನದಾತನ ಅಳಲಿಗೆ ಅಂತ್ಯವಿಲ್ಲ ಅದನ್ನು ಧಾರ್ಮಿಕವಾಗಿ ಸಮಾಜಕ್ಕೆ ಅರಿವು ಮೂಡಿಸುವ ಕೆಲಸವನ್ನು ಇವರುಗಳು ಮಾಡಿದ್ದಾರೆ ಎಂದರು.

ಬಿಎಸ್ ಸುನಿಲ್ ನಿರ್ದೇಶನದ ಚಿತ್ರವನ್ನು ಮುಂಬರುವ ದಿನಮಾನಗಳಲ್ಲಿ ನಿರ್ಮಾಪಕನಾಗಿ ಕೆಲಸ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರ ರಲ್ಲದೆ ಸಾಧನೆ ಮಾಡುವಾಗ ಪ್ರಯತ್ನದ ಜೊತೆಗೆ ದೈವ ಇಚ್ಛೆಯು ಸಹ ಬೇಕೆಂದು ಹೇಳಿದರು ಸಮಾಜ ಸೇವೆಗೆ ಭಾರತಿ ಅಳವಂಡಿ ಕಾರ್ಯಕ್ರಮ ಉದ್ಘಾಟಿಸುವರು. 

ಶಿಕ್ಷಣ ಪ್ರೇಮಿ ಡಾ. ಆರ್.ಎಂ ಕುಬೇರಪ್ಪ ಅಧ್ಯಕ್ಷತೆ ವಹಿಸಿದ್ದರು ವರ್ತಕ ಎಂ ಎಸ್ ಅರಿಕೇರಿ, ಎಂ ಎಚ್ ಪಾಟೀಲ,ಚಿತ್ರಕಥೆ, ಸಂಭಾಷಣೆ, ನಿರ್ಮಾಪಕ ಹಾಗೂ ಪತ್ರಕರ್ತ ಗುರುರಾಜ ಶಿರಹಟ್ಟಿ, ಬಿ.ಎ ಸುನಿಲ್ ದೇವರಗುಡ್ಡ, ಪ್ರಕಾಶ ಬುರಡಿಕಟ್ಟಿ, ಜೆಎಂ ರಾಜಶೇಖರ, ಲತಾ ವೆಂಕಟೇಶ ನಿಟ್ಟೂರ,  ರಾಮನಗೌಡ ಪಾಟೀಲ,ಲ, ರವೀಂದ್ರ ಗೌಡ ಪಾಟೀಲ , ಮಂಜುನಾಥ ಚಲವಾದಿ, ಶಂಕರ, ಶಶಿಕಲಾ, ಪರಿಮಳ, ಕಾವ್ಯಾ ಮತ್ತಿತರರು ಇದ್ದರು. ಕಾರ್ಯಕ್ರಮದ ನಂತರ ಅನ್ನದಾತನ ಅಳಲು ಕಿರು ಚಿತ್ರವನ್ನು ಪ್ರದರ್ಶಿಸಲಾಯಿತ 

ಸುದ್ದಿ ಓದಿ