ಅಥಣಿ

ಉದ್ಯಮಿಗಳಿಗೆ ಅರ್ಥವಾಗಲು ಮರಾಠಿ ಬಳಕೆ: ಸಚಿವ ಸವದಿ ಸಮರ್ಥನೆ

ಉದ್ಯಮಿಗಳಿಗೆ ಅರ್ಥವಾಗಲು ಮರಾಠಿ ಬಳಕೆ: ಸಚಿವ ಸವದಿ ಸಮರ್ಥನೆ

ಲೋಕದರ್ಶನ ವರದಿ

ಅಥಣಿ 03: ಜವಳಿ ಮತ್ತು ಅಲ್ಪ ಸಂಖ್ಯಾತ ಸಚಿವರಾದ ಶ್ರೀಮಂತ ಪಾಟೀಲ ಇವರು ಅಚ್ಚ ಕನ್ನಡಿಗರೇ ಮತ್ತು ಅವರೂ ಕೂಡ ಕನ್ನಡದಲ್ಲಿಯೇ ಮಾತನಾಡುತ್ತಾರೆ ಆದರೆ ಇತ್ತೀಚಿಗೆ ಸಕ್ಕರೆ ಕಾರಖಾನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಉದ್ಯಮಿಗಳಿಗೆ ಕೆಲ ವಿಷಯಗಳ ಮಾಹಿತಿ ಕೊಡಬೇಕೆನ್ನುವ ಉದ್ದೇಶದಿಂದ ಅವರಿಗೆ ಅರ್ಥವಾಗಲು ಮರಾಠಿ ಭಾಷೆಯಲ್ಲಿ ಮಾತನಾಡಿದ್ದಾರೆ ಹೊರತು ಬೇರೆ ಯಾವುದೇ ಕಾರಣಕ್ಕೆ ಅಲ್ಲ ಈ ಕುರಿತು ಅವರೊಂದಿಗೆ ಚಚರ್ಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು. 

ಪ್ರಾದೇಶಿಕ ಸಹಾಯಕ ಸಾರಿಗೆ ಅಧಿಕಾರಿಗಳ ಕಛೇರಿ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ರಾಮಲಿಂಗಾರೆಡ್ಡಿಯವರು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಅಥಣಿಯಲ್ಲಿ ಸಾರಿಗೆ ಕಛೇರಿಯನ್ನು ಪ್ರಾರಂಭಿಸಬೇಕು ಮನವಿ ಮಾಡಿಕೊಂಡಿದ್ದೆ. ಆದರೆ ಅಂದು ನನ್ನ ಬೇಡಿಕೆ ಈಡೇರಲಿರಲಿಲ್ಲ ಇಂದು ನಾನೇ ಸಾರಿಗೆ ಸಚಿವನಾಗಿರುವ ಕಾರಣ ಈ ಭಾಗದ ಜನರ ಅನಕೂಲಕ್ಕಾಗಿ ಅಥಣಿ ಪಟ್ಟಣದಲ್ಲಿ ಸಹಾಯಕ ಪ್ರಾದೇಶಿಕ ಕಛೇರಿಯನ್ನು ಪ್ರಾರಂಭಿಸಿರುವೆ ಎಂದು ಹೇಳಿದರು. 

ಕಳೆದ ವರ್ಷ ತೆರಿಗೆ ಸಂಗ್ರಹದ ಗುರಿ ಸುಮಾರು 7000 ಕೋಟಿ ರೂ.ಗಳಷ್ಟಿತ್ತು. ಈ ಪೈಕಿ 6700 ಕೋಟಿ ರೂ,. ತೆರಿಗೆ ಸಂಗ್ರಹಿಸುವ ಮೂಲಕ ಶೇ.94 ರಷ್ಟು ಗುರಿ ಇಲಾಖೆ ಸಾಧಿಸಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಕೊರೊನಾ ಪರಿಣಾಮ ಸಂಗ್ರಹವಾಗಬೇಕಿದ್ದ 7114 ಕೋಟಿ ರೂ. ತೆರಿಗೆಯಲ್ಲಿ ಈವರೆಗೆ ಕೇವಲ ಶೇ.35 ರಷ್ಟು ಕೂಡ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಹೇಳಿದರು. 

ಕಬ್ಬು ಕಟಾವು ಯಂತ್ರಗಳ ಮೇಲೆ 6 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತಿತ್ತು. ಇದರಿಂದ ರೈತರಿಗೆ ಸಾಕಷ್ಟು ಆಥರ್ಿಕ ಹೊರೆ ಉಂಟಾಗುತ್ತಿತ್ತು. ಆದರೆ ಪ್ರಸಕ್ತ ವರ್ಷದಿಂದಲೇ ಈ ತೆರಿಗೆಯನ್ನು 3 ಲಕ್ಷಕ್ಕೆ ಕಡಿತಗೊಳಿಸಲಾಗಿದೆ. 

ಇದರಿಂದ ಸಕ್ಕರೆ ಕಾರಖಾನೆಗಳಿಗೆ ಅನಕೂಲವಾಗಲಿದೆ ಎಂದ ಅವರು, ಅಥಣಿ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಹಾಯಕ ಪ್ರಾದೇಶಿಕ ಕಛೇರಿ 2 ವರ್ಷಗಳವರೆಗೆ ಮಾತ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದ್ದು, ಮುಂದಿನ 2 ವರ್ಷಗಳ ಒಳಗಾಗಿಯೇ ಅಥಣಿ ಜಮಖಂಡಿ ರಸ್ತೆಯ ಪಕ್ಕದಲ್ಲಿರುವ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ಮತ್ತು ಚಾಲನಾ ತರಬೇತಿ ಕೇಂದ್ರ ಪ್ರಾರಂಭಿಲಸಾಗುವುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜವಳಿ, ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ಕುಡಚಿ ಶಾಸಕ ಪಿ.ರಾಜೀವ ಸೇರಿದಂತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ