ಅಥಣಿ

ಶಾಸಕ ಶ್ರೀಮಂತ ಪಾಟೀಲರ ಗೆಲುವು ನಿಶ್ಚಿತ: ದಾದಾ ಶಿಂಧೆ

ಶಾಸಕ ಶ್ರೀಮಂತ ಪಾಟೀಲರ ಗೆಲುವು ನಿಶ್ಚಿತ: ದಾದಾ ಶಿಂಧೆ

ಅಥಣಿ 13: ಅಭಿವೃದ್ಧಿ ಹರಿಕಾರರಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲರ ಗೆಲುವು ನಿಶ್ಚಿತ ಎಂದು ಅನಂತಪುರ ಬಿಜೆಪಿ ಮುಖಂಡ ಹಾಗೂ ಮಾಜಿ ಜಿ.ಪಂ ಸದಸ್ಯ ದಾದಾ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದರು. ಅವರು ಅನಂತಪುರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

      ಕಾಗವಾಡ ಮತಕ್ಷೇತ್ರದಲ್ಲಿ ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೂ ಹಿಂದೆದೂ ಅನುಷ್ಠಾನ ಗೊಳ್ಳದ ಸುಮಾರು 3000 ಕೋಟಿ ಅನುದಾನದಲ್ಲಿ ನೀರಾವರಿ, ವಿದ್ಯುತ್, ರಸ್ತೆ, ಕುಡಿಯುವ ನೀರು, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ವಿವಿಧ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳು ಅನುಷ್ಠಾನ ಗೊಂಡಿವೆ ಎಂದರು. 

     ಕಾಗವಾಡ ಕ್ಷೇತ್ರದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಅನಂತಪುರ ಒಂದೇ ಒಂದು ಗ್ರಾಮದಲ್ಲಿ 28 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಿದ್ದಾರೆ ಎಂದ ಅವರು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಗವಾಡ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದ ಶಾಸಕ ಶ್ರೀಮಂತ ಪಾಟೀಲರನ್ನು ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ನಾವೆಲ್ಲ ಬೆಂಬಲಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸೋಣ ಎಂದು ಮನವಿ ಮಾಡಿದರು. 

     ಅನಂತಪುರ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಹಬಗೊಂಡೆ, ಮಹಾಂತೇಶ್ ಮಠಪತಿ, ಧೋಂಡಿರಾಮ ಶಿಂಧೆ, ಹಸನ್ ಅತ್ತಾರ, ಮೈನುದ್ದಿನ ದಲಮೋಡೆ, ನಾನಾ ಡಾಂಗೆ, ಇಬ್ರಾಹಿಂ ದಲಮೋಡೆ ಉಪಸ್ಥಿತರಿದ್ದರು 

ಸುದ್ದಿ ಓದಿ