ಅಗ್ರಣಿ ನದಿಗೆ ನಿರ್ಮಿಸುತ್ತಿರುವ ಬಾಂದಾರ ಪರಿಶೀಲನೆ
ಸಂಬರಗಿ 18: ಗಡಿ ಭಾಗದಲ್ಲಿ ಅಗ್ರಣಿ ನದಿಗೆ ಬಾಂದಾರ ನಿರ್ಮಿಸಿ ನೀರಿನ ಸಂಗ್ರಹವನ್ನು ನೋಡುವ ಮೂಲಕ ಅಬಿವೃದ್ಧಿ ನೋಡಿ ಆರ್ಎಸ್ಎಸ್ ಉತ್ತರ ಪ್ರಾಂತ ಸಂಚಾಲಕ ಅರವಿಂದ ದೇಶಪಾಂಡೆ ಹಾಗೂ ಶಾಸಕ ಶ್ರೀಮಂತ ಪಾಟೀಲ ಸಂತಸ ವ್ಯಕ್ತ ಪಡಿಸಿದರು.
ಒಂದು ಕಾಲದಲ್ಲಿ ಬರಪೀಡಿತವಾಗಿದ್ದ ಗಡಿ ಪ್ರದೇಶವು ಆಡಳಿತಗಾರ ಶ್ರೀಮಂತ ಪಾಟೀಲ ಪ್ರಯತ್ನದಿಂದ ಕ್ಷೇತ್ರ ಸ್ವರ್ಗವಾಗಿದೆ. ಆ ಭಾಗ ಹಸಿರಿನಿಂದ ಕಂಗೊಳಿಸುತ್ತಿದೆ. ಅಗ್ರಣಿ ತೀರದಲ್ಲಿ ಇರುವ ತೆರೆದ ಭಾವಿ ಕೊಳವೇ ಭಾವಿಗೆ ನೀರಿನ
ಮಟ್ಟ ಹೆಚ್ಚಳವಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಅಗ್ರಣಿ ನದಿಯಲ್ಲಿ ನಿರ್ಮಿಸುವ ಮುರಗುಂಡಿ, ಅಬ್ಯಾಳ, ಶಿವನೂರ, ಶಿರುರ, ಸಂಬರಗಿ, ಪಾಂಡೆಗಾಂವ, ಅಜುರ, ನಾಗನುರ ಪಿಎ, ಕಲೊತ್ತಿ, ತಾಂವಶಿ, ಪ್ರದೇಶದಲ್ಲಿ ನೂರಾರು ಎಕರೆ ಭೂಮಿಗೆ ನೀರು ಒದಗಸಲಾಗಿದೆ.
ಧೋಂಡಿರಾಮ ಅವಳೆಕರ, ಅಬ್ದುಲ ಮುಲ್ಲಾ, ರಾಮ ಸೊಡ್ಡಿ, ರಮೇಶ ಅವಳೆಕರ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.