ನೂತನ ವೈಭವ ಸ್ಟೋನ್ ಕ್ರಷರ್ ಉದ್ಘಾಟನೆ
ನೂತನ ವೈಭವ ಸ್ಟೋನ್ ಕ್ರಷರ್ ಉದ್ಘಾಟನೆ
ಅಥಣಿ 03: ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ ಮತ್ತು ರಾವಸಾಹೇಬ ಐಹೊಳೆ ಮಾಲಿಕತ್ವದಲ್ಲಿ ನೂತನವಾಗಿ ಪ್ರಾರಂಭಗೊಂಡ ವೈಭವ ಸ್ಟೋನ್ ಕ್ರಷರ್ ಮೂಲಕ ಕಾಗವಾಡ ತಾಲೂಕಿನ ಪ್ರಗತಿಗೆ ಪೂರಕವಾಗಲಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಶುಭ ಹಾರೈಸಿದರು.
ಅವರು ಉಗಾರ ಬುದ್ರಕ್ ಗ್ರಾಮದಲ್ಲಿ ಪ್ರಾರಂಭಗೊಂಡ ವೈಭವ ಸ್ಟೋನ್ ಕ್ರಷರ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಗವಾಡ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಟೋನ ಕ್ರಷರಗಳ ಕೊರತೆ ಇತ್ತು ಈ ಕೊರತೆಯನ್ನು ವೈಭವ ಸ್ಟೋನ್ ಕ್ರಷರ ಪೂರ್ಣಗೊಳಿಸಿದೆ ಎಂದರು.
ಸ್ಟೋನ್ ಕ್ರಷರ್ ಪಾಲುದಾರ ಗಜಾನನ ಮಂಗಸೂಳಿ ಮಾತನಾಡಿ, ಸ್ಟೋನ್ ಕಾಗವಾಡ ಭಾಗದ ಜನರ ಅನಕೂಲಕ್ಕಾಗಿ ಈ ಸ್ಟೋನ್ ಕ್ರಷರ್ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು. ಮತ್ತೊರ್ವ ಪಾಲುದಾರ ರಾವಸಾಹೇಬ ಐಹೊಳೆ ಮಾತನಾಡಿ, ಕಾಗವಾಡ ಭಾಗದಲ್ಲಿ ಸ್ಟೋನ್ ಕ್ರಷರ್ ಪ್ರಾರಂಭಗೊಳ್ಳಬೇಕು ಎಂದು ಅನೇಕ ವರ್ಷಗಳಿಂದ ಈ ಭಾಗದ ಗುತ್ತಿಗೆದಾರರ ಮತ್ತು ಜನಸಾಮಾನ್ಯರ ಬೇಡಿಕೆ ಆಗಿತ್ತು ಹೀಗಾಗಿ ಇಲ್ಲಿ ಪ್ರಾರಂಭಿಸಲಾಗಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೆ.ಎಮ್.ಎಫ್ ಮಾಜಿ ನಿರ್ದೇಶಕ ಅಪ್ಪಸಾಹೇಬ ಅವತಾಡೆ ಮಾತನಾಡಿ, ಕಾಗವಾಡ ಭಾಗದ ಜನ ಮನೆ ಕಟ್ಟಡಕ್ಕಾಗಿ ಅಥವಾ ಗುತ್ತಿಗೆದಾರರು ತಮ್ಮ ಕೆಲಸಗಳಿಗೆ ದಪ್ಪ, ಸಣ್ಣ ಖಡಿ, ಎಮ್ ಸ್ಯಾಂಡ ಗಾಗಿ ಪಕ್ಕದ ಮಹಾರಾಷ್ಟ್ರ ಅಥವಾ ಅಥಣಿ ತಾಲೂಕನ್ನು ಅವಲಂಬಿಸಬೇಕಿತ್ತು. ಈಗ ಇಲ್ಲಿ ಪ್ರಾರಂಭಗೊಂಡ ವೈಭವ ಸ್ಟೋನ್ ಕ್ರಷರ್ ಎಲ್ಲರಿಗೂ ಅನಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಗಣ್ಯ ನಾಗರಿಕರು ಉಪಸ್ಥಿತರಿದ್ದರು.