ಹಾವೇರಿ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹಾವೇರಿ : ನಗರದ ಲಾಯನ್ಸ್ ಶಾಲೆಯ ಸಭಾಭವನದಲ್ಲಿ ಪ್ರಸಕ್ತ ಸಾಲಿನ ಲಾಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.

       ನೂತನ ಅಧ್ಯಕ್ಷರಾಗಿ ಪಿ.ಡಿ. ಶಿರೂರ, ಕಾರ್ಯದರ್ಶಿಯಾಗಿ ಪಿ.ಸಿ. ಹಿರೇಮಠ ಮತ್ತು ಖಜಾಂಚಿಯಾಗಿ ಎ.ಎಸ್. ಮಾಗನೂರ ಆಯ್ಕೆಯಾದರು. ಡಾ. ಗಿರೀಶ ಕುಚಿನಾಡ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಿಕಟಪೂರ್ವ ಅಧ್ಯಕ್ಷ ವಿ.ಜಿ. ಬಣಕಾರ ಲಾಯನ್ಸ್ ಸಂಸ್ಥೆಯ 50ನೇ ವರ್ಷದಲ್ಲಿ ನಾನು ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವುದು ನನಗೆ ತೃಪ್ತಿ ತಂದಿದೆ. ಅತಿ ಹೆಚ್ಚು ಕಾರ್ಯಕ್ರಮಗಳನ್ನು ನಿಯೋಜನೆಗೊಂಡಿರುವುದು ಸಂಸ್ಥೆಯ ಸದಸ್ಯರ ಸಹಕಾರ ಮುಖ್ಯ ಕಾರಣ  ಎಂದು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.ಅಧಿಕಾರ ಸ್ವೀಕರಿಸಿದ ಪಿ.ಡಿ.ಶಿರೂರ ಅವರು ಸಮಾಜದಲ್ಲಿ ನನಗೆ ಹಲವಾರು ಜವಾಬ್ದಾರಿಗಳಿವೆ. ಅದರ ಜೊತೆಯಾಗಿ ಲಾಯನ್ಸ್ ಸಂಸ್ಥೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸುವುದು ನನಗೆ ಇನ್ನೂ ಖುಷಿ ಕೊಟ್ಟಿದೆ ಎಂದರು.

      ವಿವಿಧ ಸಂಘ ಸಂಸ್ಥೆಗಳಿಂದ ಆಗಮಿಸಿದ ಸದಸ್ಯರು ನೂತನ ಅಧ್ಯಕ್ಷರಿಗೆ,ಕಾರ್ಯದರ್ಶಿಗಳಿಗೆ ಮತ್ತು ಖಚಾಂಚಿಗಳಿಗೆ ಸನ್ಮಾನಿಸಿ,ಗೌರವಿಸಿ ಅಭಿನಂದಿಸಿದರು.  ಶಿವಮ್ಮ ಹಂದ್ರಾಳ ಇವರಿಗೆ ಹೊಲಿಗೆ ಯಂತ್ರವನ್ನು ಕಾಣಿಕೆಯಾಗಿ ನೀಡುವುದರ ಜೊತೆಗೆ, ಲಾಯನ್ಸ್ ಸಂಸ್ಥೆಯ ಸರ್ವಸದಸ್ಯರು ಇದ್ದರು.ಶಾಲಾ ಮಕ್ಕಳು ಪ್ರಾರ್ಥನೆ ಮಾಡಿದರೆ,ನಿಕಟಪೂರ್ವ ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿದರು.ಎ.ಎಚ್. ಕಬ್ಬಿಣಕಂತಿಮಠ ನಡೆದ ಕಾರ್ಯ ಚಟುವಟಿಕೆಗಳ ವರದಿ ವಾಚನ ಮಾಡಿದರು.ನಿತಿನ್ ಹೊರಡಿ ಅತಿಥಿಗಳ ಪರಿಚಯ ಮಾಡಿದರು.ಅಶೋಕ ಹೇರೂರ ಮತ್ತು ಎಸ್.ಎಚ್. ಕಬ್ಬಿಣಕಂತಿಮಠ ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು 

ಸುದ್ದಿ ಓದಿ