ಅಥಣಿ

ಸಾಂಗಲಿ, ಕೊಲ್ಹಾಪುರ ಜಿಲ್ಲೆಯಲ್ಲಿ ಕಬ್ಬಿಗೆ ನೀಡುವ ದರವನ್ನು ನೀಡಲು ಒತ್ತಾಯ

ಸಾಂಗಲಿ, ಕೊಲ್ಹಾಪುರ ಜಿಲ್ಲೆಯಲ್ಲಿ ಕಬ್ಬಿಗೆ ನೀಡುವ ದರವನ್ನು ನೀಡಲು ಒತ್ತಾಯ

ಸಂಬರಗಿ 18: 2022-23 ಕಬ್ಬು ನುರಿಸುವ ಹಂಗಾಮಿಗೆ ಕರ್ನಾಟಕ -ಮಹಾರಾಷ್ಟ್ರ ಗಡಿಯಲ್ಲಿರುವ ಸಾಂಗಲಿ, ಕೊಲ್ಹಾಪುರ, ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿ ರೈತರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ನೀಡಬೇಕೆಂದು ಬೀದಿಗಿಳಿದರೂ ಕಾರ್ಖಾನೆಗಳು 2800 ರಿಂದ 2850 ರೂಪಾಯಿ ದರ ಘೋಷಣೆ ಮಾಡಿದ್ದಾರೆ. ಆದರೆ ಸಾಂಗಲಿ ಜಿಲ್ಲೆಯಲ್ಲಿ 3000 ಹಾಗೂ ಕೊಲ್ಹಾಪುರ ಜಿಲ್ಲೆಯ ವಾರಣಾ ಸಕ್ಕರೆ ಕಾರ್ಖಾನೆ  4050 ರೂ ದರ ಘೋಷಣೆ ಮಾಡಿದ್ದಾರೆ. ಆ ಕಾರಣ ಕರ್ನಾಟಕ   ಗಡಿಯಲ್ಲಿರುವ ಕಬ್ಬನ್ನು ಸಾಂಗಲಿ ಮತ್ತು ಕೊಲ್ಹಾಪುರ ಜಿಲ್ಲೆಗೆ ಹೋಗುತ್ತಿವೆ. ಗಡಿಭಾಗದಲ್ಲಿರುವ ಸಕ್ಕರೆ ಕಾರ್ಖಾನೆ ಗಳು ಈ ವರ್ಷದ ನಿಗದಿತ ಗುರಿ ಮುಟ್ಟುವಲ್ಲಿ ಅಸಾಧ್ಯವಿದೆ. ಬೆಳಗಾವಿ ಜಿಲ್ಲೆಯಲ್ಲಿ 27 ಸಕ್ಕರೆ ಕಾರ್ಖಾನೆ ಗಳು ಇದ್ದು, ಅದರಲ್ಲಿ ರೇಣುಕಾ ಶುಗರ್ ಕಾರ್ಖಾನೆ ಮುನ್ನೊಳ್ಳಿ  ಪ್ರತಿ ಟನ್ಗೆ 3000 ದರ ಘೋಷಣೆ ಮಾಡಿ ಹಂಗಾಮು ಪ್ರಾರಂಭ ಮಾಡಿದ್ದಾರೆ. ಈ ಕಾರ್ಖಾನೆ  ಹೊರತು ಇನ್ನಿತರ ಕಾರ್ಖಾನೆ ಗಳು 2800-2850 ದರ ಘೋಷಣೆ ಮಾಡಿವೆ. ಚಿಕ್ಕೋಡಿ ಜಿಲ್ಲೆಯ ಸಮೀಪವಿರುವ ಸಾಂಗಲಿ ಮತ್ತು ಕೊಲ್ಹಾಪುರ ಜಿಲ್ಲೆಯಲ್ಲಿರುವ ಕೆಲವೇ  ಕಾರ್ಖಾನೆ ಗಳು 3000 ದಿಂದ 4000  ರೂಪಾಯಿ ಪ್ರತಿ ಟನ್ ಗೆ ದರ ನೀಡಿ ಕಬ್ಬು ಸಾಗಾಣಿಕೆ ಮಾಡುತ್ತಿದ್ದಾರೆ. ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ತಾಲೂಕಿನ ಹಲವಾರು ರೈತರು ತಮಗೆ ಹೆಚ್ಚು ದರ ಸಿಗುವಕಾರ್ಖಾನೆ ಗಳಿಗೆ ಕಬ್ಬು ಕಟಾವು ಮಾಡಿ ಸಾಗಾಟ ಮಾಡುತ್ತಿದ್ದಾರೆ. ಆ ಕಾರಣ ಇಲ್ಲಿರುವ ಸ್ಥಳೀಯ ಸಕ್ಕರೆ ಕಾರ್ಖಾನೆ ಗಳಿಗೆ ಕಬ್ಬು ಕೊರತೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ತಮ್ಮ ಗುರಿ ಮುಟ್ಟಬೇಕಾದರೆ ಸಾಂಗಲಿ ಮತ್ತು ಕೊಲ್ಹಾಪುರ ಜಿಲ್ಲೆಯಲ್ಲಿ ಘೋಷಿಸುವ ದರ ನೀಡಿ ಅಲ್ಲಿಯ ಕಬ್ಬನ್ನು ಕಟಾವು ಮಾಡಿಕೊಂಡು ತಮ್ಮ ಗುರಿ ಮುಟ್ಟಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಕಬ್ಬು ಸಾಗಾಣಿಕೆ ಮಾಡುವ ರೈತರಿಗೆ ಮಲತಾಯಿ ಧೋರಣೆ ಯಾಕೆಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.ಕರ್ನಾಟಕ  ರೈತ ಸಂಘ ಹಸಿರು ಸೇನೆ ವತಿಯಿಂದ ಹಲವಾರು ದಿನಗಳಿಂದ ಪ್ರತಿ ಟನ್ ಕಬ್ಬಿಗೆ  3500 ದರ ನೀಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ ಆದರೆ ಸಕರ್ಾರ ಮಾತ್ರ ಯಾವುದಕ್ಕೂ  ಜಗ್ಗುತ್ತಿಲ್ಲ. ಮಹಾರಾಷ್ಟ್ರದಲ್ಲಿ 3000-4000  ರೂಪಾಯಿ ದರ ನೀಡುತ್ತಿದ್ದರೆ ಕರ್ನಾಟಕ  ದಲ್ಲಿ ಮಾತ್ರ 2850 ಐವತ್ತು ರೂಪಾಯಿ ಮಾತ್ರ ನೀಡುತ್ತಿವೆ. ಇದರಿಂದ ಪ್ರತಿ ಟನ್ ಕಬ್ಬಿಗೆ 300-400 ರೂಪಾಯಿ ವ್ಯತ್ಯಾಸವಾಗುತ್ತಿದೆ. ರೈತರು 18 ತಿಂಗಳು ಕಷ್ಟಪಟ್ಟು ಕಬ್ಬನ್ನು ಬೆಳೆಸಿದ್ದಾರೆ ಆದರೆ ಆ ಕಬ್ಬಿಗೆ ಸರಿಯಾದ ದರ ಸಿಗುತ್ತಿಲ್ಲ. ಸರ್ಕಾರ  ಗಮನ ಹರಿಸಿ ಸಾಂಗಲಿ, ಕೊಲ್ಹಾಪುರ ಜಿಲ್ಲೆಯಲ್ಲಿ ಕೊಡುತ್ತಿರುವ ದರದಂತೆ ಈ ಭಾಗದ ಕಾರ್ಖಾನೆಗಳು ಸಹ ಅದೇ ದರವನ್ನು ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಈ ಕುರಿತು ಅಥಣಿ ತಾಲೂಕಾ ರೈತ ಸಂಘದ ಅಧ್ಯಕ್ಷ ಮಹದೇವ ಮಡಿವಾಳ ಇವರನ್ನು ಸಂಪರ್ಕಿಸಿದಾಗ ರಾಜ್ಯ ಸರ್ಕಾರ  ಗಮನ ಹರಿಸಿ ಮಹಾರಾಷ್ಟ್ರ ಕಾರ್ಖಾನೆ ನೀಡಿರುವ ದರವನ್ನು ಈ ಭಾಗದ ಸಕ್ಕರೆ ಕಾಖರ್ಾನೆಗಳು ನೀಡಬೇಕು. ಇಲ್ಲವಾದರೆ ಈ ಭಾಗದ ತಮ್ಮ ಕಬ್ಬನ್ನು ಯಾವ ಕಾರ್ಖಾನೆಯಲ್ಲಿ ದರ ಹೆಚ್ಚಿದೆ ಆ ಕಾರ್ಖಾನೆಗೆ ಕಬ್ಬನ್ನು ಕಳಿಸಬಹುದು ಎಂದು ಹೇಳಿದರು 

ಸುದ್ದಿ ಓದಿ