ಅಥಣಿ

ಚುನಾವಣೆ ಕರ್ನಾಟಕದಲ್ಲಿ ಬಿಗಿ ಭದ್ರತೆ ಮಹಾರಾಷ್ರದಲ್ಲಿ

ಚುನಾವಣೆ ಕರ್ನಾಟಕದಲ್ಲಿ ಬಿಗಿ ಭದ್ರತೆ ಮಹಾರಾಷ್ರದಲ್ಲಿ

ಲೋಕದರ್ಶನ ವರದಿ

ಸಂಬರಗಿ 02: ಕರ್ನಾಟಕದಲ್ಲಿ 2023 ವಿಧಾನಸಭಾ ಚುನಾವಣೆ ಪ್ರಚಾರ ಭರದಿಂದ ಸಾಗುತ್ತಿದ್ದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಆದರೆ ಕರ್ನಾ ಟಕ ಗಡಿಯಲ್ಲಿ ಇರುವ ಚೆಕ್ಪೋಸ್ಟದಲ್ಲಿ ಸರಿಯಾಗಿ ವಾಹನ ಪರಿಶೀಲನೆ ಮಾಡುತ್ತಿಲ್ಲದಿರುವುದು ಕಂಡು ಬರತಾ ಇದೆ. ಚುನಾವಣೆ ಕರ್ನಾಟಕದಲ್ಲಿ ಬಿಗಿ ಭದ್ರತೆ ಮಹಾರಾಷ್ರದಲ್ಲಿ. ಇನ್ನು ಗಡಿಯಲ್ಲಿ ಚೆಕಪೋಸ್ಟ ಅಲವಡಿಸಿಲ್ಲ. ಆದರೆ ಮಹಾರಾಷ್ಟ್ರ ಪೋಲಿಸ್ ಬಧ್ರತೆ ನೀಡಿದ್ದಾರೆ.

ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೆ ಹೊಂದಿದ್ದು ಈ ಭಾಗದ ಜನರ ಸಂಪರ್ಕ ಮಹಾರಾಷ್ಟ್ರಕ್ಕೆ ಇದ್ದ ಕಾರಣ ಮಹಾರಾಷ್ಟ್ರದಿಂದ ಅನಧಿಕೃತವಾಗಿ ದಾಖಲಾತಿ ಇಲ್ಲದೆ ಬರುವ ವಾಹನವನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಂಡಿರುತ್ತಾರೆ. ಸಾಂಗಲಿ ಜಿಲ್ಲಾ ಪೋಲಿಸ್  ಅಧೀಕ್ಷಕ ಡಾ.ಬಸವರಾಜ ತೇಲಿ ಇವರ ಮಾರ್ಗದರ್ಶನದಲ್ಲಿ ಮೀರಜ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಜತ ತಾಲೂಕಿನ ಉಮದಿ ಹಾಗೂ ಜತ ಪೊಲೀಸ್ ಸ್ಟೇಷನ ವತಿಯಿಂದ ವಿಜಯಪುರ ಜಿಲ್ಲಾ ಗಡಿಯಲ್ಲಿ ಹಾಗೂ ಕಾಗವಾಡ ಕ್ಷೇತ್ರದ ಗಡಿಯಲ್ಲಿ ಮಹಾರಾಷ್ಟ್ರ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಆದರೆ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಅರಳಿಹಟ್ಟಿ ಸಲಗರ ಖಿಳೇಗಾವ ಕ.ಮಹಕಾಂಳ ಇಲ್ಲಿ ಇನ್ನು ಚೆಕ್ಪೋಸ್ಟ ಅಲವಡಿಸಿಲ್ಲ. ಇದು ಅಕ್ರಮ ಮಾಡುವವರಿಗೆ ದಾರಿಯಾ ಎಂಬ ಪ್ರಶ್ನೆ ಜನರಲ್ಲಿ ಉಂಟಾಗಿದೆ?

  ಚುನಾವಣಾ ಅಧಿಕಾರಿಗಳು ಗಮನ ಹರಿಸಿ ಇಲ್ಲಿ ಚೆಕ್ಪೋಸ್ಟ ಪ್ರಾರಂಭ ಮಾಡಿ ಕಳ್ಳ ದಾರಿಯನ್ನು ತಡೆಗಟ್ಟಿಸಬಹುದು ಎಂದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಕಾಗವಾಡ ಚೆಕಪೋಸ್ಟನಲ್ಲಿ ಕಾಟಾ ಚಾರಕ್ಕೆ ಪರಿಶೀಲನೆ ಮಾಡುತ್ತಾರೆ ಎಂದು ತಿಳಿದು ಬಂದಿದೆ 

ಸುದ್ದಿ ಓದಿ