ಬೈಲಹೊಂಗಲ

ನಾಟಕಗಳು ಕಲೆ ಸಂಸ್ಕೃತಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ: ತುರಮರಿ

ನಾಟಕಗಳು ಕಲೆ ಸಂಸ್ಕೃತಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ: ತುರಮರಿ

ಲೋಕದರ್ಶನ ವರದಿ

ಬೈಲಹೊಂಗಲ 20: ನಾಟಕಗಳು ಕಲೆ ಸಂಸ್ಕೃತಿ ಹಾಗೂ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ, ಜೊತೆಗೆ ಸಮಾಜದ ಕನ್ನಡಿಯಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಹೇಳಿದರು. 

     ಅವರು ಪಟ್ಟಣದ  ಎಸ್.ಜಿ.ಚಿಕ್ಕಮಠ ಜಾಗೆಯಲ್ಲಿ ಗುರು ಖಾಸ್ಗತೇಶ್ವರ ನಾಟ್ಯ ಸಂಘ ತಾಳಿಕೋಟಿ ಇವರ ಆಶ್ರಯದಲ್ಲಿ ನಡೆದ ರೊಕ್ಕ ಇದ್ದವಂಗ್ ಸೊಕ್ಕ ಬಾಳ ನಾಟಕದ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿ, ಸಂಗೀತ, ಸಾಹಿತ್ಯ ಮತ್ತು ನಾಟಕಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡುವುದರ ಜತೆಗೆ, ಬದುಕು ಶ್ರೀಮಂತವಾಗುತ್ತದೆ. ಪ್ರತಿಯೊಬ್ಬರು ನಾಟಕ ನೋಡಿ ಪ್ರೋತ್ಸಾಹಿಸಬೇಕೆಂದರು. 

  ಹಾಸ್ಯನಟ ರಾಜು ತಾಳಿಕೋಟಿ ಮಾತನಾಡಿ, ನಮ್ಮ ಸಂಸ್ಕೃತಿ ಪರಂಪರೆಗಳನ್ನು ಉಳಿಸಿ ಬೆಳಸಬೇಕಾದರೆ ನಿರಂತರವಾಗಿ ನಾಟಕ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರಬೇಕು. ಆಳುವ ಸರಕಾರಗಳು ಕಲೆಗಳಿಗೆ ಪ್ರೋತ್ಸಾಹ ನೀಡಿ ಉಳಿಸಿ ಬೇಳೆಸಬೇಕೆಂದರು.

  ಶಾಖಾ  ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚಿತ್ರ ನಿರ್ಮಾಪಕ ದಯಾನಂದ ಚಿಕ್ಕಮಠ, ಕುಮಾರ ದೇಶನೂರ, ಎಸ್.ಎಫ.ಹರಕುಣಿ, ಉದಯ ಖನ್ನಿನಾಯ್ಕರ, ಮಂಜು  ಗುಳೇದಗುಡ್ಡ, ಭರತ ತಾಳಿಕೋಟಿ ಹಾಗೂ ಅನೇಕರು ಇದ್ದರು 

ಸುದ್ದಿ ಓದಿ