ಶಿಕ್ಷಣ ಪೂರೈಕೆಗೆ ಖಾಸಗಿ ಸರ್ಕಾರಿ ಭೇದ ಬೇಡ: ಕೆ. ಹೆಚ್.ಜಾಡರ್
ರಾಣೇಬೆನ್ನೂರು 26 :ಮಕ್ಕಳು ಶೈಕ್ಷಣಿಕವಾಗಿ ಸಮಗ್ರ ಅಭಿವೃದ್ಧಿ ಹೊಂದಿದರೆ, ಸಮಗ್ರ ಕುಟುಂಬವು ಸಾಮಾಜಿಕ, ಆರ್ಥಿಕ ಮತ್ತು ಸಾಮೂಹಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುವುದು ಎಂದು ಪ್ರೆಸ್ ಗ್ರೀನ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಕರಬಸಪ್ಪ ಜಾಡರ್ ಹೇಳಿದರು.
ಅವರು ತಾಲೂಕಿನ ಹುಲ್ಲತ್ತಿ ತಾಂಡಾ ಸ. ಕಿ. ಪ್ರಾ. ಶಾಲೆಯಲ್ಲಿ ನಡೆದ, ಪ್ರೆಸ್ ಗ್ರೀನ್ ಕಂಪನಿಯಿಂದ ಕೊಡ ಮಾಡಿದ ಶಾಲಾ ಮಕ್ಕಳ ಸಮವಸ್ತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಶೈಕ್ಷಣಿಕ ಉತ್ಸುಕತೆ ಹೆಚ್ಚಾಗಿರುತ್ತದೆ. ಬಡ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಾದ ಗುಣ ಧರ್ಮಗಳನ್ನು ಪ್ರತಿಯೊಬ್ಬ ನಾಗರಿಕರು, ಸಂಘ, ಸಂಸ್ಥೆಗಳು ದಾನಿಗಳು ಯೋಜನೆಯನ್ನು ರೂಪಿಸಿಕೊಂಡು ಪ್ರೋತ್ಸಾಹಿಸಲು ಮುಂದಾಗಬೇಕು ಎಂದ ಅವರು, ಪ್ರೆಸ್ ಗ್ರೀನ್ ಸಂಸ್ಥೆಯು, ತನ್ನ ಉದ್ಯಮದ ಯೋಜನೆಯಲ್ಲಿ ದಾನ ಧರ್ಮ ಪರೋಪಕಾರದ,ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಇಂದು 50 ಮಕ್ಕಳಿಗೆ ಶಾಲಾ ಸಮವಸ್ತ್ರಗಳನ್ನು ವಿತರಿಸಲಾಗಿದ್ದು, ಇದರಿಂದ ಮಾನಸಿಕ ಶಾಂತಿ, ನೆಮ್ಮದಿ, ಹೊಂದಿದ್ದೇವೆ ಎಂದರು. ಮಕ್ಕಳೆ ಮುಂದಿನ ಪ್ರಜಗಳು ಸರ್ಕಾರ ಗ್ರಾಮೀಣ ಬಾಗದ ಮಕ್ಕಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಕಲಿತ ಶಾಲೆಗೆ, ಜನ್ಮ ಭೂಮಿ ಗ್ರಾಮಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತರಬೇಕು. ಜನಸಾಮಾನ್ಯರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಧಿಕ ವೆಚ್ಚವನ್ನು ನೀಡುವುದರ ಮೂಲಕ ಶಾಲೆ ಕಲಿಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಖಾಸಗಿ ಸಕರ್ಾರಿ ಎನ್ನುವ ಯಾವುದೇ ಭೇದ ಭಾವ ತೋರದೆ, ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪೂರೈಸಿದಾಗ ಪ್ರಬುದ್ಧ ಪ್ರಜ್ಞಾವಂತರಾಗಲು, ಮತ್ತು ಶೈಕ್ಷಣಿಕ ಸಾಧನೆ ಮಾಡಲು ಮುಂದಾಗಬೇಕು ಎಂದು ಕರಬಸಪ್ಪ ಜಾಡರ್ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರದಾನ ಗುರು ಮಾತೆ ಚನ್ನಮ್ಮ ಬಿಸ್ನಳ್ಳಿ, ಸಹ ಶಿಕ್ಷಕಿ ವಿಜಯಲಕ್ಷ್ಮಿ ವಿನ್ನಿ, ಮಂಜುನಾಥ್ ಲಮಾಣಿ,ಗ್ರಾಮ. ಪ. ಸದಸ್ಯರಾದ ಗೋವಿಂದ ಲಮಾಣಿ, ಜಗಧೀಶ್ ಕೆರೊಡಿ, ಮೋಹಿನುದ್ದಿನ್ ಕೆ,ನೇಮಪ್ಪ ಲಮಾಣಿ, ಬಸವರಾಜ್ ಲಮಾಣಿ. ಜಯಪ್ಪ ಲಮಾಣಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಗಳಿಗೆ ಸರಸ್ವತಿ ಪೂಜೆಯನ್ನು ಸಲ್ಲಿಸಿ ಬೀಳ್ಕೊಡಲಾಯಿತು