ರಾಣೆಬೆನ್ನೂರ

ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ವಿತರಣೆ

ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ವಿತರಣೆ

ರಾಣೆಬೆನ್ನೂರು 13:ತಾಲ್ಲೂಕಿನ ಚೌಡಯ್ಯ ದಾನಪುರ ಗ್ರಾಮದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಹಾರ ಇಲಾಖೆಯ ನಿವೃತ್ತ ವ್ಯವಸ್ಥಾಪಕ  ಎಸ್ ಎಮ್ ಪಂಚಾಕ್ಷರಿ ಅವರು ಇಲ್ಲಿನ 1ನೇ ತರಗತಿಯ ನೂರಾರು ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷ ಜಿ.ವಿ.ದೀಪಾವಳಿ  ಅವರು, ಯಾರು ದಾನ ಧರ್ಮ ಮಾಡುವಂತಹ ಗುಣಗಳನ್ನು ಬೆಳೆಸಿಕೊಂಡು ಮತ್ತೊಬ್ಬರಿಗೆ ದಾನ ಧರ್ಮ ಸಹಾಯ ಮಾಡುತ್ತಾರೋ ಅಂತವರು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದರು. 

ಜ್ಞಾನಿಗಳು ಕೊಡ ಮಾಡಿರುವ ಲೇಖನಿ ಸಾಮಗ್ರಿಗಳನ್ನು ತಮ್ಮ ಶೈಕ್ಷಣಿಕ ವರ್ಷದುದ್ದಕ್ಕೋ ಇಲ್ಲಿನ ವಿದ್ಯಾಥರ್ಿಗಳು ಅತ್ಯಂತ ಜಾಗರೂಕತೆಯಿಂದ ಉಪಯೋಗಿಸಿಕೊಂಡು, ಅವರು ನೀಡಿರುವ ಕೊಡುಗೆಯನ್ನು ಸಾರ್ಥಕತೆ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಶಾಲೆಯ ಮುಖ್ಯಶಿಕ್ಷಕ ಐ.ಹೆಚ್. ಮೈದೂರ ಅವರು ಮಾತನಾಡಿ, ಪಂಚಾಕ್ಷರಿ ಅವರು ಪ್ರತೀ ವರ್ಷವೂ ಸಹ ತಾಲ್ಲೂನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನಿ ಸಾಮಗ್ರಿಗಳನ್ನು ನೀಡುತ್ತಿರುವುದು ಅತ್ಯಂತ  ಶ್ಲ್ಯಾಘನೀಯ ಕಾರ್ಯವಾಗಿದೆ ಎಂದರು. ವೇದಿಕೆಯಲ್ಲಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ ಪೂಜಾರ, ಸಹ ಶಿಕ್ಷಕರಾದ, ರವಿ ಪಾಟೀಲ, ಸೈಯದ್ ಜುಲ್ಫಿಕರ್, ಎಸ್ ಎಸ್ ಮುಳಗುಂದ, ಪ್ರವೀಣ ಬನ್ನಿಮಟ್ಟಿ, ಹೊನ್ನಪ್ಪ ನುಗ್ಗಿಮರದ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ