89 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ದೈವಾಧೀನರಾದ : .ಆರ್.ಎಸ್.ಶೆಟ್ಟಿ
89 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ದೈವಾಧೀನರಾದ : .ಆರ್.ಎಸ್.ಶೆಟ್ಟಿ
ದಾರವಾಢ 07:.ಆರ್.ಎಸ್.ಶೆಟ್ಟಿ ಇನ್ಫಾಸ್ಟ್ರಕರ್ಸ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಪ್ರತಿಷ್ಠಿತ ಹುಬ್ಬಳ್ಳಿ- ಧಾರವಾಡ ಬಂಟರ ಸಂಘದ ಸಂಸ್ಥಾಪಕ ಸದಸ್ಯರಾಗಿ ಹೆಸರಾಂತ ಗುತ್ತಿಗೆದಾರರಾಗಿ ಸಾವಿರಾರು ಕೈಗಗಳಿಗೆ ಕೆಲಸ ನೀಡಿದ ಹಲವಾರು ಲೋಕೊಪಯೋಗಿ ಕಾರ್ಯಗಳನ್ನು ಮಾಡಿದ ಹೆಸರಾಂತ ಆರ್.ಎಸ್.ಶೆಟ್ಟಿಯವರು ತಮ್ಮ 89 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ನಗರದ ಪ್ರತಿಷ್ಠಿತ ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೊಸೈಟಿಯ ಡೋನರ್ ಮೆಂಬರ್ ಆಗಿ 2003 ರಲ್ಲಿ ಸಂಸ್ಥೆಯಲ್ಲಿ ಆರ್.ಎಸ್. ಶೆಟ್ಟಿ ಬಿ.ಕಾಂ ಕಾಲೇಜನ್ನು ಸ್ಥಾಪಿಸಲು ಕಾರಣಿಕರ್ತರಾದರು. ಮುಂದೆ ಈ ಕಾಲೇಜಿನಲ್ಲಿ ಬಿ.ಕಾಂ ಹಾಗೂ ಎಂ.ಕಾಮ್ ಕಾಲೇಜುಗಳನ್ನು ತೆರೆಯಲು ಅನವು ಮಾಡಿಕೊಟ್ಟರು. ಸಾವಿರಾರು ವಿದ್ಯಾರ್ಥಿಗಳನ್ನು ಈ ಕಾಲೇಜುಗಳಲ್ಲಿ ಪದವಿಗಳಿಸುವುದರೊಂದಿಗೆ ನೂರಾರು ವಿದ್ಯಾರ್ಥಿಗಳು ಕಂಪನಿ ಸೆಕ್ರೆಟರಿಗಳಾಗಿ ಹೊರಹೊಮ್ಮಿದ್ದಾರೆ. ಆರ್.ಎಸ್.ಶೆಟ್ಟಿಯವರ ಧರ್ಮಪತ್ನಿ ಹೆಸರಲ್ಲಿ ಮುಕಾಂಬಿಕಾ ಆರ್.ಎಸ್.ಶೆಟ್ಟಿ ಅಡಿಟೋರಿಯಂ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನಿರ್ಮಿಸಿಕೊಟ್ಟಿದ್ದಾರೆ.
ಡಾ.ಡಿ.ಜಿ ಶೆಟ್ಟಿ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ಜಿ ಶೆಟ್ಟಿಯವರ ಪರಮ ಆಪ್ತರಾಗಿದ್ದು ಈ ಸಂಸ್ಥೆಗೆ ಕಳೆದ 25 ವರ್ಷಗಳಿಂದ ಹಲವಾರು ರೀತಿಯಲ್ಲಿ ಸಹಾಯವನ್ನು ನೀಡುತ್ತಾ ಬಂದಿದ್ದಾರೆ. ಇವರ ನಿಧನವು ನಮ್ಮ ಸಂಸ್ಥೆಗೆ ತುಂಬಲಾರದ ನಷ್ಟ. ಈ ದಿನ ಕಾಲೇಜಿನಲ್ಲಿ ಶ್ರದ್ದಾಂಜಲಿ ಸಭೆಯನ್ನು ನೆರವೇರಿಸಿ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಸಭೆ ಸೇರಿ ಆರ.ಎಸ್.ಶೆಟ್ಟಿಯವರ ವ್ಯಕ್ತಿತ್ವ ಹಾಗೂ ಕೊಡುಗೆಯನ್ನು ಸ್ಮರಿಸುತ್ತಾ ಅವರ ಪತ್ಮಿ ಮಕ್ಕಳು ಹಾಗೂ ಎಲ್ಲಾ ಕುಟುಂಬದವರಿಗೂ, ಬಂಧು ಬಳಗದವರಿಗೆ ಅವರ ಅಗಲುವಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲೆಂದೆಂದು ಪ್ರಾರ್ಥಿಸಿದೆವು. ಎರಡು ನಿಮಿಷಗಳ ಮೌನ ಪ್ರಾರ್ಥನೆಯೊಂದಿಗೆ ಶ್ರದ್ದಾಂಜಲಿ ಸಭೆಯನ್ನು ಮುಗಿಸಿ ಪ್ರಾಂಶುಪಾಲರು ಕಾಲೇಜುಗಳಿಗೆ ರಜೆಯನ್ನು ಘೋಷಿಸಿದರು.