ರಸ್ತೆಗಳ ದುರಸ್ಥಿಗಾಗಿ ಆಗ್ರಹ
ರಸ್ತೆಗಳ ದುರಸ್ಥಿಗಾಗಿ ಆಗ್ರಹ
ಧಾರವಾಡ 08: ಕೆ.ಸಿ.ಡಿ. ವೃತ್ತದಿಂದ ಸಪ್ತಾಪುರ ಬಾವಿ ತನಕ ಇರುವ ರಸ್ತೆ, ದಾಸನಕೊಪ್ಪ ವೃತ್ತದ ರಸ್ತೆ, ಇನ್ನುಳಿದ ಬಡಾವಣೆಗಳಲ್ಲೂ ರಸ್ತೆಗಳು ತಗ್ಗು ಗುಂಡಿಗಳಿಂದ ಬಿದ್ದು ಹಾಳಾಗಿವೆ. ಈ ರಸ್ತೆಯಲ್ಲಿ ಓಡಾಡುವ ಜನರು ದೂಳಿನ ಮಜ್ಜನ ಮಾಡಿಕೊಳ್ಳುತ್ತಿದ್ದಾರೆ. ಧಾರವಾಡ ನಗರದ ಕೆ.ಸಿ.ಡಿ. ವೃತ್ತದಿಂದ ಸಪ್ತಾಪುರ ಬಾವಿ ತನಕ ರಸ್ತೆಯು ಧಾರವಾಡದಿಂದ ಪಾವಟೆನಗರಕ್ಕೆ ಹೋಗುವ ಮುಖ್ಯ ರಸ್ತೆಯಾಗಿದ್ದು, ರಸ್ತೆಗಳು ಹಾಳಾಗಿ ಸಾವಿರಾರು ಜನರು ಇದೇ ರಸ್ತೆಯಿಂದ ಓಡಾಡುತ್ತಾರೆ. ವಿದ್ಯಾರ್ಥಿಗಳು, ವೃದ್ದರು, ನೌಕರಸ್ಥರು, ವ್ಯಾಪಾರಿಗಳು ಎಲ್ಲರೂ ಇದೇ ರಸ್ತೆ ಬಳಸುತ್ತಾರೆ. ಅದೇ ರೀತಿ ವಿವಿಧ ಬಡಾವಣೆಗಳ ಪರಿಸ್ಥಿತಿಯೂ ಇದೇ ಆಗಿದೆ. ಅನಾಹುತ ಆಗುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡು ಈ ರಸ್ತೆಗಳ ದುರಸ್ತಿ ಕಾಮಗಾರಿ ಮಾಡಿ, ಜನತೆಯ ಹಿತ ಕಾಪಾಡಬೇಕೆಂದು ಮಾನ್ಯ ಶಾಸಕರಲ್ಲಿ ಮಹಾನಗರ ಜನತೆಯ ಪರವಾಗಿ ಜನತಾದಳ (ಸಂಯುಕ್ತ) ಪಕ್ಷವು ಆಗ್ರಹಿಸುತ್ತದೆ.