ಬರಗಾಲ ಘೋಷಿಸಿ ರೈತರ ಸಾಲ ಮನ್ನಾ ಮಾಡಿ: ಖೋಕಲೆ ಆಗ್ರಹ
ಲೋಕದರ್ಶನ ವರದಿ
ಸಂಬರಗಿ 21: ಗಡಿ ಭಾಗವು ಬರಗಾಲದಿಂದ ತತ್ತರಿಸುತ್ತಿದ್ದು ಸರಕಾರ ಶೀಘ್ರದಲ್ಲಿ ಬರಗಾಲ ಘೋಷಣೆ ಮಾಡಿ ರೈತರ ಸಾಲ ಮನ್ನಾ ಮಾಡಬೇಕು, ಹಾಗೂ ಪ್ರತಿ ಗ್ರಾಮದಲ್ಲಿ ಗೋಶಾಲೆ ಪ್ರಾರಂಭ ಮಾಡಬೇಕೆಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿಂಗಪ್ಪಾ ಖೋಕಲೆ ಆಗ್ರಹಿಸಿದ್ದಾರೆ.
ಗುರುವಾರ ಗಡಿಭಾಗದಲ್ಲಿ ಅನಂತಪೂರ ಹಾಗೂ ಮದಭಾಂವಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಕ್ಕೆ ಭೇಟ್ಟಿ ನೀಡಿದ ನಂತರ ಬಳ್ಳಿಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಗಡಿ ಭಾಗದಲ್ಲಿ ಇರುವ ಕೇರೆಗಳು ಬತ್ತಿ ಹೋಗಿದ್ದು ಮುಂಗಾರು ಮಳೆ ವಿಫಲವಾಗಿದೆ. ಸರಕಾರ ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರೂಪಾಯಿಗಳ ಸಹಾಯಧನ ನೀಡಬೇಕು, ಈ ಭಾಗದಲ್ಲಿ ಇರುವ ಕೆರೆಗಳು ಭತ್ತಿ ಹೋಗಿರುತ್ತವೆ. ಕುಡಿಯುವ ನೀರಿನ ಸಮಸ್ಯೆಯಾಗಿದೆ ಸರಕಾರ ಇನ್ನೂವರೆಗೆ ಗಮನ ಹರಿಸಿಲ್ಲ, ಅಥಣಿ ಹಾಗೂ ಕಾಗವಾಡ ವಿಧಾನ ಸಭಾ ಕ್ಷೇತ್ರದಲ್ಲಿ ಬರುವ ಸುಮಾರು 60 ಗ್ರಾಮಗಳಿಗೆ ಬೀಕರ ಸಮಸ್ಯೆಯಾಗಿದ್ದು ಜಿಲ್ಲಾಡಳೀತ ಶಿಘ್ರದಲ್ಲಿ ಬೆಟ್ಟಿ ನಿಡಿ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿಗಾರರಿಗೆ 100 ದಿನಗಳ ಕೆಲಸವಾದ ನಂತರ ಆ ಕೂಲಿಕಾರರಿಗೆ ಕೆಲಸ ಕೊಡುತ್ತಿಲ್ಲ. ಸರಕಾರ ಬರಗಾಲ ಪೀಡಿತ ಗ್ರಾಮಗಳಿಗೆ ಪ್ರತಿ ಕೂಲಿಕಾರರಿಗೆ 200 ದಿನಗಳ ವರೆಗೆ ಕೆಲಸ ನೀಡಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ಈ ವೇಳೆ ಹಲವಾರು ಬಿ.ಜೆ.ಪಿ.ಕಾರ್ಯಕರ್ತರು ಉಪಸ್ಥಿತರಿದ್ದರು.