ಗ್ರಾಮೀಣ ಬದುಕು ಬಹುದೊಡ್ಡ ಸಂಸ್ಕೃತಿಯಿಂದ ಕೂಡಿದೆ: ಗೊರವರ
ದತ್ತು ಗ್ರಾಮ ಮಾಗೋಡದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ
ರಾಣೇಬೆನ್ನೂರು 13: ಗ್ರಾಮೀಣ ಸಂಸ್ಕೃತಿ ಮತ್ತು ಬದುಕು ಸಂತೃಪ್ತಿಯಿಂದ ಕೂಡಿರುತ್ತದೆ ಇದರಿಂದಾಗಿಯೇ ಗ್ರಾಮ ಸಂಸ್ಕೃತಿ ನಿಜ ಮತ್ತು ನೈಜ ಸಂಸ್ಕೃತಿ ಯಾಗಿರುತ್ತದೆ ಎಂದು ಉಪ ತಹಸಿಲ್ದಾರ್ ಕೆ. ಜಿ. ಗೊರವರ ಹೇಳಿದರು.
ಅವರು ತಾಲೂಕಿನ ದತ್ತು ಗ್ರಾಮ ಮಾಗೋಡದಲ್ಲಿ ಆರ್ ಟಿ ಇ ಎಸ್, ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ, ಮಾತನಾಡಿದರು.
ವಿದ್ಯಾರ್ಥಿಗಳು ಗ್ರಾಮೀಣ ಸಂಸ್ಕೃತಿ ಪರಂಪರೆಯನ್ನು ಅರಿತುಕೊಂಡಾಗ ಮಾತ್ರ ಸರಳವಾಗಿ ಜೀವನವನ್ನು ನಡೆಸುವುದರ ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ, ಮತ್ತು ಭಾವೈಕ್ಯತೆಯ ಜೀವನವನ್ನು ಸಾಗಿಸುವುದು ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದರು. ಕಾಲೇಜು ಪ್ರಾಚಾರ್ಯ ಸಿ.ಎ.ಹರಿಹರ ಅವರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಎಸ್ ಸಂಯೋಜಕಿ ಸರಸ್ವತಿ ಹೆಚ್ ಬಮ್ಮನಾಳ, ಅವರು, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಿವಕುಮಾರ ಬೆಣ್ಣಿ, ನಾಗರಾಜ್ ಲಮಾಣಿ,ಅಜಯ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಸಿಬ್ಬಂದಿ ಮತ್ತು ಗ್ರಾಮದ ಮುಖಂಡರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಜಾತ ಸಂಗಡಿಗರು ರಾಷ್ಟ್ರೀಯ ಗೀತೆ ಹಾಡಿದರು.