ಲಕ್ಷ್ಮಣ ಸವದಿ ಇವರ ಪ್ರಯತ್ನದಿಂದ ಬೆಳೆಸಾಲ ಮಂಜೂರು: ಖುಟ್ಟೆ
ಸಂಬರಗಿ 09: ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ ಸದಸ್ಯ ಲಕ್ಷ್ಮಣ ಸವದಿ ಇವರ ಪ್ರಯತ್ನದಿಂದ ಜಕ್ಕಾರಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 55 ಲಕ್ಷ ರೂಪಾಯಿ ಬೆಳೆಸಾಲ ಮಂಜೂರಾತಿ ಮಾಡಿದ್ದು ಅವರ ಹಸ್ತದಿಂದ ಶೀಘ್ರದಲ್ಲಿ ಸಾಲ ವಿತರಿಸಲಾಗುವದೆಂದು ಸಂಘದ ಅಧ್ಯಕ್ಷ ಪ್ರಕಾಶ ಖುಟ್ಟೆ ಹೇಳಿದರು.
ಸಂಘದ ಕಾರ್ಯಾಲಯದಲ್ಲಿ ಸುದ್ದಿರಾರರೊಂದಿಗೆ ಮಾತನಾಡಿ ಅವರು ಈ ಭಾಗ ಸತತ ಬರಗಾಲಕ್ಕೆ ಸಿಲುಕಿತ್ತು. ಹಲವಾರು ವರ್ಷದಿಂದ ರೈತರಿಗೆ ಬೆಳೆಸಾಲ ಸಿಕ್ಕಿದಿಲ್ಲ. ಹೊಸದಾಗಿ ಗ್ರಾಮದಲ್ಲಿ ಸಂಘ ಸ್ಥಾಪನೆ ಮಾಡಿ ಕೆಲವೇ ತಿಂಗಳದಲ್ಲಿ ಸಾಲ ಮಂಜೂರಾತಿ ಮಾಡಿ ರೈತರಿಗೆ ಅನುಕೂಲ ಮಾಡಿದ್ದಾರೆ. ಈ ಸಂಘಕ್ಕೆ 182 ಸದಸ್ಯರ ಸಂಖ್ಯೆ ಇದ್ದು 133 ಸದಸ್ಯರಿಗೆ ಸಾಲವನ್ನು ವಿತರಿಸಲಾಗುವುದು. ಇನ್ನುಳಿದ ಸಂಘದ ಸದಸ್ಯರಿಗೆ ಸಾಲವನ್ನು ನೀಡಲಾಗುವದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಚಿಕ್ಕೋಡಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ಸಾಲ ವಿತರಿಸಲಾಗುವದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ವಸಂತ ಜಗತಾಪ ಸಂಘದ ನಿರ್ದೇಶಕ ಅಂಕುಶ ಘೋರ್ಪಡೆ, ಪೋಪಟ ಮೋಪರೆ, ಅಜೀತ ಖೋತ, ಸಂತೋಷ ಖುಟ್ಟೆ, (ಎಸ್ ಕೆ) ಅಂಬುತಾಯಿ ಪವಾರ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರವೀಣ ಕಾಂಬಳೆ ಉಪಸ್ಥಿತರಿದ್ದರು