ಸಾರ್ವಜನಿಕರಿಗೆ ಸಿಹಿ ಹಂಚಿ ವಿಶ್ವಛಾಯಾಗ್ರಾಹಕರ ದಿನ ಆಚರಣೆ
ಬೈಲಹೊಂಗಲ 19: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕಿನ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರಗಳು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹೂವಿನ ಮಾಲೆ ಅರ್ಪಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಶನಿವಾರ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಆಚರಿಸಿದರು.
ಹಿರಿಯ ಛಾಯಾಗ್ರಾಹಕ ವಿಜಯ ಪತ್ತಾರ ಮಾತನಾಡಿ ಮಾನವನ ಬದುಕಿನಲ್ಲಿ ಅಚ್ಚ ಅಳಿಯದಂತೆ ಉಳಿಯುವ ಕಲೆ ಎಂದರೆ ಚಿತ್ರ ವಿನ್ಯಾಸ. ಎಲ್ಲ ವೃತ್ತಿಗಳಲ್ಲಿ ಫೋಟೋಗ್ರಾಫಿ, ವಿಡಿಯೋಗ್ರಾಫಿ ಒಂದಾಗಿದೆ. ಈ ವೃತ್ತಿಯಲ್ಲಿ ಬದುಕು ನಿರ್ವಹಿಸುತ್ತಿರುವ ಎಲ್ಲ ಫೋಟೋಗ್ರಾಫರ್, ವಿಡಿಯೋಗ್ರಾಫರಗಳು ಕರ್ತವ್ಯದಲ್ಲಿ ನಿಷ್ಠೆ ಬೆಳೆಸಿಕೊಂಡು ಸಾರ್ವಜನಿಕರೊಡನೆ ಉತ್ತಮ ಬಾಂಧವ್ಯ ಹೊಂದಬೇಕು. ವೃತ್ತಿಯಲ್ಲಿ ಬೆಳವಣಿಗೆ ಹೊಂದುವುದರ ಜೊತೆಗೆ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಹಿರಿಯ ಛಾಯಾಗ್ರಾಹಕ ಬಾಳಸಾಹೇಬ ದೇಸಾಯಿ ಮಾತನಾಡಿ, ಬಹುಕಾಲದಿಂದಲೂ ಛಾಯಾಗ್ರಾಹಕರಾಗಿ ಸೇವೆಯಲ್ಲಿರುವ ಹಿರಿಯ, ಯುವ ಛಾಯಾಗ್ರಾಹಕರಿಗೆ ಸಕರ್ಾರ ಸಹಾಯಧನ ಒದಗಿಸಿಕೊಡಬೇಕು. ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದರು.
ಸಂಘದ ಅಧ್ಯಕ್ಷ ರಾಜು ಚಿತ್ರಗಾರ, ರಾಜು ಕೇರೂರ, ರಾಜು ಚಿತ್ರಗಾರ, ಚಂದ್ರು ಉಂಡಿ, ಪುಂಡಲೀಕ ನೇಗಿನಹಾಳ, ಸಣ್ಣಗೌಡ ಪಾಟೀಲ, ಆನಂದ ಕಬ್ಬಿನ, ಸಂತೋಷ ಬಡಿಗೇರ, ಬಸವರಾಜ ಗೋಕಾವಿ, ಬಸವರಾಜ ಪಾಗಾದ, ಪುನೀತ ಹಿರೇಮಠ, ನಾಗೇಶ ಭಾವಿಕಟ್ಟಿ, ಅನೇಕರು ಇದ್ದರು.