ಅಥಣಿ

ಭಾರತ ಜೋಡೋ ಯಾತ್ರೆಗೆ ಮಂತ್ರಾಲಯಕ್ಕೆ ತೆರಳಿದ ಬುಟಾಳಿ

ಭಾರತ ಜೋಡೋ ಯಾತ್ರೆಗೆ ಮಂತ್ರಾಲಯಕ್ಕೆ ತೆರಳಿದ ಬುಟಾಳಿ

ಅಥಣಿ೧೯:  ಕಾಂಗ್ರೆಸ್ ಪಕ್ಷದ ಮುಖಂಡ, ಸಂಸದ ರಾಹುಲ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮಂತ್ರಾಲಯಕ್ಕೆ ತೆರಳುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಎಸ್.ಕೆ.ಬುಟಾಳಿ ತಿಳಿಸಿದರು ಅವರು ಜನಸಂಪರ್ಕ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

           ಆಂಧ್ರಪ್ರದೇಶದ ಮೂಲಕ ನಮ್ಮ ರಾಜ್ಯಕ್ಕೆ ಹೊಂದಿಕೊಂಡ ಮಂತ್ರಾಲಯ ಕ್ಷೇತ್ರದಿಂದ ರಾಯಚೂರಿಗೆ ಆಗಮಿಸುವ ಯಾತ್ರೆಯಲ್ಲಿ ಅಥಣಿಯ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದ ಅವರು ಯಾತ್ರೆಯಲ್ಲಿ ಕಾರ್ಯಕರ್ತರೊಂದಿಗೆ ಪುರಸಭಾ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

       ಪುರಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ರಾವಸಾಬ ಐಹೊಳೆ ಮಾತನಾಡಿ, ಭಾರತ ಜೋಡೊ ಯಾತ್ರೆಯಲ್ಲಿ ಅಥಣಿ ಪುರಸಭೆಯ ಎಲ್ಲ 15 ಚುನಾಯಿತ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

          ಕೆಪಿಸಿಸಿ ಸದಸ್ಯ ಚಿದಾನಂದ ಮುಕಣಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ವಿಲೀನ ಯಳಮಲ್ಲಿ, ರಿಯಾಜ ಸನಸದಿ, ಸೈಯ್ಯದ ಅಮೀನ ಗದ್ಯಾಳ, ಬಸವರಾಜ ಹಳ್ಳದಮಳ, ಸಯ್ಯದ ಗಡ್ಡೇಕರ, ಸುರೇಶ ಪವಾರ, ಸಚಿನ ಬುಟಾಳಿ, ರವಿ ಬಡಕಂಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು 

ಸುದ್ದಿ ಓದಿ