ಅಥಣಿ

ಗಡಿಭಾಗದ ಸಮಸ್ಯೆಗ್ರಸ್ತ ಶತಮಾನೋತ್ಸವದ ಶಾಲೆಗಳು ಮುಚ್ಚುವ ಹಂತಕ್ಕೆ

ಗಡಿಭಾಗದ ಸಮಸ್ಯೆಗ್ರಸ್ತ ಶತಮಾನೋತ್ಸವದ ಶಾಲೆಗಳು ಮುಚ್ಚುವ ಹಂತಕ್ಕೆ

ಲೋಕದರ್ಶನ ವರದಿ

ಸಂಬರಗಿ 14: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡ ಪ್ರಾಥಮಿಕ ಶಾಲೆಗಳು ಶತಮಾನೋತ್ಸವದ ಸನಿಹಕ್ಕೆ ಬಂದರೂ ಸಹ ಶಾಲೆಯಲ್ಲಿ ಶಿಕ್ಷಕರ ಕೊರತೆ ಮತ್ತು ಕೊಠಡಿಗಳ ಕೊರತೆ ವಿವಿಧ ಸಮಸ್ಯೆಗಳಿಂದ ಶಾಲೆಗಳು ಬೀಗ ಹಾಕಿಕೊಳ್ಳುತ್ತಿವೆ. ಸರಕಾರ ಗಡಿಭಾಗದ ಶಾಲೆಗಳಿಗೆ ನಿರ್ಲಕ್ಷ ತೋರಿಸುತ್ತಿದ್ದಾರೆ. ಶತಮಾನ ಕಂಡಿರುವ ಶಾಲೆಗಳಲ್ಲಿನ ಸಮಸ್ಯೆ, ಕೊರತೆ ಯಾವಾಗ ನೀಗುತ್ತವೆ ಎಂಬುದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ಗಡಿ ಭಾಗದ ಶಾಲೆಗಳಿಗೆ ಯಾವುದೇ ಸಮಸ್ಯೆ ಇದ್ದರೆ ಶೀಘ್ರ ಬಗೆಹರಿಸಲು ಸರಕಾರ ಆದೇಶಮಾಡಿದೆ. ಆದರೂ ಸಹ ಜಿಲ್ಲಾ ಸರಕಾರ ಗಡಿಭಾಗದ ಶಾಲೆಗಳ ಬಗ್ಗೆ ಕಾಳಜಿ ವಹಿಸಿಲ್ಲ. ಸರಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಗಡಿಭಾಗದ ಕೊನೆ ಗ್ರಾಮ ಅನಂತಪೂರ ತೋಟದ ಶಾಲೆ 300 ಕಿ.ಮಿ. ಅಂತರದಲ್ಲಿದ್ದು, ಈ ಶಾಲೆಯ ಶತಮಾನೋತ್ಸವದತ್ತ ಮುನ್ನೆಡೆದಿದ್ದು, 72ಕ್ಕೆ ಬಂದು ತಲುಪಿದೆ. ಪ್ರತಿ ತರಗತಿಗೆ ಒಬ್ಬ ಶಿಕ್ಷಕರು ಮತ್ತು ಒಂದು ಕೊಠಡಿ ಅತ್ಯವಶ್ಯಕವಿದೆ. ಆದರೆ ಈ ಶಾಲೆಯಲ್ಲಿ 4 ಕೊಠಡಿ 7 ತರಗತಿಗಳು ಒಬ್ಬ ಶಿಕ್ಷಕರು ಇದ್ದಾರೆ. ಇವುಗಳಲ್ಲಿ 2 ಕೋಣೆಗಳು ಶಿಥಿಲಗೊಂಡಿವೆ. ಭವಿಷ್ಯದಲ್ಲಿ ರಾಜ್ಯ ಸರಕಾರ ಗಮನ ಹರಿಸದೆ ಹೋದರೆ ಕನ್ನಡ ಶಾಲೆಗಳು ಬೀಗ ಬೀಳುವುದು ಖಚಿತ.

1925ರಲ್ಲಿ ಅನಂಪತೂರ ಗ್ರಾಮದ ತೋಟದ ಶಾಲೆ ಬ್ರಿಟಿಷ್ರ ಕಾಲದಲ್ಲಿ ಸ್ಥಾಪನೆಗೊಂಡಿದೆ. ಆ ಕಾಲದ ಮಕ್ಕಳ ಸಂಖ್ಯೆ 100 ಇತ್ತು. ದೇಶ ಸ್ವತಂತ್ರವಾದ ಮೇಲೆ 1973ರಲ್ಲಿ ಕನರ್ಾಟಕವೆಂದು ನಾಮಕರಣವಾದ ನಂತರ ಆ ಸಂದರ್ಭದಲ್ಲಿ ಕನ್ನಡಕ್ಕೆ ಬೆಲೆ ಹೆಚ್ಚಿತ್ತು. ಆದರೆ ಈಗ ಗಡಿಭಾಗದಲ್ಲಿ ಕನ್ನಡ ನಶಿಸುವ ಸ್ಥಿತಿಯಲ್ಲಿದೆ. ರಾಜ್ಯ ಸರಕಾರ ವಿಶೇಷ ತಂಡಮಾಡಿ ಗಡಿ ಭಾಗದ ಕನ್ನಡ ಶಾಲೆಗಳ ಸಮಸ್ಯೆ ಕುರಿತು ಪರಿಶೀಲನೆ ಮಾಡಿ ಸ್ಥಳದಲ್ಲಿ ಯೋಗ್ಯ ನಿರ್ಣಯ ತಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಿದರೆ. ಮಾತ್ರ ಶಾಲೆಗಳು ಉಳಿಯಲು ಸಾಧ್ಯವಿದೆ. ಇಲ್ಲವಾದಲ್ಲಿ ಗಡಿಭಾಗದಲ್ಲಿ ಕನ್ನಡ ಶಾಲೆಗಳು ಎಲ್ಲಿವೆಯಂದು ಹುಡುಕಾಡುವ ಪರಿಸ್ಥಿತಿ ಬರುತ್ತದೆ.

ಕೇಂದ್ರ ಶಾಲೆ ಅನಂತಪೂರ, ಖಿಳೇಗಾಂವ ಜಂಬಗಿ, ಅರಳಿಹಟ್ಟಿ, ತಾವಂಶಿ, ಹಾಗೂ ಇನ್ನೂ ಹಲವಾರು ಗಡಿಭಾಗದ ಕನ್ನಡ ಶಾಲೆಗಳು ಶತಮಾನ ಆಚರಿಸಿಕೊಳ್ಳುವತ್ತ ದಾಪುಗಾಲಿಕ್ಕಿವೆ. ಆದರೆ ರಾಜ್ಯ ಸರಕಾರ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿರುವುದಿಲ್ಲ. ಜಿಲ್ಲಾ ಆಡಳಿತಕ್ಕೆ ಯಾವ ಶಾಲೆ ಶತಮಾನಕ್ಕೆ ಒಳಪಟ್ಟಿವೆ ಎಂಬುದರ ಮಾಹಿತಿ ಕೂಡ ಇಲ್ಲ. 

ಕನ್ನಡ ಪರ ಸಂಘಟಣೆ ಹೋರಾಟಗಾರ ಬಸನಗೌಡಾ ಪಾಟೀಲ ಈ ಕುರಿತು ಸ್ಥಳಿಯ ಶಾಸಕರ ಗಮನಕ್ಕೆ ತಂದು ಶಾಲಾ ಕೊಠಡಿ ಹಾಗೂ ಶಿಕ್ಷಕರ ನೇಮಕಾತಿ ಮಾಡಲು ಒತ್ತಡ ತರಲಾಗುವುದೆಂದು ಹೇಳಿದರು. 

ಈ ಕುರಿತು ಬಸವರಾಜ ತಳವಾರ ಕ್ಷೇತ್ರ ಶೀಕ್ಷಣಾಧಿಕಾರಿಗಳನ್ನು ಸಂಪರ್ಕಿಸಿದಾಗ ಗಡಿ ಭಾಗದ ಶಾಲೆಗಳಿಗೆ ನೀಡಿ ಪರಿಶೀಲನೆ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ 

ಸುದ್ದಿ ಓದಿ