ಅಥಣಿ

ಕಟ್ಟಕಡೆಯ ಕಾರ್ಯಕರ್ತನಿಗೆ ಅಧಿಕಾರ ಕೊಡುವ ಏಕೈಕ ಪಕ್ಷ ಬಿಜೆಪಿ

ಕಟ್ಟಕಡೆಯ ಕಾರ್ಯಕರ್ತನಿಗೆ ಅಧಿಕಾರ ಕೊಡುವ ಏಕೈಕ ಪಕ್ಷ ಬಿಜೆಪಿ

ಮಹಾ ವಿಪ ಸದಸ್ಯ ಗೋಪಿಚಂದ ಪಡೋಲಕರ ಹೇಳಿಕೆ: ಹಾಲುಮತ ಸಮಾಜ ಬಂಧುಗಳ ಸಮಾವೇಶ* 10 ಸಾವಿರಕ್ಕೂ ಹೆಚ್ಚು ಸಮಾಜದ ಜನ ಭಾಗಿ

ಅಥಣಿ 24: ಬಿಜೆಪಿ ಕುಟುಂಬ ರಾಜಕಾರಣ ಮಾಡದೇ ಕಟ್ಟಕಡೆಯ ಕಾರ್ಯಕರ್ತನಿಗೆ ಅಧಿಕಾರ ಕೊಡುವ ಏಕೈಕ ರಾಜಕೀಯ ಪಕ್ಷವಾಗಿದ್ದು, ಹೀಗಾಗಿಯೇ ದೇಶದ ಜನಸಾಮಾನ್ಯರ, ರೈತರ, ಕಾರ್ಮಿಕರ, ಬಡವರ, ನಿರ್ಗತಿಕರ ಏಕೈಕ ಪಕ್ಷ ಬಿಜೆಪಿ ಎಂದು ಮಹಾರಾಷ್ಟ್ರ ಸರಕಾರದ ವಿಧಾನ ಪರಿಷತ್ ಸದಸ್ಯ ಗೋಪಿಚಂದ ಪಡೋಲಕರ ಹೇಳಿದರು.  

    ಅವರು ಮೋಳೆ ಗ್ರಾಮದಲ್ಲಿ ಹಾಲುಮತ ಸಮಾಜ ಬಂಧುಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ರಾಜಕೀಯ ಹಿನ್ನಲೆ ಇಲ್ಲದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನರೇಂದ್ರ ಮೋದಿ ನಾಲ್ಕು ಬಾರಿ ಮುಖ್ಯಮಂತ್ರಿ, ಎರಡು ಬಾರಿ ಪ್ರಧಾನ ಮಂತ್ರಿಯಾಗಿದ್ದಾರೆ ಎಂದ ಅವರು ಕಾಂಗ್ರೆಸ್ ಸೇರಿದಂತೆ ಈ ದೇಶದ ಅನೇಕ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣದಲ್ಲಿ ತೊಡಗಿದ್ದು, ಬಿಜೆಪಿ ಮಾತ್ರ ಕಾರ್ಯಕರ್ತರ ಪಕ್ಷವಾಗಿದೆ ಎಂದರು. 

    ಇಂತಹ ಪಕ್ಷದ ಅಭಿವೃದ್ಧಿ ಹರಿಕಾರ ಶ್ರೀಮಂತ ಪಾಟೀಲರನ್ನು ವಿಧಾನ ಸಭಾ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಪ್ರಧಾನಿ ನರೇದ್ರ ಮೋದಿಯವರ ಕೈ ಬಲಪಡಿಸೋಣ ಎಂದರು. 

ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಶ್ರೀಮಂತ ಪಾಟೀಲ ಮಾತನಾಡಿ, ಮುಗ್ಧ ಹಾಲು ಮತ ಸಮಾಜ ದೇವರ ಆಶೀವರ್ಾದ ಪಡೆದುಕೊಂಡೇ ಭೂಮಿಗೆ ಬಂದವರು ಹೀಗಾಗಿ ಹಾಲುಮತ ಸಮಾಜ ಭರತ ಖಂಡದಲ್ಲಿಯೇ ಶ್ರೇಷ್ಠ ಸಮಾಜವಾಗಿದೆ. ಹಾಲುಮತ ಸಮಾಜದ ಸಂಗೋಳ್ಳಿ ರಾಯಣ್ಣ, ಭಕ್ತ ಕನಕ ದಾಸ, ಅಹಲ್ಯಾ ಬಾಯಿ ಹೋಳ್ಕರ ಹೆಸರು ಅಜರಾಮರ ಎಂದರು. 

     ನನ್ನ ಅಧಿಕಾರವಧಿಯಲ್ಲಿ ಕುಡಿಯುವ ನೀರು, ನೀರಾವರಿ, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಿರುವೆ ಎಂದ ಅವರು ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದನ್ನು ಗಮನಿಸಿ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಸಲ್ಲಿಸಿ 2 ಟಿಎಮ್.ಸಿ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ಪರಿಣಾಮ ಮಹಾ ಸರಕಾರ 2 ಟಿಎಮ್ ಸಿ ನೀರು ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ ಎಂದರು. 

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬಿಜೆಪಿ ವರಿಷ್ಠ, ಮಾಜಿ ಸಿಎಮ್ ಬಿ.ಎಸ್.ಯಡಿಯುರಪ್ಪ  ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಯತ್ತ ದಾಪುಗಾಲಿಟ್ಟಿದ್ದು, ಅಭಿವೃದ್ಧಿ ಹರಿಕಾರ ಶ್ರೀಮಂತ ಪಾಟೀಲರು ಕಳೆದ 5 ವರ್ಷಗಳಿಂದ ಶಾಸಕರಾಗಿ ಜನ ಸೇವೆ ಮಾಡಿದ್ದು, ಇಂತಹ ಸಮಾಜ ಮುಖಿ ಹಾಗೂ ಸಜ್ಜನ ರಾಜಕಾರಣಿ ಶ್ರೀಮಂತ ಪಾಟೀಲರನ್ನು ಮತ್ತೊಮ್ಮೆ ಆಯ್ಕೆ ಮಾಡೋಣ ಎಂದರು. 

ಮೋಳೆ ಹಾಲುಮತ ಸಮಾಜ ಧುರೀಣ ಅಪ್ಪಾಸಾಹೇಬ ಮಳಮಳಸಿ ಮಾತನಾಡಿ, ಉದ್ಯಮಿ ಶ್ರೀಮಂತ ಪಾಟೀಲರು  ರೈತರ, ಬಡವರ, ನಿರ್ಗತಿಕರ, ರೈತರ, ಕಾಮರ್ಿಕರ ಸೇವೆ ಮಾಡುವ ಉದ್ದೇಶಕ್ಕಾಗಿಯೇ ಶಾಸಕ ಸ್ಥಾನಕ್ಕಾಗಿ ಬಯಸುತ್ತಿದ್ದಾರೆ ಹೊರತು ಬೇರೆ ಯಾವುದೇ ಉದ್ದೇಶಕ್ಕಲ್ಲಾ ಎಂದ ಅವರು ಶ್ರೀಮಂತ ಪಾಟೀಲರಂತಹ ಸಮಾಜ ಮುಖಿ ಶಾಸಕರು ದೊರಕಿರುವುದು ಕಾಗವಾಡ ಕ್ಚೇತ್ರದ ಮತದಾರರ ಸೌಭಾಗ್ಯವಾಗಿದ್ದು, ಇಂತಹ ಶಾಸಕರನ್ನು ವಿಧಾನ ಸಭಾ ಚುನಾವಣೆಯಲ್ಲಿ ಬೆಂಬಲಿಸೋಣ ಎಂದರು. 

ಅನಂತಪುರ ಬಿಜೆಪಿ ಮುಖಂಡ ದಾದಾ ಶಿಂಧೆ ಮಾತನಾಡಿ, ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೂ ಅನುಷ್ಠಾನ ಗೊಳ್ಳದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಶಾಸಕ ಶ್ರೀಮಂತ ಪಾಟೀಲ ಕಾಗವಾಡ ಕ್ಷೇತ್ರದಲ್ಲಿ ಅನುಷ್ಠಾನ ಗೊಳಿಸಿದ್ದಾರೆ ಎಂದ ಅವರು ಐದು ವರ್ಷಗಳ ಹಿಂದೆ ಹದಗೆಟ್ಟು ಹೋಗಿದ್ದ ಗ್ರಾಮೀಣ, ರಾಜ್ಯ, ಸಂಪರ್ಕ, ತೋಟದ  ರಸ್ತೆಗಳನ್ನು  ಸುಸಜ್ಜಿತವಾಗಿ ಅಭಿವೃದ್ಧಿ ಗೊಳಿಸಿದ್ದು, ಇಂತಹ ಶಾಸಕರಿಗೆ ಮೇ 10 ರಂದು ಮತ ಚಲಾಯಿಸೋಣ ಎಂದರು. 

     ಸಾನಿಧ್ಯವನ್ನು ಪದ್ಮಣ್ಣ ಸ್ವಾಮೀಜಿ ವಹಿಸಿದ್ದರು. ಬಿಜೆಪಿ ಧುರೀಣ ಶೀತಲ್ ಪಾಟೀಲ ಮಾತನಾಡಿದರು. ಬಿಜೆಪಿ ಧುರೀಣರಾದ ಅಪ್ಪಾಸಾಹೇಬ ಅವತಾಡೆ, ಮಹಾದೇವ ಕೋರೆ, ತಮ್ಮಣ್ಣಾ ಪಾರಶೆಟ್ಟಿ, ವಿಜಯ ಖನ್ನಿಖೋಡೆ, ಪ್ರಕಾಶ ಡಂಗ, ಬೀರಪ್ಪಾ ಉಗಾರೆ, ಸದಾ ಪೂಜಾರಿ, ಬಾಳು ಹಜಾರೆ, ರಾವಸಾಬ ಜುಗಳೆ, ಸುರೇಶ ಬಳೋಜ, ಗೋರಖನಾಥ ಕೊಳೇಕರ, ಬೂತಾಳೆ ಥರಥರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಹಾಲುಮತ ಸಮಾಜ ಬಾಂಧವರು ಪಾಲ್ಗೊಂಡಿದ್ದರು 

ಸುದ್ದಿ ಓದಿ