ಅಥಣಿ

ಅಥಣಿ ಅಂಜುಮನ್ ಇಸ್ಲಾಂ ಸಮೀತಿ ಆಡಳಿತ ಮಂಡಳಿ ಚುನಾವಣೆ

ಅಥಣಿ ಅಂಜುಮನ್ ಇಸ್ಲಾಂ ಸಮೀತಿ ಆಡಳಿತ ಮಂಡಳಿ ಚುನಾವಣೆ

ಅರ್ಷದ ಗದ್ಯಾಳ, ಅಸ್ಲಂ ನಾಲಬಂದ ನೇತೃತ್ವದ ಪೆನಲ್ಗೆ ಭಾರೀ ಬಹುಮತದ ಗೆಲುವು

ವೆಂಕಟೇಶ ದೇಶಪಾಂಡೆ

ಅಥಣಿ 08: ಅಥಣಿ ಅಂಜುಮನ್ ಇಸ್ಲಾಂ ಸಮತಿಗೆ ಇದೇ ಮೊದಲ ಬಾರಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅರ್ಷದ ಗದ್ಯಾಳ ಹಾಗೂ ಅಸ್ಲಂ ನಾಲಬಂದ ನೇತೃತ್ವದ ಪೆನಲ್ ಅಭ್ಯರ್ಥಿಗಳು ಭಾರೀ ಬಹುಮತದಿಂದ ಆಯ್ಕೆಯಾಗಿದ್ದಾರೆ. ಅಂಜುಮನ್ ಇಸ್ಲಾಂ ಸಮೀತಿಯ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ಅ. 7ರಂದು ತಹಶೀಲ್ದಾರ ಕಛೇರಿಯಲ್ಲಿ ಮತದಾನ ನಡೆದಿತ್ತು. 

   ಸಮಿತಿಯ 2234 ಒಟ್ಟು ಮತಗಳಲ್ಲಿ 2027 ಮತದಾರರು ತಮ್ಮ ಮತ ಚಲಾಯಿಸಿದ್ದರು. ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ ಸುರೇಶ ಮುಂಜೆ ಕಾರ್ಯನಿರ್ವಹಿಸಿದ್ದರು. ಚುನಾವಣೆಯಲ್ಲಿ 15 ಸ್ಥಾನಗಳಿಗೆ ಮುಸ್ಲಿಂ ಸಮಾಜದ 52 ಜನ ಅಭ್ಯರ್ಥಿಗಳು ಸ್ಪರ್ಧೆಸಿದ್ದರು. 

   ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡ ಅರ್ಷದ ಗದ್ಯಾಳ, ಅಂಜುಮನ್ ಸಮೀತಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ನಮ್ಮ ಪೆನಲ್ನ 14 ಅಭ್ಯಥರ್ಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಕೂಡ ಚುನಾವಣೆಯಲ್ಲಿ ಸ್ಪರ್ಧೆಸಿದ್ದ ಎಲ್ಲ ಅಭ್ಯರ್ಥಿಗಳ ಹಾಗೂ ಮುಸ್ಲಿಂ ಸಮಾಜದ ಎಲ್ಲ ಬಂಧುಗಳ ಸಲಹೆ, ಸೂಚನೆ ಮೇರೆಗೆ ಮುನ್ನಡೆಸಲಾಗುವುದು ಎಂದರು. 

   ಪೆನಲ್ ನೇತೃತ್ವ ವಹಿಸಿದ್ದ ಅಸ್ಲಂ ನಾಲಬಂದ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಸ್ಪರ್ಧೆ ಏರ್ಪಟ್ಟಿತ್ತು, ಚುನಾವಣೆ ನಂತರ ನಾವೆಲ್ಲ ಒಂದೆ ನಮ್ಮ ಮಧ್ಯೆ ಯಾವುದೇ ಭೇದ ಭಾವ ಇಲ್ಲ ಎಂದರು. 15 ಸ್ಥಾನಗಳ ಪೈಕಿ ನಮ್ಮ ಪೆನಲ್ 14 ಅಭ್ಯರ್ಥಿಗಳ ಗೆಲವಿಗೆ ಕಾರಣರಾದ ಮತದಾರ ಬಾಂಧವರನ್ನು ಅಭಿನಂದಿಸಿದರು. 

   ಯುನ್ನೂಸ್ ಮುಲ್ಲಾ ಮಾತನಾಡಿ, ನಮ್ಮ ಪೆನಲ್ನ 14 ಹಾಗೂ ಮತ್ತೋರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಸರಕಾರದಿಂದ ಬರುವ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕಾರ್ಯ ಈ ಸಮಿತಿ ಮೂಲಕ ಮಾಡುತ್ತೇವೆ ಎಂದರು. 

   ಪೆನಲ್ ಮಾರ್ಗದರ್ಶಿ ಬಾಬು ಖೆಮಲಾಪುರ ಮಾತನಾಡಿ, ಕೆಲವರ ಒತ್ತಾಯದ ಮೇರೆಗೆ ಈ ಚುನಾವಣೆ ನಡೆಸಿದ್ದೇವೆ ಹೊರತು ಯಾವುದೇ ಒಡಕಿನ ಭಾವನೆಯಿಂದಲ್ಲ ಎಂದು ಸ್ಪಷ್ಟಪಡಿಸಿದ ಅವರು ಇಡೀ ಮುಸ್ಲಿಂ ಸಮಾಜದ ಬಂಧುಗಳ ನೇತೃತ್ವದಲ್ಲಿ ಈ ಸಮೀತಿ ಮುನ್ನಡೆಸಲಾಗುವುದು ಎಂದರು. 

   ಚುನಾವಣೆಯಲ್ಲಿ ಅಬ್ದುಲ್ ಅಜೀಜ್ ಮುಲ್ಲಾ, ಆಬೀದ್ ಹುಸೇನ್ ಮಾಸ್ಟರ್, ಅಬುಬಕರ ಕೊಕಟನೂರ, ಅಮಾನುಲ್ಲಾ ಮುಲ್ಲಾ, ಇಲಿಯಾಸ್ ಹಿಪ್ಪರಗಿ, ಇಮ್ರಾನ್ ಪಟಾಯಿತ, ಖಲೀಲ ಬಾಗವಾನ್, ಮಕ್ಸೂದ್ ಅಹಮ್ಮದ ಮುಲ್ಲಾ, ರಿಯಾಜ ಅಹಮ್ಮದ ಸನದಿ, ಸೈಯ್ಯದ ಅಮೀನ್ ಗದ್ಯಾಳ, ಸೈಯ್ಯದ ಗಡ್ಡೇಕರ, ವಸೀಂ ಖೆಮಲಾಪೂರ, ಜುಬೇರ ನಾಲಬಂದ ಸೇರಿದಂತೆ ಮತ್ತೋರ್ವ ಪಕ್ಷೇತರ ಅಭ್ಯಥರ್ಿ ಆಯ್ಕೆಯಾಗಿದ್ದಾರೆ 

ಸುದ್ದಿ ಓದಿ